ಬೆಳ್ತಂಗಡಿ:Tulu Times | ಹಲ್ಲೆ ಪ್ರಕರಣದಲ್ಲಿ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನುಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿಯ ಪಾರೆಂಕಿ ಗ್ರಾಮದ ಆಲ್ವಿನ್ ರೊಡ್ರಿಗಸ್ (53) ಬಂಧಿತನಾಗಿದ್ದಾನೆ. ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ಈತ 2013 ರಲ್ಲಿ ಚಿತ್ರಶೇಖರ ಮಡಂತ್ಯಾರ್ ಎಂಬರಿಗೆ, ಹಲ್ಲೆ ಮಾಡಿದ್ದ. ಈತ ಅಕ್ರ 65/2013 ಕಲಂ 324,504 IPC ಪ್ರಕರಣದಲ್ಲಿ ನ್ಯಾಯಲಯಕ್ಕೆ ಹಾಜರಾಗದೆ ಇದ್ದ ಎನ್ನಲಾಗಿದೆ. ಈತನನ್ನು ಫೆ.13 ರಂದು ಸಂಪಿಗೆ ರಾಮನಗರ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: ಪುರಿ ಕರಾವಳಿಯಲ್ಲಿ ಕೋನ್ ಶಂಖಗಳ ಸಾಗರ: ಅಪರೂಪದ ಪ್ರಕೃತಿ ಅದ್ಭುತ, ಆದರೆ ಎಚ್ಚರ ಅಗತ್ಯ
ಹೊಸಕೋಟೆ ಹೊರವಲಯದಲ್ಲಿ ಭೀಕರ ಸರಣಿ ಅಪಘಾತ: ಏಳು ಮಂದಿ ಸ್ಥಳದಲ್ಲೇ ಸಾವು
ಬೆಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ, ಬೆಂಗಳೂರಿನ ಹೊರವಲಯದ ಹೊಸಕೋಟೆ ಸಮೀಪ ಶುಕ್ರವಾರ ಮುಂಜಾನೆ ಸಂಭವಿಸಿದ ಬಹುವಾಹನ ಸರಣಿ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತವು ಹೊಸಕೋಟೆ ಸಮೀಪದ ಎಂ. ಸತ್ಯವರ ಗ್ರಾಮದ ಬಳಿ ಇರುವ ಹೊಸಕೋಟೆ-ದಾಬಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೊಸಕೋಟೆಯಿಂದ ದೇವನಹಳ್ಳಿಯತ್ತ ಸಾಗುತ್ತಿದ್ದ ಎಸ್‌ಯುವಿ ಕಾರು ಮೊದಲು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಂಭಿಕ ಡಿಕ್ಕಿಯ ಬಳಿಕ ಎಸ್‌ಯುವಿ ಚಾಲಕ ನಿಯಂತ್ರಣ ಕಳೆದುಕೊಂಡು ಮುಂದೆ ಸಾಗುತ್ತಿದ್ದ ಟ್ಯಾಂಕರ್ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾನೆ. ಬಳಿಕ ಇನ್ನೊಂದು ಕಾರು ಕೂಡ ಅಪಘಾತದಲ್ಲಿ ಸಿಲುಕಿದ್ದು ಭೀಕರ ಸರಣಿ ಅಪಘಾತ ಸಂಭವಿಸಿದೆ. ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಟ್ರೆಂಥ್ ಟ್ರೈನಿಂಗ್ ನಿಂದ ಮೆದುಳಿನ ವೃದ್ಧಾಪ್ಯ ನಿಧಾನಗೊಳ್ಳಬಹುದು: ಹೊಸ ಅಧ್ಯಯನ
ಮೃತರು ಬೆಂಗಳೂರಿನ ಕೊತ್ತನೂರು ನಿವಾಸಿಗಳಾಗಿರಬಹುದು ಎಂದು ಶಂಕಿಸಲಾಗಿದ್ದು, ಅವರ ಗುರುತು ಇನ್ನೂ ದೃಢಪಡಿಸಲಾಗಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Belthangady: Accused who had been absconding for 13 years arrested- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











