ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸೌತ್ 70ನೇ ಫಿಲ್ಮ್‌ಫೇರ್ ಅವಾರ್ಡ್ಸ್ : ಸಾಧನೆಗೆ ಗೌರವ

ಕೊಚ್ಚಿ : Tulu Times l ಕೇರಳದ ಕೊಚ್ಚಿಯಲ್ಲಿ ಶನಿವಾರ ನಡೆದ 70ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಸಮಾರಂಭವು ತಾರೆಯರ ಸಂಭ್ರಮಕ್ಕೆ ಸಾಕ್ಷಿಯಾಯಿತು. ಫಿಲ್ಮ್ ಫೇರ್ ಅವಾರ್ಡ್ ಸೌತ್ ಮತ್ತು ಕೇರಳ ಟೂರಿಸಂ ಸಹಭಾಗಿತ್ವದಲ್ಲಿ ಆಯೋಜಿಸಲಾದ ಈ ಪ್ರತಿಷ್ಠಿತ ಕಾರ್ಯಕ್ರಮವು Adlux International Convention Centre ನಲ್ಲಿ ನಡೆಯಿತು.

ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ದಕ್ಷಿಣ ಭಾರತೀಯ ಚಿತ್ರರಂಗದ ಅನೇಕ ತಾರೆಯರು ಮಿಂಚಿದರು. ನಟ ಅಲ್ಲೂ ಅರ್ಜುನ್ ಕಪ್ಪು ಸೂಟ್‌ನಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡರು. ನಟಿಯರಾದ ಕಾಜಲ್ ಅಗರ್ ವಾಲ್ ಮತ್ತು ನಿಧಿ ಅಗರ್ ವಾಲ್ ತಮ್ಮ ಆಕರ್ಷಕ ವೇಷಭೂಷಣದಿಂದ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮವನ್ನು ವಿಷ್ಣು ವಾರಿಯರ್, ರಂಜಿನಿ ಹರಿದಾಸ್ ಮತ್ತು ಆರ್‌ಜೆ ಮಿಥುನ್ ನಿರೂಪಿಸಿದರು. ಸಮಾರಂಭಕ್ಕೆ ಸಾಯಿ ಪಲ್ಲವಿ, ಅನುರಾಗ್ ಕಶ್ಯಪ್ ಸೇರಿದಂತೆ ಹಲವು ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಈ ವರ್ಷದ ನಾಮನಿರ್ದೇಶನ ಪಟ್ಟಿಯಲ್ಲಿ ಧನುಷ್, ವಿಜಯ್ ಸೇತುಪತಿ ಮತ್ತು ನಿರ್ದೇಶಕ ರಾಜ್ ಮೌಳಿ ಮೊದಲಾದ ಪ್ರಮುಖ ಹೆಸರುಗಳು ಸೇರಿವೆ. ದಕ್ಷಿಣ ಭಾರತೀಯ ಸಿನಿರಂಗದ ಶ್ರೇಷ್ಠ ಸಾಧನೆಗಳನ್ನು ಗೌರವಿಸುವ ಈ ಸಮಾರಂಭವು ಪ್ರತಿ ವರ್ಷವೂ ಭಾರಿ ಆಕರ್ಷಣೆಯಾಗಿರುತ್ತದೆ.

70th Filmfare Awards South: Honoring achievement – ತುಳುಟೈಮ್ಸ್

ಇದನ್ನೂ ಓದಿ : ಜಾಗತಿಕ ತೆರಿಗೆ ಹೆಚ್ಚಳ: ಮುಂದಿನ ಕ್ರಮ ಏನು?

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=J7rRgsDvSdLRaGqa

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 150

You cannot copy content of this page