ಕರ್ನಾಟಕ: Tulu Times | ಫೆಬ್ರವರಿ 15ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಶಿವ ಮತ್ತು ಪಾರ್ವತಿ ದೇವಿ ವಿವಾಹವಾದರು ಎನ್ನುವ ಅಪಾರವಾದ ನಂಬಿಕೆ ಇದೆ.
ಇನ್ನು ಈ ದಿನ ರಾತ್ರಿ ಪೂಜೆಗೆ, ಉಪವಾಸವನ್ನು ಮಾಡಲಾಗುತ್ತದೆ. 2026ರಲ್ಲಿ ಮಹಾಶಿವರಾತ್ರಿ ಪೂಜೆಯನ್ನು ಮಾಡುವುದು ಹೇಗೆ.? 2026ರ ಮಹಾಶಿವರಾತ್ರಿ ಪೂಜೆ ಮಹತ್ವಗಳೇನು ಅನ್ನೋದನ್ನು ನಾವು ತಿಳಿಯಲೇಬೇಕು. ಹಿಂದೂ ಹಬ್ಬಗಳಲ್ಲಿ ಮಹಾಶಿವರಾತ್ರಿ ಪವಿತ್ರ ಹಬ್ಬ. ಭಕ್ತರು ಈ ಹಬ್ಬವನ್ನು ಬಹಳ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ದೇಶಾದ್ಯಂತ ಪ್ರತಿ ಹಿಂದೂ ಧರ್ಮದ ಜನರು ಭಕ್ತಿಯಿಂದ ಆಚರಿಸುವ ಹಬ್ಬವಾಗಿದೆ. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.
ಶಿವರಾತ್ರಿ ಉಪವಾಸ ವ್ರತವನ್ನು ಮಾಡುವ ಮೂಲಕ ಭಕ್ತರು ಸ್ವಯಂ ನಿಯಂತ್ರಣ ಮತ್ತು ಶಿಸ್ತನ್ನು, ಧ್ಯಾನದ ಮೂಲಕ ಆಂತರಿಕ ಅರಿವನ್ನು ಮತ್ತು ಜ್ಞಾನೋದಯ, ಬುದ್ಧಿವಂತಿಕೆಯನ್ನು ಪಡೆದುಕೊಳ್ಳುವುದರ ಜೊತೆಗೆ ಅಹಂ ಮತ್ತು ನಕಾರಾತ್ಮಕತೆಯಿಂದ ಮುಕ್ತರಾಗುತ್ತಾರೆ.ಈ ರಾತ್ರಿಯ ಪ್ರಾಮಾಣಿಕ ಪೂಜೆಯು ಭಕ್ತರು ಅಜ್ಞಾನವನ್ನು ಹೋಗಲಾಡಿಸಲು ಮತ್ತು ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ. ಮಹಾಶಿವರಾತ್ರಿ ದಿನದಂದು ರಾತ್ರಿ ಜಾಗರಣೆಯನ್ನು ಮಾಡುವುದರಿಂದ ಮನಸ್ಸು ಮತ್ತು ಆತ್ಮವು ಜಾಗೃತಗೊಳ್ಳುವುದು ಎನ್ನಲಾಗುತ್ತದೆ.
Do you know what is the one thing that must be done on Mahashivratri?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











