ಆರೋಗ್ಯ : Tulu Times l ಇತ್ತೀಚಿನ ಅಧ್ಯಯನದ ಪ್ರಕಾರ, ಟೈಮ್-ರಿಸ್ಟ್ರಿಕ್ಟೆಡ್ ಈಟಿಂಗ್ ಅಂದರೆ ದಿನದ ನಿರ್ದಿಷ್ಟ ಸಮಯದಲ್ಲಿ ಮಾತ್ರ ಊಟ ಮಾಡುವ ವಿಧಾನವು ಮೆಟಾಬಾಲಿಕ್ ಆರೋಗ್ಯಕ್ಕೆ ಸಹಾಯಕವಾಗಬಹುದು. ಆದರೆ ಯಾವ ಸಮಯದಲ್ಲಿ ಊಟ ಮಾಡುತ್ತೇವೆ ಮತ್ತು ಎಷ್ಟು ಗಂಟೆಯೊಳಗೆ ಮಾಡುತ್ತೇವೆ ಎಂಬುದೇ ಮುಖ್ಯ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಅಧ್ಯಯನದ ಫಲಿತಾಂಶಗಳು ಹೇಳುವುದೇನೆಂದರೆ:
ಬೆಳಗ್ಗೆ ಅಥವಾ ಮಧ್ಯಾಹ್ನದಲ್ಲಿ ಊಟ ಮಾಡುವವರು ಉತ್ತಮ ಫಲಿತಾಂಶ ಕಂಡುಕೊಳ್ಳುತ್ತಾರೆ. ತೂಕ ಕಡಿಮೆಯಾಗುವುದ, ಹೊಟ್ಟೆ ಸುತ್ತಳತೆ (waist) ಇಳಿಕೆ,
BMI ಕಡಿಮೆಯಾಗುವುದು, ದೇಹದ ಕೊಬ್ಬು ಕಡಿಮೆ, ರಕ್ತದ ಒತ್ತಡ ಇಳಿಕೆ,ರಕ್ತದಲ್ಲಿನ ಸಕ್ಕರೆ ಮಟ್ಟ ಸುಧಾರಣೆಯಾಗುತ್ತದೆ. ಇದಕ್ಕೆ ಮುಖ್ಯ ಕಾರಣ, ಬೆಳಗ್ಗೆ ದೇಹದ ಇನ್ಸುಲಿನ್ ಸೆನ್ಸಿಟಿವಿಟಿ ಮತ್ತು ಮೆಟಾಬಾಲಿಕ್ ಕ್ರಿಯೆಗಳು ಹೆಚ್ಚು ಉತ್ತಮವಾಗಿರುತ್ತವೆ.
ರಾತ್ರಿ ತಡವಾಗಿ ಊಟದಿಂದ ಕಡಿಮೆ ಲಾಭ ;
ಇಂದಿನ ವೇಗದ ಜೀವನಶೈಲಿಯಲ್ಲಿ ರಾತ್ರಿ ತಡವಾಗಿ ಊಟ ಮಾಡುವುದು ಅನೇಕರಿಗೆ ಸಾಮಾನ್ಯ ಅಭ್ಯಾಸವಾಗಿದೆ. ಕೆಲಸದ ಒತ್ತಡ, ಮೊಬೈಲ್-ಟಿವಿ ವ್ಯಸನ, ಅನಿಯಮಿತ ದಿನಚರಿ ಇವುಗಳ ಕಾರಣದಿಂದ ಹಲವರು ರಾತ್ರಿ 10–11 ಗಂಟೆಯ ನಂತರವೇ ಊಟ ಮಾಡುತ್ತಾರೆ. ಆದರೆ ವೈದ್ಯರು ಮತ್ತು ಆರೋಗ್ಯ ತಜ್ಞರ ಪ್ರಕಾರ ಈ ಅಭ್ಯಾಸ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ತೂಕ ಹೆಚ್ಚಾಗುವುದಕ್ಕೂ ಇದು ಪ್ರಮುಖ ಕಾರಣ. ರಾತ್ರಿ ಮೆಟಾಬಾಲಿಸಂ ನಿಧಾನವಾಗಿರುವುದರಿಂದ ಆಹಾರದಿಂದ ಬಂದ ಕ್ಯಾಲೊರಿಗಳು ಶಕ್ತಿಯಾಗಿ ಬಳಕೆಯಾಗದೇ ಕೊಬ್ಬಾಗಿ ಸಂಗ್ರಹವಾಗುತ್ತವೆ. ಇದರಿಂದ ಹೊಟ್ಟೆ ಭಾಗದಲ್ಲಿ ಕೊಬ್ಬು ಹೆಚ್ಚುವುದು, ದೇಹದ ತೂಕ ಏರಿಕೆ ಕಾಣುವುದು ಸಾಮಾನ್ಯ. ದೀರ್ಘಕಾಲ ಈ ಅಭ್ಯಾಸ ಮುಂದುವರಿದರೆ ಮಧುಮೇಹ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವೂ ಹೆಚ್ಚಬಹುದು.
ಆರೋಗ್ಯಕರ ಜೀವನಕ್ಕಾಗಿ ರಾತ್ರಿ ಊಟವನ್ನು ಮಲಗುವ ಸಮಯಕ್ಕಿಂತ ಕನಿಷ್ಠ ಎರಡು ಅಥವಾ ಮೂರು ಗಂಟೆ ಮೊದಲು ಮುಗಿಸುವುದು ಉತ್ತಮ. ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಆಯ್ಕೆ ಮಾಡುವುದು ಇನ್ನಷ್ಟು ಲಾಭಕಾರಿ. ಸಣ್ಣ ಅಭ್ಯಾಸ ಬದಲಾವಣೆಗಳಿಂದಲೇ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ತಜ್ಞರ ಸಲಹೆ.
Time-Restricted Eating: When is the best time to eat? – ತುಳುಟೈಮ್ಸ್
ಇದನ್ನೂ ಓದಿ : ಇಂಡಿಯಾ AI ಇಂಪ್ಯಾಕ್ಟ್ ಸಮಿಟ್ 2026 ಉದ್ಘಾಟನೆ: ವಿಕಸಿತ ಭಾರತ ದೃಷ್ಟಿಗೆ ಮತ್ತೊಂದು ಹೆಜ್ಜೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wrBMy_DIHWs?si=ORm9C5w8jgSwevEZ











