ದಕ್ಷಿಣ ಕನ್ನಡ : Tulu Times | ಚಿಕನ್ ಪಾಕ್ಸ್ ಸಾಮಾನ್ಯವಾಗಿ ಗಂಭೀರ ಕಾಯಿಲೆ ಅಲ್ಲ. ಸರಿಯಾದ ವಿಶ್ರಾಂತಿ, ಆರೈಕೆ ಹಾಗೂ ವೈದ್ಯರ ಸಲಹೆ ಅನುಸರಿಸಿದರೆ 7 ರಿಂದ 10 ದಿನಗಳಲ್ಲಿ ಚೇತರಿಕೆ ಸಾಧ್ಯ. ಆದರೆ ಚಿಕ್ಕ ಮಕ್ಕಳಲ್ಲಿ, ಗರ್ಭಿಣಿಯರಲ್ಲಿ, ಹಿರಿಯರಲ್ಲಿ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚು ಎಚ್ಚರಿಕೆಯಿಂದಿರುವುದು ಮುಖ್ಯ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯಿರುವ ಕಾರಣ ಎಚ್ಚರಿಕೆಯಿಂದರಬೇಕು.
ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಒಂದೆಡೆ ಮಳೆ ಮತ್ತೊಂದೆಡೆ ಬಿಸಿಲು, ಇನ್ನೊಂದೆಡೆ ಚಳಿ. ಈ ವಿಚಿತ್ರ ಹವಾಮಾನದಿಂದ ಜಿಲ್ಲೆಯ ಶಾಲಾ ಮಕ್ಕಳಲ್ಲಿ ಚಿಕನ್ ಪಾಕ್ಸ್ ಪತ್ತೆಯಾಗುತ್ತಿದೆ. ಮಕ್ಕಳು ವಾರಗಟ್ಟಲೆ ಶಾಲೆಗೆ ಗೈರಾಗುತ್ತಿರುವ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಆರೋಗ್ಯ ಇಲಾಖೆ ಕೂಡ ಮುಂಜಾಗ್ರತಾ ಕ್ರಮವಾಗಿ ಶಿಕ್ಷಣ ಇಲಾಖೆಗೂ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಮಕ್ಕಳಿಂದ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಾಗಿ ಈ ಕಾಯಿಲೆ ಕಂಡುಬರುತ್ತದೆ. ಇದು ವರಿಸೆಲ್ಲಾ ಝೋಸ್ಟರ್ ವೈರಸ್ ನಿಂದ ಉಂಟಾಗುವ, ತುಂಬಾ ಸುಲಭವಾಗಿ ಹರಡುವ ಸೋಂಕಾಗಿದ್ದು, ಸಾಮಾನ್ಯವಾಗಿ ವೈರಸ್ ತಗುಲಿದ 10–21 ದಿನಗಳ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರ ಆರಂಭಿಕ ಲಕ್ಷಣಗಳು ; ಜ್ವರ, ಶೀತದಂತೆ ಕಾಣುವ ಸಮಸ್ಯೆ, ದೇಹದಲ್ಲಿ ನೋವು, ಸುಸ್ತು, ತಲೆನೋವು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಳಿಗಾಲದಲ್ಲೂ ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಇಲಾಖೆ ಹೆಚ್ಚು ತಲೆ ಕೆಡಿಸಿಕೊಳ್ಳುವಂತೆ ಮಾಡಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಗೂ ವಿಶೇಷವಾದ ಸೂಚನೆ ನೀಡುವ ಕಾರ‍್ಯ ಮಾಡಿದೆ. ಮುಖ್ಯವಾಗಿ ಚಿಕನ್ ಪಾಕ್ಸ್ ಇರುವ ಮಕ್ಕಳನ್ನು ದಯವಿಟ್ಟು ಶಾಲೆಗೆ ಕಳುಹಿಸಬೇಡಿ. ಅವರಿಗೆ ವಿಶೇಷ ರಜೆ ನೀಡಿ ಮನೆಯಲ್ಲಿ ನಿಂತು ಆರೋಗ್ಯ ಸುಧಾರಣೆ ಬಳಿಕ ಶಾಲೆಗೆ ಮರಳಿ ಬರಲಿ ಎಂದು ಸೂಚಿಸಿದೆ. ಚಿಕನ್‌ಪಾಕ್ಸ್ ಒಬ್ಬರಿಂದ ಒಬ್ಬರಿಗೆ ಹರಡಲು ಮುಖ್ಯ ಕಾರಣ, ಸೋಂಕಿತ ರೋಗಿಯ ಬೊಕ್ಕೆಗಳನ್ನು ಮುಟ್ಟಿದಾಗ ಕೈಗಳನ್ನು ಸೋಪು ಮತ್ತು ನೀರಿನಿಂದ ಸ್ವಚ್ಛ ಮಾಡಿಕೊಳ್ಳಬೇಕು. ಮನೆ, ಶಾಲೆ, ಕಿಂಡರ್ ಗಾರ್ಡನ್ ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಸೋಂಕಿತ ಮಕ್ಕಳ ಜತೆಗೆ ಹತ್ತಿರದ ಸಂಪರ್ಕವನ್ನು ಇಡಬಾರದು. ಸೋಂಕಿತ ಜಾಗವನ್ನು ಅಥವಾ ಮಕ್ಕಳ ಆಟಿಕೆಗಳನ್ನು ಸೋಪು ಮತ್ತು ನೀರಿನಿಂದ ಸ್ವಚ್ಛ ಮಾಡಿಕೊಳ್ಳುವುದೇ ಉತ್ತಮ. Chicken pox case detected in school children – ತುಳು ಟೈಮ್ಸ್
ಇದನ್ನೂ ಓದಿ :ಡಿಸೆಂಬರ್ 7ರಂದು ನಡೆಯುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ಕ್ರಮ
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/Ydo5aphrgek?si=BeFhxecl-ym8yyIB











