ಬೆಂಗಳೂರು : Tulu Times | ಕೇಂದ್ರ ಸರ್ಕಾರವು ಏರ್ ಲೈನ್ಸ್ ವಿರುದ್ಧ ಕ್ರಮ ಕೈಗೊಂಡಿದ್ದು, ವಿಮಾನ ಹಾರಾಟ ರದ್ದು ಮಾಡಿರುವುದು ಮತ್ತು ಪ್ರಯಾಣಿಕರಿಗೆ ಸರಿಯಾಗಿ ಸ್ಪಂದಿಸದೇ ಇದ್ದಿರುವುದು ಇಂಡಿಗೋ ತನ್ನ ಅಸಮರ್ಥ ಸೂಚನೆಗಳಿಂದ ಇದೀಗ ನೂರಕ್ಕಿಂತಲೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಸಂಸ್ಥೆಯ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಸಹಜತೆಗೆ ತರಲು ಒಟ್ಟಾರೆ ವಿಮಾನ ಹಾರಾಟಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಅನಿವಾರ್ಯ ಎಂದು ಸಚಿವಾಲಯ ಭಾವಿಸಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ‘ಇಂಡಿಗೊ’ದ ಒಟ್ಟಾರೆ ದೈನಂದಿನ ವಿಮಾನಗಳ ಕಾರ್ಯಾಚರಣೆಯನ್ನು ಶೇ. 10ರಷ್ಟು ಕಡಿತಗೊಳಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರು ನಿರ್ದೇಶನ ನೀಡಿದ್ದಾರೆ. ಇದರೊಂದಿಗೆ ಪ್ರತಿದಿನ ಸಂಸ್ಥೆಯ 220 ವಿಮಾನಗಳ ಹಾರಾಟಕ್ಕೆ ಕತ್ತರಿ ಬೀಳಲಿದೆ. ಮತ್ತಷ್ಟು ವಿಮಾನಗಳ ಹಾರಾಟ ರದ್ದಾಗಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
‘ಇಂಡಿಗೊ’ ಉಳಿದ ಹಣವನ್ನು ಶೀಘ್ರದಲ್ಲೇ ರೀಫಂಡ್ ;
ಈ ವರೆಗೆ ವಿಮಾನ ಹಾರಾಟದಲ್ಲಿ ವ್ಯತ್ಯಯಗಳು ಕಂಡುಬಂದಿದ್ದು ಮಂಗಳವಾರ ಸಂಸ್ಥೆಯಿಂದ 1,800 ವಿಮಾನಗಳ ಹಾರಾಟ ಯಶಸ್ವಿ, ಬುಧವಾರ (ಡಿಸೆಂಬರ್ 10) 1,900ಕ್ಕೆ ಹೆಚ್ಚಳ ನಿರೀಕ್ಷೆಯಿದೆ. ಒಟ್ಟಾರೆಯಾಗಿ ಡಿಸೆಂಬರ್ 6ರವರೆಗೆ ರದ್ದಾದ ವಿಮಾನಗಳ ಸಂಪೂರ್ಣ ಹಣ ಮರುಪಾವತಿಯಾಗಿದೆ ಎಂದ ‘ಇಂಡಿಗೊ’ ಉಳಿದ ಹಣವನ್ನು ಶೀಘ್ರದಲ್ಲೇ ರೀಫಂಡ್ ಮಾಡಲಾಗುವುದು, ಕಾರ್ಯಾಚರಣೆ ಸಹಜತೆಯತ್ತ ಮರಳಿದೆ ಎಂದು ಇಂಡಿಗೊ ತಿಳಿಸಿದೆ.
ಇಂಡಿಗೊ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯದಿಂದಾಗಿ ದೇಶದ ವಿಮಾನ ನಿಲ್ದಾಣಗಳಲ್ಲಿ ಉಂಟಾಗುತ್ತಿರುವ ಗೊಂದಲವನ್ನು ಕಡಿಮೆ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ದೇಶದಾದ್ಯಂತ ದಿನದ 24 ಗಂಟೆಯೂ ತೀವ್ರ ಪರಿಶೀಲನೆ ಆರಂಭಿಸಿದೆ. ಪ್ರಮುಖ ವಿಮಾನ ನಿಲ್ದಾಣಗಳಿಗೆ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗಿದ್ದು, ವಿಳಂಬವಾದ ಅಥವಾ ಸಮಸ್ಯೆಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ತ್ವರಿತ ನೆರವು ನೀಡುವ ನಿಟ್ಟಿನಲ್ಲಿ ಸಚಿವಾಲಯ ಮುಂದಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ ರಾಮ್ ಮೋಹನ್ ನಾಯ್ಡು ಮಂಗಳವಾರ ತಿಳಿಸಿದರು. Shock for IndiGo airline: Will flights be cut? – ತುಳು ಟೈಮ್ಸ್
ಇದನ್ನೂ ಓದಿ :ಋತುಚಕ್ರದ ರಜೆ ವಿಚಾರವಾಗಿ ಸರ್ಕಾರದ ವಾದ ಕೇಳದೇ ಹೈಕೋರ್ಟ್ ತಡೆಯಾಜ್ಞೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/GhM456JYzHc?si=42PkEkreiXbFzD9j











