ಬ್ರೇಕಿಂಗ್ ನ್ಯೂಸ್
ದೇಶ

ಪ್ರೇಮಿ ಕೊಲೆಯಾದ್ರೂ ಪ್ರೀತಿಗೆ ಕೊನೆಯಿಲ್ಲವೆಂದು ಮೃತದೇಹವನ್ನೇ ಮದುವೆಯಾದಳು..!

ಮಹಾರಾಷ್ಟ್ರ : Tulu Times ! ಪ್ರಾಮಾಣಿಕ ಪ್ರೀತಿ ಅಂದ್ರೆ ಇದೇ ನೋಡಿ. ಜೀವಂತವಾಗಿದ್ರೂ ಅಥವಾ ಇಲ್ಲದೇ ಇದ್ರೂ ಜೊತೆಗೇ ಬದುಕಿ ಬಾಳಬೇಕೆಂಬ ಕನಸು ಹೊತ್ತುಕೊಂಡಿರುವವರು. ಇಲ್ಲೊಬ್ಬ ವ್ಯಕ್ತಿ ಪ್ರೀತಿಯಿಂದ ಕೊಲೆಯಾದ್ರೆ, ಆತ ಜೀವಂತವಾಗಿಲ್ಲದಿದ್ದರೂ ಆತನನ್ನೇ ಮದುವೆಯಾಗಬೇಕೆಂಬ ಹೆಣ್ಣಿನ ಕಣ್ಣೀರಿನ ಕಥೆಯಿದೆ.

ಸಕ್ಷಮ್ ತಾಟೆ ಕೊಲೆಯಾದ ವ್ಯಕ್ತಿ. ಸಕ್ಷಮ್ ಮತ್ತು ಅಂಚಲ್ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಅಂಚಲ್‌ ಅವರ ಸಹೋದರ ಮತ್ತು ಸಕ್ಷಮ್ ಸ್ನೇಹಿತರಾಗಿದ್ದು, ಅಂಚಲ್‌ ಮನೆಗೆ ಸಕ್ಷಮ್ ಆಗಾಗ್ಗೆ ಭೇಟಿ ನೀಡುತ್ತಿದ್ದನು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಮನೆಯವರ ವಿರೋಧದ ನಡುವೆಯೂ ತಮ್ಮ ಸಂಬಂಧವನ್ನು ಮುಂದುವರಿಸಿದ್ದರು.

ಇಬ್ಬರ ಜಾತಿ ಬೇರೆಯಾಗಿದ್ದರಿಂದ ಈ ಸಂಬಂಧಕ್ಕೆ ಅಂಚಲ್‌ ಕುಟುಂಬ ಒಪ್ಪಿಗೆ ನೀಡಿರಲಿಲ್ಲ. ಸಕ್ಷಮ್‌ನನ್ನು ಮದುವೆಯಾಗಲು ಅಂಚಲ್ ನಿರ್ಧರಿಸಿರುವ ವಿಷಯ ಅಂಚಲ್‌ ತಂದೆ ಮತ್ತು ಸಹೋದರಿಗೆ ತಿಳಿದಿದ್ದು, ಈ ಮದುವೆಯನ್ನು ತಡೆಯಲು ಸಕ್ಷಮ್ಗೆ ಹೊಡೆದು, ತಲೆಗೆ ಗುಂಡು ಹಾರಿಸಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.

ಸಕ್ಷಮ್ ಅಂತ್ಯಕ್ರಿಯೆ ನಡೆಯುತ್ತಿರುವ ವೇಳೆ ಅವರ ಮನೆಗೆ ತೆರಳಿದ ಅಂಚಲ್‌, ಸಕ್ಷಮ್ ಮೃತದೇಹಕ್ಕೆ ಅರಿಶಿನ ಹಚ್ಚಿ, ತನ್ನ ಹಣೆ ಮೇಲೆ ಕುಂಕುಮ ಇಟ್ಟುಕೊಂಡಿದ್ದಾಳೆ. ಅಲ್ಲದೇ ತನ್ನ ಮುಂದಿನ ಜೀವನವನ್ನು ಸಕ್ಷಮ್ ಮನೆಯಲ್ಲಿಯೇ ಕಳೆಯುವುದಾಗಿ ಹೇಳಿದ್ದಾಳೆ.

‘ಸಕ್ಷಮ್ ಸತ್ತರೂ ನಮ್ಮ ಪ್ರೀತಿ ಗೆದ್ದಿದೆ. ನನ್ನ ತಂದೆ-ಸಹೋದರ ಸೋತಿದ್ದಾರೆ’ ಎಂದು ಅಂಚಲ್‌ ಹೇಳಿದ್ದಾಳೆ. ಸಕ್ಷಮ್ ಕೊಲೆ ಬಗ್ಗೆ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡುವಂತೆಯೂ ಒತ್ತಾಯಿಸಿದ್ದಾಳೆ.

She married the dead body, believing that love never ends even if her lover was murdered – ತುಳು ಟೈಮ್ಸ್

ಇದನ್ನೂ ಓದಿ :ರಿಷಭ್‌ ಶೆಟ್ಟಿ ಎದುರೇ ಕಾಂತಾರ ದೈವವನ್ನು ಅಣಕಿಸಿದ ರಣವೀರ್ ಸಿಂಗ್..!

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=YidEwN1tcxy0SzfO

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 20

You cannot copy content of this page