ಬ್ರೇಕಿಂಗ್ ನ್ಯೂಸ್
ದೇಶ

Anthropic ಕಂಪನಿಯ ಕಛೇರಿ ಬೆಂಗಳೂರಿನಲ್ಲಿ  ಆರಂಭ : ಎಐ

ಬೆಂಗಳೂರು : Tulu Times l ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಪ್ರಮುಖ ಕಂಪನಿಯಾದ Anthropic ಸೋಮವಾರ ಬೆಂಗಳೂರಿನಲ್ಲಿ ತನ್ನ ಹೊಸ ಕಚೇರಿಯನ್ನು ಅಧಿಕೃತವಾಗಿ ಆರಂಭಿಸಿದೆ. ಇದು ಭಾರತದಲ್ಲಿ ಕಂಪನಿಯ ದೊಡ್ಡ ವಿಸ್ತರಣೆಯ ಹೆಜ್ಜೆಯಾಗಿದ್ದು, ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಕಂಪನಿಯ ಎರಡನೇ ಕಚೇರಿಯಿದೆ ಎನ್ನಲಾಗಿದೆ.

ದೇಶದಲ್ಲಿ ಅಪ್ಲಿಕೇಶನ್ ನಿರ್ಮಾಣ, ಸಿಸ್ಟಮ್‌ಗಳ ನವೀಕರಣ ಹಾಗೂ ಉತ್ಪಾದನಾ ಸಾಫ್ಟ್‌ವೇರ್ ಅಭಿವೃದ್ಧಿಯಂತಹ ತಾಂತ್ರಿಕ ಕೆಲಸಗಳಲ್ಲಿ ತೊಡಗಿರುವ ಡೆವಲಪರ್ ಸಮುದಾಯದ ಬಳಕೆ ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ. ಭಾರತದಲ್ಲಿ ಜವಾಬ್ದಾರಿಯುತ AI ಬಳಕೆಯನ್ನು ಉತ್ತೇಜಿಸಲು ಉದ್ಯಮ, ಶಿಕ್ಷಣ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಹೊಸ ಪಾಲುದಾರಿಕೆಗಳನ್ನು ಘೋಷಿಸಲಾಗಿದೆ. ಭಾರತವು ವಿಶ್ವದ ಅತ್ಯಂತ ಭರವಸೆಯ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಕಂಪನಿ ಹೇಳಿದೆ.

ಕಂಪನಿಯ ಭಾರತ ವ್ಯವಸ್ಥಾಪಕ ನಿರ್ದೇಶಕಿ ಇರಿನಾ ಘೋಸ್ ಅವರು, ಭಾರತದಲ್ಲಿ ಅತ್ಯುತ್ತಮ ತಾಂತ್ರಿಕ ಪ್ರತಿಭೆ, ದೊಡ್ಡ ಮಟ್ಟದ ಡಿಜಿಟಲ್ ಮೂಲಸೌಕರ್ಯ ಮತ್ತು ತಂತ್ರಜ್ಞಾನದಿಂದ ಜನರ ಜೀವನ ಸುಧಾರಿಸಿದ ಅನುಭವ ಇದೆ. ಈ ಎಲ್ಲವು AI ಪ್ರಯೋಜನಗಳನ್ನು ಹೆಚ್ಚು ಜನರಿಗೆ ತಲುಪಿಸಲು ನೆರವಾಗುತ್ತದೆ, ಎಂದು ತಿಳಿಸಿದ್ದಾರೆ.

ಭಾರತೀಯ ಭಾಷೆಗಳತ್ತ ಗಮನ ;

ಭಾರತದಲ್ಲಿ ಇಂಗ್ಲಿಷ್ ಹೊರತಾದ ಭಾಷೆಗಳಲ್ಲಿ AI ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕಂಪನಿ ಹಿಂದಿ, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಪಂಜಾಬಿ, ಗುಜರಾತಿ, ಕನ್ನಡ, ಮಲಯಾಳಂ ಮತ್ತು ಉರ್ದು ಸೇರಿ 10 ಪ್ರಮುಖ ಭಾಷೆಗಳ ತರಬೇತಿ ಡೇಟಾವನ್ನು ಸಂಗ್ರಹಿಸಿ ಮಾದರಿಗಳನ್ನು ಸುಧಾರಿಸಿದೆ.

AI ಮಾದರಿಗಳ ಕಾರ್ಯಕ್ಷಮತೆಯನ್ನು ಕೃಷಿ ಮತ್ತು ಕಾನೂನು ಕ್ಷೇತ್ರಗಳಂತಹ ಸ್ಥಳೀಯ ಅಗತ್ಯಗಳಿಗೆ ಹೊಂದುವಂತೆ ಪರೀಕ್ಷಿಸಲು Karya, Collective Intelligence Project, Digital Green ಹಾಗೂ Adalat AI ಮುಂತಾದ ಸಂಸ್ಥೆಗಳೊಂದಿಗೆ ಸಹಕಾರ ಮಾಡಲಾಗುತ್ತಿದೆ. ಈ ಕ್ರಮಗಳಿಂದ ಭಾರತೀಯ ಹಾಗೂ ದೇಶದ ಉದ್ಯಮಗಳಿಗೆ ಇನ್ನಷ್ಟು ಉಪಯುಕ್ತವಾಗುವ AI ಮಾದರಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ ಎಂದು ಕಂಪನಿ ತಿಳಿಸಿದೆ.

Anthropic company opens office in Bengaluru: AI – ತುಳುಟೈಮ್ಸ್

ಇದನ್ನೂ ಓದಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫೆಬ್ರವರಿ 17ರಂದು ಕೋಲಾರದ ವೆಂಘಲ್‌ನಲ್ಲಿ ಹೆಲಿಕಾಪ್ಟರ್ ಘಟಕ ಉದ್ಘಾಟನೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=dZaIK_IPZVE5D_OS

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page