ಎವಿಎಂ ಪ್ರೊಡಕ್ಷನ್ : Tulu Times | ಭಾರತೀಯ ಚಲನಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರುಗಳಲ್ಲಿ ಎವಿಎಂ ಸಿನೆಮಾ ಪ್ರೊಡಕ್ಷನ್ ಪ್ರಮುಖವಾದದು. ದಕ್ಷಿಣ ಭಾರತದ ಅತಿ ಹಳೆಯ ಮತ್ತು ಯಶಸ್ವೀ ಚಲನಚಿತ್ರ ನಿರ್ಮಾಣ ಸಂಸ್ಥೆಯೆಂದು ಪರಿಗಣಿಸಲ್ಪಡುವ ಎವಿಎಂ, ಶತಮಾನದಷ್ಟು ಕಾಲ ಭಾರತೀಯರ ಮನರಂಜನೆಗೆ ಮಹತ್ವದ ಕೊಡುಗೆ ನೀಡಿದೆ.
ಎವಿಎಂ ಸರವಣನ್ ಅವರು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಸಿದ್ಧ ಚಿತ್ರರಂಗ ನಿರ್ಮಾಪಕ, ಭಾರತದ ಅತ್ಯಂತ ಹಳೆಯ ಮತ್ತು ಯಶಸ್ವಿಯಾದ ನಿರ್ಮಾಣ ಸಂಸ್ಥೆಯಾದ ಎವಿಎಂ ಪ್ರೊಡಕ್ಷನ್ಸ್‌ನ ಪ್ರಮುಖ ನಿರ್ವಾಹಕರಲ್ಲೊಬ್ಬರು. ಇವರು ತಮಿಳು, ತೆಲುಗು, ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಅಲ್ಲದೇ 86 ವರ್ಷ ವಯಸ್ಸಿನಲ್ಲಿ ಇಂದು ಕೊನೆಯುಸಿರೆಳೆದ ಸರವಣನ್ ರವರಿಗೆ ಸಾವಿರಾರು ಜನರು ಕಂಬನಿ ಮಿಡಿದಿದ್ದಾರೆ. ಏಕೆಂದರೆ ಬಹಳ ಹಳೆಯ ಕಾಲದಿಂದಲೂ ಎವಿಎಂ ಸಮಾಜಕ್ಕೆ ನೀಡಿರುವ ಸಿನೆಮಾ ಗಳು ಒಂದೆರಡಲ್ಲ.
ಅವರ ನಿಧನ ವಿಷಯವು ಸಿನಿಮಾರಂಗ ಹಾಗೂ ಅಭಿಮಾನಿಗಳಿಗೆ ದೊಡ್ಡ ನೋವಿಗೆ ಕಾರಣವಾಗಿದ್ದು, ವಯೋಸಹಜವಾಗಿ ನಿಧನರಾದರೆಂದು ಮೂಲಗಳು ವರದಿ ಮಾಡಿವೆ. ಈ ಎವಿಎಂ ಸಂಸ್ಥೆ ಸಮಯಕ್ಕನುಗುಣವಾಗಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ: ಡಿಜಿಟಲ್ ಚಿತ್ರೀಕರಣ, ವಿಎಫ್‌ಎಕ್ಸ್ ಮತ್ತು ಸಿಜಿ ತಂತ್ರಜ್ಞಾನ, ಉನ್ನತ ಮಟ್ಟದ ಸ್ಟುಡಿಯೋ ಅಪ್ಡೇಟ್‌ಗಳು, ಹೊಸ ಪ್ರತಿಭೆಗಳು ಮತ್ತು ಯುವ ನಿರ್ದೇಶಕರಿಗೆ ಅವಕಾಶ ನೀಡಿರುವ ಈ ಸಂಸ್ಥೆ 80 ವರ್ಷಗಳ ಇತಿಹಾಸವನ್ನು ಹೊಂದಿದ್ದು, 170 ಕ್ಕೂ ಹೆಚ್ಚು ಚಲನಚಿತ್ರಗಳು, ನೂರಾರು ಟಿವಿ ಕಾರ್ಯಕ್ರಮಗಳು ನೀಡಿ ಜನಮನ್ನಣೆ ಗಿಟ್ಟಿಸಿಕೊಂಡಿತ್ತು. ಅಲ್ಲದೇ, ದಕ್ಷಿಣ ಭಾರತದ ಅತಿ ದೊಡ್ಡ ಖಾಸಗಿ ಸ್ಟುಡಿಯೋ ಹಾಗೂ ಮೌಲ್ಯಯುತ ಕಥಾನಕ ಮತ್ತು ಕುಟುಂಬಪರ ಚಿತ್ರಗಳು ಕೊಡುಗೆ ನೀಡಿದ ಹೆಗ್ಗಳಿಕೆ ಇವರದ್ದು.
AVM Productions: South India’s largest private studio producer passes away – ತುಳು ಟೈಮ್ಸ್
ಇದನ್ನೂ ಓದಿ :ನಿಮ್ಮ ಬಗ್ಗೆ ನೆಗೆಟಿವ್ ಮಾತುಗಳನ್ನು ಕೇಳಿ ಬೇಸರ ಆಗೋಗಿದ್ಯಾ? ಟ್ರಿಕ್ಸ್ ಲೈಫ್ ಚೇಂಜ್ ಮಾಡುತ್ತೆ!
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/3hCZb-Tbw3c?si=zWE8CjjLoF3gtJHE











