ಬೆಳ್ತಂಗಡಿ:Tulu Times | ರಸ್ತೆ ಕಾಂಕ್ರಿಟೀಕರಣ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದ್ದಾರೆ.
ಕಟ್ಟು ಎಂಬ ಸ್ಥಳದಲ್ಲಿ 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ನಿರ್ಮಾಣ ಕಾಮಗಾರಿಗೆ ಹರೀಶ್ ಪೂಂಜ ಚಾಲನೆ ಜೊತೆಗೆ ಮಲವಂತಿಗೆ ಗ್ರಾಮದ ಕೊಲ್ಲಿ-ಕಟ್ಟು-ಬಾಳೆಹಿತ್ತಿಲು ರಸ್ತೆ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ, ಮಲವಂತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಜೈನ್, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಯಚಂದ್ರ, ಗ್ರಾಮ ಪಂಚಾಯತ್ ಸದಸ್ಯರುಗಳು, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರುಗಳು, ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.
ಪುತ್ತೂರಿನ ಮಹಾಲಿಂಗೇಶ್ವರ ದೇವಳಕ್ಕೆ ₹7 ಲಕ್ಷದ ಬೆಳ್ಳಿ ಛತ್ರಿ ಕೊಡುಗೆ
ಪುತ್ತೂರು: ಪುತ್ತೂರಿನ ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಳಕ್ಕೆ ಕೇಶವ ಭಟ್ ಕೆ.ಕೂವೆತೋಟ ಮತ್ತು ಕೆ.ಶಾಂತಕುಮಾರಿ ದಂಪತಿಗಳು ಮಹಾಲಿಂಗೇಶ್ವರ ದೇವಾಲಯಕ್ಕೆ 27 ಲಕ್ಷದ ಬೆಳ್ಳಿ ಛತ್ರಿ ಕೊಡುಗೆ ನೀಡಿದ್ದಾರೆ.
ಮಹಾಲಿಂಗೇಶ್ವರ ದೇವಳಕ್ಕೆ 2.640 ಕೆ.ಜಿ.ಯ, ₹ 7ಲಕ್ಷ ಮೌಲ್ಯದ ಬೆಳ್ಳಿ ಕೊಡೆಯನ್ನು ನೀಡಿದ್ದಾರೆ. ಕೂವೆತೋಟ ಮನೆತನದ ಕೇಶವ ಭಟ್ ಕೆ.ಕೂವೆತೋಟ ಮತ್ತು ಕೆ.ಶಾಂತಕುಮಾರಿ ದಂಪತಿ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿಸಿದ ನಂತರ ಬೆಳ್ಳಿ ಕೊಡೆಯನ್ನು ಸಮರ್ಪಣೆ ಮಾಡಿದರು. ನಂತರ ಮಾತನಾಡಿ, ದೇವಳದ ಒಂದು ಕಟ್ಟೆಯ ಪುನರ್ ನಿರ್ಮಾಣಕ್ಕೆ ₹ 25 ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಕೇಶವ ಭಟ್ ದಂಪತಿಯನ್ನು ಗೌರವಿಸಿ, ಪ್ರಧಾನ ಅರ್ಚಕ ವಸಂತ ಕೆದಿಲಾಯ ದೇವರ ಪ್ರಸಾದ ನೀಡಿದರು. ಇನ್ನು ಶಿಲಾನ್ಯಾಸದ ವೇಳೆ ₹ 5 ಲಕ್ಷವನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಈಶ್ವರ ಭಟ್, ವಿನಯ ಸುವರ್ಣ, ಪುತ್ತೂರು ನಗರಸಭೆಯ ನಿಕಟಪೂರ್ವ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ವಿನಯ ತಂತ್ರಿ, ಬೆಳ್ಳಿಯ ಛತ್ರಿ ನಿರ್ಮಾಣ ಮಾಡಿದ ಜನಾರ್ದನ ಆಚಾರ್ಯ ಕಾಟುಕುಕ್ಕೆ, ಪುತ್ತೂರು ಪರ್ಲಡ್ಕ ನಿವಾಸಿ ನಿರಂಜನ ಆಚಾರ್ಯ, ಕೇಶವ ದಂಪತಿಯ ಸಂಬಂಧಿಕ ರಾಧೇಶ್ಯಾಮ್ ಅಜೇಯನಗರ ಇದ್ದರು.
Belthangady: Harish Poonja launches road concreting & bridge construction work!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











