ಸಿನೆಮಾ : Tulu Times | ಭಾರತೀಯ ಚಲನಚಿತ್ರ ರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಜನಪ್ರಿಯತೆ ಪಡೆದ ನಟಿಯರಲ್ಲಿ ಮೊದಲಿಗರಲ್ಲೊಬ್ಬಳು ರಶ್ಮಿಕಾ ಮಂದಣ್ಣ. ಶ್ರೀಮಂತ ನಟನೆ, ನೈಸರ್ಗಿಕ ಸೌಂದರ್ಯ, ಹಾಗೂ ಸರಳ ವ್ಯಕ್ತಿತ್ವದಿಂದ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಕನ್ನಡದಿಂದ ತಲುಗು, ತಮಿಳು ಮತ್ತು ಬಾಲಿವುಡ್‌ವರೆಗೆ ವಿಸ್ತರಿಸಿದ ಅವರ ನಟನಾ ಪಯಣ ಇಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ.
ನೇರವಾಗಿ ಮಾತನಾಡುವ ಸ್ವಭಾವ ಮತ್ತು ವಿನಯಶೀಲತೆಯಿಂದ ಪರಿಚಿತರಾದ ರಶ್ಮಿಕಾ ಮಂದಣ್ಣ, ಜನರ ಮಾನಸಿಕ ಆರೋಗ್ಯ, ಮಹಿಳಾ ಶಕ್ತೀಕರಣ ಹಾಗೂ ಸೈಬರ್ ಸುರಕ್ಷತೆ ಇವುಗಳ ಬಗ್ಗೆ ಜನಜಾಗೃತಿ ಮೂಡಿಸಲು ಅವರು ಮುಂದೆ ಬರುತ್ತಾರೆ.
ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ;
ಕಳೆದ ಕೆಲವು ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮಾನವನ ಮುಖ, ಧ್ವನಿ, ಚಲನ, ಭಾವನೆಗಳನ್ನೇ ನಕಲಿಸಲು ಸಾಧ್ಯವಾಗುವ ಮಟ್ಟಕ್ಕೆ ಬಂದಿದೆ. ಇದರ ಪರಿಣಾಮವಾಗಿ ಹಲವು ಸಿನಿ ತಾರೆಯರ ಚಿತ್ರಗಳು, ವೀಡಿಯೊಗಳು ಮತ್ತು ಸಂದೇಶಗಳನ್ನು AI ಬಳಸಿ ತಯಾರಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ರಶ್ಮಿಕಾ ಮಂದಣ್ಣ ಕೂಡ ಈ ಪ್ರವಾಹದಿಂದ ಹೊರಗೇನಿಲ್ಲ. ಅಂದೊಮ್ಮೆ AI ಜನರೇಟ್ ಮಾಡಿದ ಚಿತ್ರಗಳು, ನಕಲಿ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಹುಟ್ಟಿಸಿವೆ. ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನಟಿ ರಶ್ಮಿಕಾ, AI ಪ್ರಗತಿಯ ಶಕ್ತಿಯಾಗಿದೆ, ಹೀಗಿದ್ದರೂ ಕೆಲವರು ಇದನ್ನು ದುರುಪಯೋಗ ಮಾಡಿಕೊಂಡು ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಅಲ್ಲದೇ ಕಟ್ಟುಕಥೆ ಸೃಷ್ಟಿ ಮಾಡುತ್ತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
Actress Rashmika Mandanna expresses dissatisfaction with AI – ತುಳು ಟೈಮ್ಸ್
ಇದನ್ನೂ ಓದಿ :ಇಂದು ಕನಚೂರು ಕ್ಲಾಕ್ ಟವರ್ ವೃತ್ತ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ !
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/o7ilIm7Hh6Y?si=w4F170pQb3iU1YZG











