ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಟಿ – 20, 2026 ರ ಕ್ರಿಕೆಟ್ ವೀಕ್ಷಣೆಗೆ ಇಂದೇ ಟಿಕೆಟ್ ಬುಕ್ ಮಾಡಿ !

ಟಿ‌20 ವಿಶ್ವಕಪ್ 2026 : Tulu Times | ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ರೋಚಕ, ವೇಗದ ಮತ್ತು ಮನರಂಜನೀಯ ಟೂರ್ನಿಗಳಲ್ಲಿ ಒಂದು ಈ ಟಿ20 ವಿಶ್ವಕಪ್. ಕೇವಲ 20 ಓವರ್‌ಗಳ ಸೀಮಿತ ಪಂದ್ಯವಾಗಿರುವುದರಿಂದ, ಪ್ರತಿ ಚೆಂಡಿಗೂ ಮಹತ್ವವಿದ್ದು, ಕ್ಷಣಕ್ಷಣವೂ ಪಂದ್ಯ ಬದಲಾಗುವ ಸಾಧ್ಯತೆಯಿದ್ದು, ಈ ಕಾರಣಕ್ಕಾಗಿ ಟಿ20 ವಿಶ್ವಕಪ್ ಅನ್ನು ಫಾಸ್ಟ್ ಮತ್ತು ಫ್ಯೂರಿಯಸ್ ಕ್ರಿಕೆಟ್ ಎಂದು ಕೂಡಾ ಕರೆಯುತ್ತಾರೆ. ಟಿ20ಯನ್ನು ಕ್ರಿಕೆಟ್‌ಗೆ ಹೊಸ ಜೀವ ತುಂಬುವ ಉದ್ದೇಶದಿಂದ 2000ರ ದಶಕದಲ್ಲಿ ಪರಿಚಯಿಸಲಾಯಿತು. ನಂತರ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟಿ20 ವಿಶ್ವಕಪ್ ನಡೆಯಿತು. ಇದೇ ಮೊದಲ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕನಿಷ್ಠ ಟಿಕೆಟ್ ಬೆಲೆ ಕೇವಲ ₹100 ಎಂದು ನಿಗದಿ ;

ಟಿ20 ವಿಶ್ವಕಪ್ ಕ್ರಿಕೆಟ್ ಲೋಕ ಒಂದು ರೀತಿಯಲ್ಲಿ ಕ್ರಿಕೆಟ್ ಅಭಿಮಾನಿಗಳ, ವೀಕ್ಷಕರ, ಹಬ್ಬವೆಂದೇ ಕರೆಯಬಹುದು. ಇದು ಕೇವಲ ಕ್ರೀಡೆಯಲ್ಲ, ಕೋಟ್ಯಾಂತರ ಅಭಿಮಾನಿಗಳಿಗೆ ಸಂತೋಷ, ಉತ್ಸಾಹ ಮತ್ತು ಕ್ರೀಡಾಸ್ಫೂರ್ತಿ ತರುವ ಜಾಗತಿಕ ಉತ್ಸವ. ಬೌಂಡರಿ, ಸಿಕ್ಸರ್‌ಗಳು, ಸೂಪರ್ ಓವರ್ ರೋಮಾಂಚನ, ಮತ್ತು ಕ್ಷಣಕ್ಷಣವೂ ಬದಲಾದ ಆಟ ಇತ್ಯಾದಿಗಳೇ ಟಿ20 ವಿಶ್ವಕಪ್‌ನ ನಿಜವಾದ ಸೌಂದರ್ಯ. ಇದೀಗ ಐಸಿಸಿ 2026 ಟಿ20 ವಿಶ್ವಕಪ್‌ಗೆ ಟಿಕೆಟ್ ಮಾರಾಟವನ್ನು ಪ್ರಾರಂಭಿಸಿದೆ. ಟಿಕೆಟ್ ಮಾರಾಟಗಳು ಗುರುವಾರ ಸಂಜೆ 6:45 ರಿಂದ ಆರಂಭವಾಗಿವೆ ಎಂಬುದು ವರದಿಯಾಗಿದೆ. ಅಭಿಮಾನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದತ್ತ ಕರೆತರಲು ಐಸಿಸಿ ಹೊಸ ಪ್ಲಾನ್ ಮಾಡಿದ್ದು, ಐಸಿಸಿ ತನ್ನ ಪ್ರಕಟಣೆಯಲ್ಲಿ ಕನಿಷ್ಠ ಟಿಕೆಟ್ ಬೆಲೆಯನ್ನು ಕೇವಲ ₹100 ಎಂದು ನಿಗದಿಪಡಿಸಿದೆ. ಭಾರತದಲ್ಲಿ ನೂರು ರೂಪಾಯಿ ಕನಿಷ್ಠ ಟಿಕೆಟ್ ದರವಾದರೆ, ಶ್ರೀಲಂಕಾದಲ್ಲಿ 1,000 ರೂಪಾಯಿ ಎಂದು ನಿಗದಿ ಪಡಿಸಿದೆ.

ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ;

ಅಭಿಮಾನಿಗಳನ್ನು ತಮ್ಮ ಟಿಕೆಟ್‌ಗಳನ್ನು https://tickets.cricketworldcup.com ಖರೀದಿಸಬಹುದಾಗಿದೆ. ಐಸಿಸಿ ಈಗ ಗುಂಪು ಹಂತದ ಟಿಕೆಟ್‌ಗಳ ಮಾರಾಟವನ್ನು ಮಾತ್ರ ಆರಂಭಿಸಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. 29 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ಆಡಲಾಗುತ್ತದೆ. ಫೆ.15 ರಂದು ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ವೇಜ್ ಪಂದ್ಯ ಶ್ರೀಲಂಕಾದ ಆ‌ರ್.ಪ್ರೇಮದಾಸ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್ ಪಡೆಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. A total of 20 teams in the World Cup – ತುಳು ಟೈಮ್ಸ್

ಇದನ್ನೂ ಓದಿ :ಡಿ. 16ರಿಂದ ದೋಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಧನುಪೂಜೆ ಆರಂಭ

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/TxoTNdzv6vY?si=qtQxam8q85z8Dtw7

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page