ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಜಗಳ ಮರೆತು ಒಂದಾದ ಮಂಜು-ಲೀಲಾ ಜೋಡಿ! ಟ್ರಯಾಂಗಲ್ ಲವ್ ಸ್ಟೋರಿ ಸುಖಾಂತ್ಯ

ಕರ್ನಾಟಕ: Tulu Times | ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬಿಸಿಬಿಸಿ ಸುದ್ದಿಯಾದ ಮಂಜು ಲೀಲಾ ಲವ್‌ ಸ್ಟೋರಿಗೆ ಇದೀಗ ಬ್ರೇಕ್‌ ಸಿಕ್ಕಿದ್ದು, ಟ್ರಯಾಂಗಲ್ ಲವ್ ಸ್ಟೋರಿ ಸುಖಾಂತ್ಯವಾಗಿದೆ.

ರಾಜ್ಯಾದ್ಯಂತ ಸುದ್ದಿಯಾಗಿ ಮೀಮರ್ಸ್​ಗಳಿಗೂ ಆಹಾರವಾಗಿದ್ದ ಈ ಸ್ಟೋರಿಗೆ ಕೊನೆಗೂ ತೆರೆ ಬಿದ್ದಿದೆ.  ಪತಿಯನ್ನು ತೊರೆದು ಲವರ್ ಜೊತೆ ಹೋಗಿದ್ದ ಲೀಲಾ, ಮಕ್ಕಳೊಂದಿಗೆ ಮರಳಿ ಪತಿ ಮಂಜನ ಮನೆ ಸೇರಿದ್ದಾಳೆ. ಮಕ್ಕಳ ಭವಿಷ್ಯಕ್ಕಾಗಿ ದಂಪತಿ ಒಂದಾಗಲು ನಿರ್ಧರಿಸಿದ್ದಾರೆ.

ಸಂತುನ ಬಿಟ್ಟು ಬರಲ್ಲ ಅಂತ ಹೇಳಿದ್ದ ಲೀಲಾ!

ನಮ್ಮ ಮಕ್ಕಳಿಗಾಗಿ ನಾವು ಒಂದಾಗೋಣ. ಲೀಲಾ ಬಾರಮ್ಮಾ.., ನನ್ನ ಮಾತು ಕೇಳಿ ಬಾರೆ. ನಿನ್ನ ಎಷ್ಟು ಚೆನ್ನಾಗಿ ಸಾಕಿದ್ದೀನಿ, ಇನ್ಮೇಲೆ ಅದರ ಅಪ್ಪನಂಗೆ ನೋಡಿಕೊಳ್ತೀನಿ. ನಾನು ನಿಂಗೋಸ್ಕರ ಕುಡಿಯೋದು ಬಿಡ್ತೀನಿ, ಬೇರೆ ಹೆಣ್ಣಿನ ಸಹವಾಸ  ಬಿಡ್ತೀನಿ. ಕಾಲು ಹಿಡ್ಕೋತೀನಿ ಲೀಲಾ ಬಾ ಎಂದು ಟಿವಿಯ ಎದುರಿಗೆ ನಿಂತು ಗೋಳಾಡಿದ್ದ. ನೀನು ಬೇಕಾದರೆ ನನ್ನ ಮಕ್ಕಳನ್ನು ಕಳಿಸಿಬಿಡು. ನಾನು ನಿನ್ನ ಜೊತೆಗೆ ಬರಲ್ಲ ಎಂದು ಹೇಳಿದ್ದಳು.

ಲವರ್ ಸಂತುಗೆ ಗುಡ್ ಬೈ ಹೇಳಿದ ಲೀಲಾ!

ಲವರ್ ಸಂತುಗೆ ಗುಡ್ ಬೈ ಹೇಳಿರೋ ಲೀಲಾ ಮರಳಿ ಪತಿ ಮಂಜನ ಮನೆಗೆ ಬಂದಿದ್ದಾಳೆ.  ಬನ್ನೇರುಘಟ್ಟ ಸಮೀಪದ ಬಸವನಪುರದಲ್ಲಿ ನಡೆದಿದ್ದ ಟ್ರಯಾಂಗಲ್ ಲವ್ ಸ್ಟೋರಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಪತಿ, ಮೂವರು ಮಕ್ಕಳನ್ನ ಬಿಟ್ಟು ಲವರ್ ಜೊತೆ ಲೀಲಾಗಾಗಿ ಪತಿ ಮಂಜ ಗೋಳಾಡಿದ್ದ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಮಂಜ ಕಣ್ಣೀರು ಹಾಕಿ ಗೋಳಾಡಿ,ಚಿನ್ನು, ಬಂಗಾರ ಬಂದ್ಬೀಡು ಎಂದು ಅತ್ತಿದ್ದ.  ಸಂತು ಮನೆಯಲ್ಲಿಯೇ ಪತ್ನಿ ಲೀಲಾ ವಾಸವಿದ್ದ ಕಾರಣ ರೊಚ್ಚಿಗೆದ್ದ ಮಂಜ ಅವರ ಮೇಲೆ ಅಟ್ಯಾಕ್​​ ನಡೆಸಿದ್ದ. ಜೈಲಿನಿಂದ ರಿಲೀಸ್ ಆದಮೇಲೆ ಲೀಲಾ ಬಳಿ ಇದ್ದ ದೊಡ್ಡ ಮಗನನ್ನ ಕರೆದುಕೊಂಡು ಹೋಗಿದ್ದ. ಇದಾದ ಬಳಿಕ ಈಗ ಮಕ್ಕಳ ಜೊತೆಗೆ ಲೀಲಾ ಇದೀಗ ಮಂಜನ ಮನೆ ಸೇರಿದ್ದಾಳೆ.

Manju-Leela pair forget their fight and unite! Triangle love story has a happy ending- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page