ಉಡುಪಿ: Tulu Times | ಜನನಿಬಿಡ ಪ್ರದೇಶದಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ವ್ಯಕ್ತಿಯೊಬ್ಬರು ಯತ್ನಿಸಿದ ಘಟನೆ ನಡೆದಿದೆ. ಈತನನ್ನು ನಗರ ಪೊಲೀಸರು ಮತ್ತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಗದಗ ಮೂಲದವನೆಂದು ಗುರುತಿಸಲಾಗಿದೆ.
ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಫೆಬ್ರವರಿ 27ರವರೆಗೆ ಮಳೆ ಸಾಧ್ಯತೆ
ಕಲ್ಸಂಕ ವೃತ್ತದ ಬಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕಲ್ಸಂಕ ವೃತ್ತದ ಬಳಿ ಗಟ್ಟಿಯಾಗಿ ಕಿರುಚಿದ್ದಾನೆ. ಈ ವೇಳೆ ಅಲ್ಲಿಯೇ ಕೆಲಸದಲ್ಲಿದ್ದ ಸಂಚಾರ ಪೊಲೀಸರು ಆತನ ಕೈಯಲ್ಲಿದ್ದ ಬಾಟಲಿಯನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಒಮ್ಮೆ ಪೊಲೀಸರು ಬಂದು ಕೈಯಲ್ಲಿದ್ದ ಬಾಟಲನ್ನು ಕಸಿದುಕೊಳ್ಳಲು ಯತ್ನಿಸಿದ್ದರೂ ಆತ ಮತ್ತೆ ಬಾಟಲಿ ಕಸಿದುಕೊಂಡಿದ್ದಾನೆ. ನಗರ ಪೊಲೀಸ್ ಠಾಣೆಯ ಎಸ್‌ಐಗಳಾದ ನಾರಾಯಣ ಮತ್ತು ಗಂಗಪ್ಪ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು, ಆತನನ್ನು ಹಿಡಿದು ತಡೆದಿದ್ದಾರೆ. ಆತ ಪಾನಮತ್ತನಾಗಿದ್ದನೋ ಅಥವಾ ಮಾನಸಿಕ ಅಸ್ವಸ್ಥನೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಇದನ್ನೂ ಓದಿ: ‘ಬೇಬಿ ಮಂಕಿಯ ವೈರಲ್ ವೀಡಿಯೋ’ : ಮನುಷ್ಯನ ಭಾವನೆಯನ್ನು ತಟ್ಟಿದ ಕೋತಿ ಮರಿ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










