ಆರೋಗ್ಯ : Tulu Times | ಮೊಟ್ಟೆಯಲ್ಲಿ ನೈಟ್ರೋಫ್ಯೂರಾನ್ ಅಂಶ ಇದ್ರೆ ಕ್ಯಾನ್ಸರ್ ಸಾಧ್ಯತೆಯಿದೆ ಎಂದು ಕಿದ್ವಾಯಿ ಅಂಕಾಲಜಿಸ್ಟ್ , ಅಪರ ನಿರ್ದೇಶಕ ಡಾ. ನವೀನ್ ಹೇಳಿಕೆ ನೀಡಿದ್ದರು. ಇದರ ಬಗ್ಗೆ ಬಾರೀ ಚರ್ಚೆಗಳಾಗಿದ್ದು ಇದು ಮಹಿಳೆಯರಿಗೆ ಓರಲ್ , ಪುರುಷರಿಗೆ ಹೊಟ್ಟೆ ಕ್ಯಾನ್ಸರ್ ಬರುವ ಸಾಧ್ಯತೆ, ಆದ್ರೆ ಮೊಟ್ಟೆಯಿಂದ ನೇರವಾಗಿ ನೈಟ್ರೋಫ್ಯೂರಾನ್ ಬರಲ್ಲ. ಆದ್ರೆ ಕೋಳಿಗೆ ನೈಟ್ರೋಫ್ಯೂರಾನ್ ಬಳಕೆ ಮಾಡಲಾಗುತಿತ್ತುರಿಂದ ಇದು ಮೊಟ್ಟೆಯ ಮೇಲೆಯೂ ಪ್ರಭಾವ ಬೀರಲಿದೆ ಎನ್ನಲಾಗಿದೆ.
ಯಾವುದೋ ಒಂದು ಲ್ಯಾಬ್ ಟೆಸ್ಟ್ ನಲ್ಲಿ ಮೊಟ್ಟೆಯಲ್ಲಿ ನೈಟ್ರೋಫ್ಯೂರಾನ್ ಅಂಶ ಇದೆ ಎಂಬುದಾಗಿ ಬಂದಿರುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಆದರೆ ಮೊಟ್ಟೆಯು ತುಂಬಾನೇ ಸೇಫ್. ಮೊಟ್ಟೆಯಿಂದ ಯಾವುದೇ ತೆರನಾದ ಕ್ಯಾನ್ಸರ್ ಬರೋದಿಲ್ಲ. ಇದರ ಬಗ್ಗೆ ಯಾವುದೇ ಮಾಹಿತಿಯೂ ಇದುವರೆಗೆ ಬಂದಿಲ್ಲ. ಆದರೆ ಕೋಳಿಗೆ ನೈಟ್ರೋಫ್ಯೂರಾನ್ ಆ್ಯಂಟಿ ಬಯೋಟಿಕ್ ನ್ನು ಇಂಜೆಕ್ಟ್ ಮಾಡಲಾಗುತ್ತಿತ್ತು. ಇದರಿಂದ ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಆದರೆ ಈಗ ಇದನ್ನು ಇಂಜೆಕ್ಟ್ ಮಾಡೋದಿಲ್ಲ ಅಂತ ಡಾ.ನವೀನ್ ಹೇಳಿಕೆ ನೀಡಿದ್ದಾರೆ.
ರೋಗಿಗಳು ಚೇತರಿಕೆ ಕಾಣಲು ಮೊಟ್ಟೆಯನ್ನು ನಿಯಮಿತವಾಗಿ ಸೇವಿಸಬೇಕು ;
ಮೊಟ್ಟೆಗಳು ಕ್ಯಾನ್ಸರ್ ಉಂಟುಮಾಡುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯ ಪುರಾವೆಗಳಿಲ್ಲ. ಮೊಟ್ಟೆಗಳು ಪೌಷ್ಟಿಕಾಂಶದಿಂದ ಸಮೃದ್ಧವಾದ ಆಹಾರವಾಗಿದ್ದು, ಉತ್ತಮ ಗುಣಮಟ್ಟದ ಪ್ರೋಟೀನ್, ಅತ್ಯವಶ್ಯಕ ಅಮೈನೊ ಆಮ್ಲ, ವಿಟಮಿನ್, ಕೋಲಿನ್ ಮತ್ತು ಸೂಕ್ಷ್ಮ ಖನಿಜಗಳನ್ನು ಒಳಗೊಂಡಿರುತ್ತದೆ. ಕೀಮೋಥೆರಪಿ ಅಥವಾ ರೇಡಿಯೊಥೆರಪಿ ಪಡೆಯುತ್ತಿರುವ ರೋಗಿಗಳನ್ನೂ ಒಳಗೊಂಡಂತೆ, ಆಸ್ಪತ್ರೆಯ ಆಹಾರ, ಪೌಷ್ಟಿಕಾಂಶಗಳು ಮತ್ತು ಶಸ್ತ್ರಚಿಕಿತ್ಸೆಯ ನಂತರದ ರೋಗಿಗಳು ಚೇತರಿಕೆ ಕಾಣಲು ಮೊಟ್ಟೆಯನ್ನು ನಿಯಮಿತವಾಗಿ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿ ಸುಮ್ಮನೆ ಅನ್ನೋದನ್ನು ವೈದ್ಯರು ಜನರಿಗೆ ಮನದಟ್ಟು ಮಾಡಿರುತ್ತಾರೆ.
Eggs do not cause cancer: There is no medical evidence for this – ತುಳು ಟೈಮ್ಸ್
ಇದನ್ನೂ ಓದಿ :ಮನ್ರೇಗಾ ಯೋಜನೆ ಬದಲಾಗಿ ಹೊಸ ಮಸೂದೆ ಮಂಡನೆ : ವಿಪಕ್ಷಗಳ ವಿರೋಧ
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/P32eyH-HgoY?si=WfJ0tXoxf2iwfNLA











