ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಡಿಬಾಸ್ ಡೆವಿಲ್ ದರ್ಬಾರ್.. ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ..?

ಸಿನಿಮಾ: Tulu Times | ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದೀಗ ದರ್ಶನ್ ಸಿನಿಮಾಗಾಗಿ ಕಾಯ್ತಾ ಇದ್ದಂತಹ ಡಿಬಾಸ್ ಫ್ಯಾನ್ಸ್ ಡೆವಿಲ್ ಸಿನಿಮಾ ನೋಡಿ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ನಟ ದರ್ಶನ್ ಹಾಗೂ ರಚನಾ ರೈ ಅಭಿನಯದ ಡೆವಿಲ್ ಸಿನಿಮಾ ಭರ್ಜರಿಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತದೆ. ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಡೆವಿಲ್ ಭರ್ಜರಿ ಗಳಿಕೆಯನ್ನು ಮಾಡಿದೆ. ಡೆವಿಲ್ ಮೊದಲ ದಿನ 12ರಿಂದ 15 ಕೋಟಿ ಗಳಿಸೋ ಸಾಧ್ಯತೆ ಇದೆ. ಇಂದು ಮಾರ್ನಿಂಗ್ ಶೋ ಗೆ ಜನ ಕಿಕ್ಕಿರಿದು ಸೇರಿದ್ದು ಹೌಸ್ ಫುಲ್ ಆಗಿತ್ತು. ಸದ್ಯ, ಅರ್ಲಿ ಮಾರ್ನಿಂಗ್ ಶೋ ಹಾಗೂ ಮಾರ್ನಿಂಗ್ ಶೋಸ್ ನಿಂದಲೇ 4.5 ಕೋಟಿ ರೂಪಾಯಿ ಗಳಿಕೆ ಮಾಡುವಂತಹ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ದರ್ಶನ್ ಧನುಷ್ ಹಾಗೂ ಕೃಷ್ಣ ಎನ್ನುವಂತಹ  ಎರಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎರಡು ಕೂಡ ತದ್ವಿರುದ್ಧ ಪಾತ್ರಗಳಾಗಿವೆ. ಇದ್ರಲ್ಲಿ ದರ್ಶನ್ ಮ್ಯಾನರಿಸಂ‌, ಬಾಡಿ ಲ್ಯಾಂಗ್ವೇಜ್,  ಡೈಲಾಗ್ಸ್ ಗಳು ತುಂಬಾನೇ ಚೆನ್ನಾಗಿದೆ. ಹೀಗಾಗಿ, ದರ್ಶನ್ ಅಭಿನಯಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಟ್ರೈಲರ್ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡಿದ ಡೆವಿಲ್ ಥಿಯೇಟರ್ ನಲ್ಲಿ ಇದೀಗ  ಅಬ್ಬರಿಸುತ್ತಿದೆ. ಆಕ್ಷನ್ , ಕಾಮಿಡಿ, ರೋಮ್ಯಾನ್ಸ್ , ಲವ್ ಕೂಡ ಹದವಾದ ರೀತಿಯಲ್ಲಿ ಈ ಸಿನಿಮಾದಲ್ಲಿ ನೀವು ನೋಡಬಹುದು.

ಇನ್ನು ಡೆವಿಲ್  ಹಾಡುಗಳನ್ನು ಕೇಳಿ ಜನ ಎಂಜಾಯ್ ಮಾಡುತ್ತಿದ್ದಾರೆ. ಬೆಳ್ಳಿತೆರೆಯಲ್ಲಿ ದರ್ಶನ್ ಅವರ ಮಾಸ್ ಟ್ರೀಟ್ ಎಲ್ಲರಿಗೂ ಖುಷಿ ತಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದು ಡೆವಿಲ್ ಶುರುವಾಗುವುದಕ್ಕೂ ಮುನ್ನ ಜನ ಥಿಯೇಟರ್ ನಲ್ಲಿ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸಿದ್ದಾರೆ. ರಿಲೀಸ್ ಗೆ ಕೆಲವು ದಿನಗಳ ಹಿಂದೆಯೇ ದರ್ಶನ್ ಕಟೌಟ್ ಅಲ್ಲಲ್ಲಿ ರಾರಾಜಿಸುತ್ತಾ ಇದ್ದವು. ಹೀಗಾಗಿ, ಡೆವಿಲ್ ಹಬ್ಬವನ್ನು ಜನ ಎಂಜಾಯ್ ಮಾಡುತ್ತಿದ್ದಾರೆ.

Today is Dboss Devil Darbar.. Do you know how much the first day collection was..?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page