ಬೆಳ್ತಂಗಡಿ : ತುಳುಟೈಮ್ಸ್ | ಬೆಳ್ತಂಗಡಿ ತಾಲೂಕಿನ ಕಾರಿಂಜ ಎಂಬಲ್ಲಿ ಶ್ರೀ ವನಶಾಸ್ತಾರ ವೀರಭದ್ರ ದೇವಸ್ಥಾನ ನಿರ್ಮಾಣವಾಗುತ್ತಿದೆ.ದೇವಸ್ಥಾನದ ಜೀರ್ಣೋದ್ದಾರದ ಕೆಲಸ ಕಾರ್ಯಗಳನ್ನು ವೀಕ್ಷಿಸಲು ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಶ್ರೀ ರಕ್ಷಿತ್ ಶಿವರಾಂ ಭೇಟಿ ನೀಡಿದ್ದರು.
ದೇವಸ್ಥಾನ ನಿರ್ಮಾಣದ ಕೆಲಸ ಕಾರ್ಯಗಳನ್ನು ವೀಕ್ಷಿಸಿ,ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಿನ ಸರಕಾರಿ ವಕೀಲರಾದ ಮನೋಹರ ಇಳಂತಿಲ,ಕೊರಿಂಜ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ದಾಸಪ್ಪ ಗೌಡ ಕೋಡಿಯಡ್ಕ,ವೆಂಕಪ್ಪ ಬರಮೇಲು, ಟ್ರಸ್ಟ್ ನ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ ಕಾರಿಂಜ, ಗ್ರಾಮ ಪಂಚಾಯತ್ ಸದಸ್ಯರಾದ ಯಶವಂತ ಕಾರಿಂಜ,ಉಮಾವತಿ ಕೋಡಿಯಡ್ಕ ಉಪಸ್ಥಿತರಿದ್ದರು.ಬ್ರಹ್ಮ ಕಲಶೋತ್ಸವ ಕಾರ್ಯದರ್ಶಿ ತಾರನಾಥ ಸ್ವಾಗತಿಸಿ ಧರ್ನಪ್ಪ ನಾಯ್ಕ ಧನ್ಯವಾದ ಸಮರ್ಪಿಸಿದರು.
tulu times
Karinja Sri Vanashastara Temple-Honorary Advisor Sri Rakshit Shivaram visited.ಇದನ್ನೂ ಓದಿ :ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ!? ಬ್ಯಾನ್ ಆಗುತ್ತಾ?
ವೀಡೀಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











