ಬ್ರೇಕಿಂಗ್ ನ್ಯೂಸ್
ಕರ್ನಾಟಕ

2026ರಲ್ಲಿ ಬಾಬಾ ವಂಗಾ ಅಚ್ಚರಿಯ ಭವಿಷ್ಯವಾಣಿಗಳೇನು ಗೊತ್ತಾ..?

ಕರ್ನಾಟಕ: Tulu Times | 2026ರಲ್ಲಿ ಏನೆಲ್ಲಾ ಬದಲಾವಣೆಗಳು ನಡೆಯಲಿವೆ ಎಂಬುವುದನ್ನು ಬಾಬಾ ವಂಗಾ  ಭವಿಷ್ಯವಾಣಿ ನುಡಿದಿದ್ದಾರೆ.  ಬಾಬಾ ಅವರ ಭವಿಷ್ಯವಾಣಿ ಪ್ರಕಾರ, ಮುಂಬರುವ ವರ್ಷ ಗಂಭೀರ ಬದಲಾವಣೆಗಳು ಮತ್ತು ಸವಾಲುಗಳಿಗೆ ವೇದಿಕೆಯಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದ್ವೇಷ ಭಾಷಣ ನಿಯಂತ್ರಣ ಕಾನೂನಿನಡಿ ಕ್ರಮಕ್ಕೆ ಒತ್ತಾಯ: ಗೋವಿಂದ ಕಾರಜೋಳ

ಬಾಬಾ ವಂಗಾ  ಅಂದ್ರೆ ಯಾರು..?

ಬಾಬಾ ವಂಗಾ ಅವರ ನಿಜವಾದ ಹೆಸರು ವಾಂಜೆಲಿಯಾ ಪಾಂಡವ ಡಿಮಿಟ್ರೋವಾ.  1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡರು.  1996ರಲ್ಲಿ ಅವರ ಮರಣಕ್ಕೂ ಮೊದಲು, ರಾಜಕುಮಾರಿ ಡಯಾನಾ ಸಾವು, 2001ರ ನ್ಯೂಯಾರ್ಕ್ ಅವಳಿ ಗೋಪುರಗಳ ಘಟನೆ, ಮುಂಬೈ ಭಯೋತ್ಪಾದಕ ದಾಳಿ, ಚೀನಾದ ಉದಯ ಮತ್ತು ರಷ್ಯಾ-ಉಕ್ರೇನ್ ಯುದ್ಧದಂತಹ ಅನೇಕ ಪ್ರಮುಖ ಘಟನೆಗಳನ್ನು ಮುಂಚಿತವಾಗಿ ಭವಿಷ್ಯ ನುಡಿದಿದ್ದರು.

2026 ರಲ್ಲಿ ದೇಶದಲ್ಲಿ ಏನೆಲ್ಲ ಬದಲಾವಣೆ ಸಾಧ್ಯ..?

ಬಾಬಾ ವಂಗಾ 2026 ರ ಭವಿಷ್ಯವಾಣಿಗಳು ಏನನ್ನು ಹೇಳುತ್ತವೆ ಅನ್ನೋದನ್ನು ನೋಡೋದಾದ್ರೆ,  ತೀವ್ರ ಆರ್ಥಿಕ ಬಿಕ್ಕಟ್ಟು, ಚಿನ್ನದ ಬೆಲೆ ಏರಿಕೆಯಾಗಲಿವೆ.  2026 ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು, ಬ್ಯಾಂಕ್ ವೈಫಲ್ಯಗಳು ಮತ್ತು ಅಧಿಕ ಹಣದುಬ್ಬರ ಉಂಟಾಗಬಹುದು ಎಂದಿದ್ದಾರೆ. ಭೀಕರ ನೈಸರ್ಗಿಕ ವಿಕೋಪಗಳು: 2026ರಲ್ಲಿ ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ತೀವ್ರ ಹವಾಮಾನ ಬದಲಾವಣೆಗಳ ಸಾಧ್ಯತೆಯಿದೆ. ವಿಶ್ವದ ಭೂಪ್ರದೇಶದಲ್ಲಿ ಸುಮಾರು ಏಳರಿಂದ ಎಂಟು ಪ್ರತಿಶತವು ಈ ವಿಕೋಪಗಳಿಗೆ ತುತ್ತಾಗುತ್ತವೆ ಎಂದಿದ್ದಾರೆ. 2026ರ ಹೊತ್ತಿಗೆ ಕೃತಕ ಬುದ್ಧಿಮತ್ತೆ ಪ್ರಮುಖ ಸ್ಥಾನದಲ್ಲಿರುತ್ತವೆ. ವಿಶ್ವ ವ್ಯವಹಾರಗಳನ್ನು ನೋಡಿಕೊಳ್ಳುವ ಒಬ್ಬ ಶಕ್ತಿಶಾಲಿ ನಾಯಕ ರಷ್ಯಾದಿಂದ ಹೊರಹೊಮ್ಮುತ್ತಾನೆ ಎಂದಿದ್ದಾರೆ. ಚೀನಾದ ಪ್ರಾಬಲ್ಯ, ಭೌಗೋಳಿಕ ರಾಜಕೀಯ ಬದಲಾವಣೆಯಾಗಲಿದೆ. ನವೆಂಬರ್ 2026 ರಲ್ಲಿ ಭೂಮಿಯ ವಾತಾವರಣ ಪ್ರವೇಶಿಸುವ ದೊಡ್ಡ ಬಾಹ್ಯಾಕಾಶ ನೌಕೆಯ ಮೂಲಕ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇಂಧನ ಕೊರತೆಯ ಸಮಸ್ಯೆಗಳ ನಡುವೆ ಪ್ರಪಂಚದಾದ್ಯಂತದ ದೇಶಗಳು ಹಸಿರು ಶಕ್ತಿಗಳು ಪರಿಣಾಮ ಬೀರಲಿವೆ.

Do you know what Baba Vanga’s surprising predictions are for 2026?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page