ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕರ್ನಾಟಕದಲ್ಲಿ ದಾಖಲೆ ಮಟ್ಟದ ಅಂಗಾಂಗ ದಾನ‌ : ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನ

ಬೆಂಗಳೂರು : Tulu Times | ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪುತ್ತಾರೆ. ಆದರೆ, ಲಭ್ಯವಿರುವ ಅಂಗಾಂಗ ದಾನಿಗಳ ಸಂಖ್ಯೆ ಕಡಿಮೆ. ಒಬ್ಬ ಮರಣೋತ್ತರ ಅಂಗಾಂಗ ದಾನ‌ 8ಕ್ಕೂ ಹೆಚ್ಚು ಜನರ ಜೀವ ಉಳಿಸಬಹುದು. ಇದು ದಾನದ ಶಕ್ತಿಯನ್ನು ತೋರಿಸುತ್ತದೆ. ಅದಕ್ಕಾಗಿ ಅಂಗಾಂಗ ದಾನ ಮಾಡುವವರಿಗೆ ಶ್ರೇಷ್ಠ ಸ್ಥಾನವನ್ನು ನೀಡಲಾಗುತ್ತದೆ.

ಕರ್ನಾಟಕ ತನ್ನ ಹಿಂದಿನ ದಾಖಲೆಯನ್ನು ಮೀರಿಸಿದೆ ;

2025ರಲ್ಲಿ ಕರ್ನಾಟಕವು 198 ಅಂಗಾಂಗ ದಾನಗಳನ್ನು ದಾಖಲಿಸಿದ್ದು ದೇಶದಲ್ಲಿ ಅತಿ ಹೆಚ್ಚು ಅಂಗಾಂಗ ದಾನ ನಡೆದ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಸಾಧನೆ ರಾಜ್ಯದ ಅಂಗಾಂಗ ದಾನದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2023ರಲ್ಲಿ ರಾಜ್ಯದಲ್ಲಿ 178 ಅಂಗಾಂಗ ದಾನಗಳು ನಡೆದಿದ್ದವು. 2025ರಲ್ಲಿ 198 ದಾನಗಳೊಂದಿಗೆ ಕರ್ನಾಟಕ ತನ್ನ ಹಿಂದಿನ ದಾಖಲೆಯನ್ನು ಮೀರಿಸಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯ ಅಂಗಾಂಗ ಸಂಸ್ಥೆ ರಾಜ್ಯದಲ್ಲಿ ಹೊಸ ಮಾನದಂಡ ;

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಈ ಸಾಧನೆಯೊಂದಿಗೆ ಕರ್ನಾಟಕವು 2025ರ ಅಂಗಾಂಗ ದಾನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದೆ. ಇದರಿಂದ ರಾಜ್ಯ ಅಂಗಾಂಗ ಸಂಸ್ಥೆ ರಾಜ್ಯದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ರಾಜ್ಯವಾರು ಅಂಕಿಅಂಶಗಳ ಪ್ರಕಾರ, ತಮಿಳುನಾಡು 267 ಅಂಗಾಂಗ ದಾನಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ತೆಲಂಗಾಣ 205 ದಾನಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಕರ್ನಾಟಕ 198 ದಾನಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮತ್ತು ಗುಜರಾತ್ ಕ್ರಮವಾಗಿ 153 ಮತ್ತು 152 ಅಂಗಾಂಗ ದಾನಗಳನ್ನು ವರದಿ ಮಾಡಿವೆ. Record level of organ donation in Karnataka: Third position in the country – ತುಳು ಟೈಮ್ಸ್

ಇದನ್ನೂ ಓದಿ :‘ದುಬಾರೆ’ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಕೇಂದ್ರ : ತೂಗು ಸೇತುವೆ ನಿರ್ಮಾಣಕ್ಕೆ ಪ್ಲಾನ್

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=Sca-qvxtKSUITymq

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page