ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಚಳಿಗಾಲ ಮುಖದ ಸೌಂದರ್ಯ ಹಾಗೂ ಚರ್ಮದ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ

ಆರೋಗ್ಯ : Tulu Times | ಚಳಿಗಾಲದಲ್ಲಿ ತಂಪಿನಿಂದ ರಕ್ಷಿಸಿಕೊಳ್ಳಲು ಜನರು ಬಿಸಿ ಬಟ್ಟೆ, ಕಂಬಳಿ, ಸ್ವೆಟರ್‌, ದಪ್ಪ ಶಾಲುಗಳನ್ನು ಬಳಸುತ್ತಾರೆ. ಬೆಳಗಿನ ಜಾವ ವ್ಯಾಯಾಮ, ಓಟ ಅಥವಾ ಯೋಗ ಮಾಡುವವರು ಹೆಚ್ಚಿನ ಜಾಗೃತಿಯಿಂದ ನಡೆದುಕೊಳ್ಳಬೇಕು. ಏಕೆಂದರೆ ತಂಪಾದ ಗಾಳಿ ದೇಹದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು. ಹಲವು ಪ್ರದೇಶಗಳಲ್ಲಿ ಜ್ವರ, ಶೀತ, ಕೆಮ್ಮು, ಅಸ್ತಮಾ ಸಮಸ್ಯೆಗಳು ಈ ಸಮಯದಲ್ಲಿ ಹೆಚ್ಚಾಗುವ ಕಾರಣ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.

ಇನ್ನು ಚಳಿಗಾಲದಲ್ಲಿನ ಶೀತ ವಾತಾವರಣದ ಕಾರಣದಿಂದಾಗಿ ತ್ವಚೆ ತುಂಬಾನೇ ಡ್ರೈ ಆಗುತ್ತದೆ ಮತ್ತು ಮುಖದ ಕಾಂತಿಯೇ ಮಾಯವಾಗುತ್ತದೆ. ಅದಕ್ಕಾಗಿ ಈ ಸಮಯದಲ್ಲಿ ಹೆಚ್ಚಿನವರು ದುಬಾರಿ ಕ್ರೀಮ್‌, ಲೋಷನ್‌ಗಳ ಮೊರೆ ಹೋಗ್ತಾರೆ. ತ್ವಚೆಗೆ ಬಾಹ್ಯ ಆರೈಕೆಯ ಜೊತೆಗೆ ಒಳಗಿನಿಂದಲೂ ಸಾಕಷ್ಟು ಪೋಷಣೆ ಬೇಕಾಗುತ್ತದೆ. ಇದಕ್ಕಾಗಿ ನೀವು ಒಂದಷ್ಟು ಜ್ಯೂಸ್‌ಗಳನ್ನು ಚಳಿಗಾಲದಲ್ಲಿ ಸೇವನೆ ಮಾಡಬೇಕು. ಇವು ನಿಮ್ಮ ತ್ವಚೆಗೆ ಪೋಷಣೆ ನೀಡುವುದರ ಜೊತೆಗೆ ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯಲು ಸಹಾಯ ಮಾಡುತ್ತದೆ.

ಮೊಡವೆ ಸಮಸ್ಯೆಯನ್ನೂ ದೂರ ಮಾಡುತ್ತದೆ ;

ಮುಖದ ಹೊಳಪನ್ನು ಹೆಚ್ಚಿಸಲು ಸಹಕಾರಿಯಾಗುವ ಜ್ಯೂಸ್ ಗಳಲ್ಲಿ ಟೊಮೆಟೊ ರಸ ಅತ್ಯುತ್ತಮ ಪರಿಹಾರ. ಹೊಳೆಯುವ ತ್ವಚೆ ನಿಮ್ಮದಾಗಬೇಕೆಂದರೆ ಟೊಮೆಟೊ ರಸವನ್ನು ಕುಡಿಯಬಹುದು. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಲೈಕೋಪೀನ್ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಸುಂದರಗೊಳಿಸುವುದರ ಜೊತೆಗೆ ಮೊಡವೆ ಸಮಸ್ಯೆಯನ್ನೂ ದೂರ ಮಾಡುತ್ತದೆ. ಹಾಗೆಯೇ, ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್‌ಗಳು, ತಾಪ ಮತ್ತು ರೋಗನಿರೋಧಕ ಶಕ್ತಿಯನ್ನು ಒದಗಿಸುವ ಅತ್ಯುತ್ತಮ ಪ್ರಕೃತಿಯ ಪಾನೀಯ ಕ್ಯಾರೆಟ್ ಜ್ಯೂಸ್. ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿಡಲು ಬಯಸಿದರೆ, ಕ್ಯಾರೆಟ್ ಜ್ಯೂಸ್ ಕುಡಿಯಿರಿ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು, ಮುಖದಿಂದ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇನ್ನು ಚಳಿಗಾಲದಲ್ಲಿ ಸೌತೆಕಾಯಿ ರಸ ಕುಡಿಯುವುದರಿಂದ ನಿಮ್ಮ ಚರ್ಮವು ಹೈಡ್ರೇಟ್ ಆಗುತ್ತದೆ. ಮುಖ ಯಾವಾಗಲೂ ಕಾಂತಿಯುತವಾಗಿರುತ್ತದೆ. ನೀವು ಪ್ರತಿದಿನ ಅಥವಾ ವಾರಕ್ಕೆ ಕನಿಷ್ಠ ಎರಡು ಬಾರಿ ಸೌತೆಕಾಯಿ ಜ್ಯೂಸ್‌ ಕುಡಿಯಿರಿ. ಇದರಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳು ಚರ್ಮವನ್ನು ಪುನರ್ಯೌವನಗೊಳಿಸುತ್ತವೆ. ಇದು ಚರ್ಮ ಒಣಗುವುದನ್ನು ತಡೆಯುತ್ತದೆ. ಇದು ಕಣ್ಣುಗಳ ಸುತ್ತಲಿನ ಕಪ್ಪು ವೃತ್ತಗಳನ್ನು ಸಹ ತೆಗೆದುಹಾಕುತ್ತದೆ.

How to maintain facial beauty and skin health in winter – ತುಳು ಟೈಮ್ಸ್

ಇದನ್ನೂ ಓದಿ :ಕೋಳಿ ಮೊಟ್ಟೆ ದರ ಏರಿಕೆ.. ಕ್ರಿಸ್‌ಮಸ್‌ & ಹೊಸ ವರ್ಷಕ್ಕೆ ಮೊಟ್ಟೆಗೆ ಭರ್ಜರಿ ಬೇಡಿಕೆ

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/e1543EY8Q90?si=LqsxVk1x8SkCerXJ

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page