ಪುತ್ತೂರು : Tulu Times | ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನಲ್ಲಿ ಫ್ಯಾಶನ್ ಡಿಸೈನ್ ವಿಭಾಗ, ಫಸೆರಾ ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಹಾಗೂ ಐಕ್ಯುಎಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ “STRUT’25 – Collection of Retro & Mythological Draping” ಎಂಬ ಫ್ಯಾಷನ್ ಶೋವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ರೆಟ್ರೋ ಮತ್ತು ಮೈಥಾಲಜಿಕಲ್ ಡ್ರಾಪಿಂಗ್ ಶೈಲಿಗಳ ಸಂಗ್ರಹ ;
ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಹೊಸತನದ ಫ್ಯಾಷನ್ ಶೈಲಿಗಳನ್ನು ಅಭ್ಯಸಿಸಲು ಈ ಕಾರ್ಯಕ್ರಮವು ಪ್ರೇರಣೆಯಾಯಿತು. ವಿದ್ಯಾರ್ಥಿಗಳು ವಿಭಿನ್ನ ವಿಷಯಗಳನ್ನು ಆಧರಿಸಿ ತಯಾರಿಸಿದ ಸೃಜನಾತ್ಮಕ ಉಡುಪು ಸಂಗ್ರಹಗಳನ್ನು ಆಕರ್ಷಕ ರ‍್ಯಾಂಪ್ (Ramp Walk) ವಾಕ್ ಮೂಲಕ ಪ್ರದರ್ಶಿಸಿದರು. ವಿಶೇಷವಾಗಿ ರೆಟ್ರೋ ಮತ್ತು ಮೈಥಾಲಜಿಕಲ್ ಡ್ರಾಪಿಂಗ್ ಶೈಲಿಗಳ ಸಂಗ್ರಹವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಫ್ಯಾಷನ್ ಶೋ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ತಂಡ ಸಹಕಾರವನ್ನು ಉತ್ತೇಜಿಸುವ ಪ್ರಮುಖ ವೇದಿಕೆಯಾಗಿ ಪರಿಣಮಿಸಿತು.
ವಿದ್ಯಾರ್ಥಿಗಳ ಸಕ್ರಿಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿ ;
ಫಸೆರಾ ಫ್ಯಾಷನ್ ಅಸೋಸಿಯೇಷನ್, ಐಕ್ಯುಎಸಿ ಸಮನ್ವಯಕರು, ಕಾಲೇಜಿನ ಪ್ರಾಂಶುಪಾಲರು, ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳ ಸಕ್ರಿಯ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ತೀರ್ಪುಗಾರರಾಗಿ ಪ್ರಾಂಶುಪಾಲರು ಸಂಪತ್ ಕೆ. ಪಕ್ಕಳ, ವಿಭಾಗ ಮುಖ್ಯಸ್ಥೆ ಅನುಷಾ ಪ್ರವೀಣ್ ಮತ್ತು ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಕಾರೋಲ್ ಫರ್ನಾಂಡಿಸ್ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು, ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ. ಪಕ್ಕಳ, ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ.ಎ., ಫ್ಯಾಷನ್ ಡಿಸೈನ್ ವಿಭಾಗ ಮುಖ್ಯಸ್ಥೆ ಅನುಷಾ ಪ್ರವೀಣ್, ಐಕ್ಯುಎಸಿ ಕಾರ್ಡಿನೇಟರ್ ಶ್ರೀಮತಿ ರಶ್ಮಿ ಕೆ., ಫಸೆರಾ ಅಸೋಸಿಯೇಷನ್ ಕಾರ್ಡಿನೇಟರ್ ಧನ್ಯಶ್ರೀ ಹಾಗೂ ಅಧ್ಯಕ್ಷೆ ಜೆನಿಫರ್ ಡಿಸೋಜಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಪದವಿ ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿ ರಜೀನಾ ಬಾನು ನಿರೂಪಿಸಿದರು.
A captivating ramp walk by the Fashion Design Department of Akshaya Degree College – ತುಳು ಟೈಮ್ಸ್
ಇದನ್ನೂ ಓದಿ :ಉಪ್ಪಿನಂಗಡಿ: ಅಂಗಡಿಯಿಂದ ಹಾಡಹಗಲೇ ಕಳ್ಳತನ – ಇಬ್ಬರ ಬಂಧನ
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/z7Cg1RxfZUI?si=_td0VgNf95KJtYXF











