ಗೋವಾ : Tulu Times | ಗೋವಾದ ಅರಪೋರಾದಲ್ಲಿರುವ ಜನಪ್ರಿಯ ನೈಟ್ ಕ್ಲಬ್ ನಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ‘ಬಾಲಿವುಡ್ ಬ್ಯಾಂಗರ್ ನೈಟ್’ ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಅಚ್ಚರಿಯ ಸಂಗತಿಯೆಂದರೆ, ವೇದಿಕೆಯ ಹಿಂಭಾಗದಲ್ಲೇ ಬೆಂಕಿ ಕಾಣಿಸಿಕೊಂಡಿದ್ದರೂ ಅದರ ಪರಿವೆಯೇ ಇಲ್ಲದೇ ಜನರು ಮೈಮರೆತಿದ್ದರು. ಅಗ್ನಿ ದುರಂತ ಸಂಭವಿಸಿದಾಗ ಸುಮಾರು 100 ಪ್ರವಾಸಿಗರು ಡ್ಯಾನ್ಸ್ ಫ್ಲೋರ್‌ನಲ್ಲಿ ಸಂಭ್ರಮಿಸುತ್ತಿದ್ದರು. ಕ್ಲಬ್‌ನ ವಿಡಿಯೋವೊಂದರಲ್ಲಿ, ‘ಶೋಲೆ’ ಚಿತ್ರದ ‘ಮೆಹಬೂಬಾ ಓ ಮೆಹಬೂಬಾ’ ಹಾಡಿಗೆ ನರ್ತಕಿ ಒಬ್ಬರು ಕುಣಿಯುತ್ತಿರುವುದು ಕಂಡುಬಂದಿರುವುದು ಸಾಮಾಜಿಕ ಮಾಧ್ಯಮದಲ್ಲೂ ಹರಿದಾಡುತ್ತಿವೆ.
ಕ್ರಿಸ್ ಮಸ್, ಹೊಸವರ್ಷದ ಆರಂಭದಲ್ಲೇ ಈ ದುರಂತ ನಡೆದಿರುವುದು, ಗೋವಾ ಪಾಲಿಗೆ ಇದೊಂದು ಕಪ್ಪು ಚುಕ್ಕೆ ಆಗಿದ್ದು ಇದು ವಿಶ್ವಮಟ್ಟಕ್ಕೆ ಪಸರಿಸಿದೆ. ಗೋವಾ ಪ್ರವಾಸೋದ್ಯಮದ ಉತ್ತುಂಗದ ದಿನಗಳು ಈಗಷ್ಟೇ ಶುರುವಾಗಿದೆ. ಈ ಸಮಯಕ್ಕೆ ಗೋವಾದಲ್ಲಿ ಪ್ರವಾಸಿಗರು ಹೆಚ್ಚಿರುತ್ತಾರೆ. ಲಕ್ಷಾಂತರ ಜನರು ಬರುತ್ತಾರೆ ಎಂದು ಗೋವಾ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮಿತ್ ಪಾಟ್ಕರ್ ಮಾಧ್ಯಮದೊಂದಿಗೆ ಹೇಳಿಕೆ ನೀಡಿರುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿರುತ್ತಾರೆ. ಜೊತೆಗೆ ಹಲವು ನಾಯಕರು ಸಂತಾಪ ಸೂಚಿಸಿದ್ದು, ಒಟ್ಟು 25 ಜನ ಸಜೀವ ದಹನದಲ್ಲಿ ಬೆಂಗಳೂರಿನ ಪ್ರವಾಸಿಯೊಬ್ಬರು ಬಲಿಯಾಗಿರುವುದು ತಿಳಿದು ಬಂದಿದೆ. ಮೊಬೈಲ್ ತರಲೆಂದು ಒಳಗೆ ಹೋಗಿ ಅಲ್ಲಿಯೇ ಪ್ರಾಣ ಬಿಟ್ಟರೆಂದು ವರದಿಯಾಗಿದೆ. ಇಲ್ಲಿ ಮೋಜು ಮಸ್ತಿ ಅಂತ ಗೋವಾಕ್ಕೆ ಹೋಗಿದ್ದ ಪ್ರವಾಸಿಗರು ಈ ರೀತಿ ವಿಧಿಯ ಆಟಕ್ಕೆ ಬಲಿಯಾಗಿರುವುದು ತುಂಬಾ ಆಘಾತಕಾರಿ ಹಾಗೂ ನೋವಿನ ಸಂಗತಿಯಾಗಿದೆ. Goa nightclub death victims’ families to get Rs 2 lakh compensation – ತುಳು ಟೈಮ್ಸ್
ಇದನ್ನೂ ಓದಿ :ನಿಮ್ಮ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡ್ತಾರಾ..? ಸಿಂಪಲ್ ಹೀಗೆ ಮಾಡಿ ಸಾಕು!
=========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Ql3-YTLL9oU?si=aKbE5O87kfSuMLBE











