ದಕ್ಷಿಣ ಗೋವಾ : Tulu Times | ಧರ್ಮ, ನೀತಿ, ಸತ್ಯ, ಮತ್ತು ಆದರ್ಶ ಜೀವನದ ಪ್ರತೀಕವಾದ ಶ್ರೀರಾಮನು ಶ್ರೀಮಹಾವಿಷ್ಣುವಿನ ಏಳನೇ ಅವತಾರ ಎಂದು ಪುರಾಣಗಳು ಹೇಳುವುದನ್ನು ಕೇಳಿರುತ್ತೇವೆ. ಇದೀಗ ದಕ್ಷಿಣ ಗೋವಾದ ಕೆನಕೋನದ ಗೋಕರ್ಣ ಪರ್ತಗಾಳಿ ಗ್ರಾಮದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದಲ್ಲಿ ಪ್ರಧಾನಿ ಮೋದಿ ಅವರು 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಇಂದು (ನವಂಬರ್ 28) ಅನಾವರಣಗೊಳಿಸಿದರು. ಇದು ವಿಶ್ವದ ಅತಿ ಎತ್ತರದ ರಾಮನ ಮೂರ್ತಿ ಎನ್ನಲಾಗಿದೆ.
ಗುಜರಾತ್‌ನಲ್ಲಿನ ಸರ್ದಾರ್ ಪಟೇಲ್ ಅವರ ‘ಏಕತಾ ಪ್ರತಿಮೆ’ಯನ್ನು ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ ಅವರು ವಿನ್ಯಾಸಗೊಳಿಸಿದ್ದರು. ಅವರೇ ಗೋವಾದಲ್ಲಿಯೂ ರಾಮನ ಮೂರ್ತಿಯನ್ನು ವಿನ್ಯಾಸಗೊಳಿಸಿದ್ದಾರೆ. ಇದು ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದೇ ಸಂದರ್ಭದಲ್ಲಿ ‘ರಾಮಾಯಣ ಥೀಮ್ ಪಾರ್ಕ್ʼ ವಿನ್ಯಾಸಗೊಳಿಸಿದ್ದು, ಇದರಲ್ಲಿ ರಾಮಾಯಣ ಮಹಾಕಾವ್ಯದ ಪ್ರಮುಖ ಘಟನೆಗಳು ಮತ್ತು ಸನ್ನಿವೇಶಗಳನ್ನು ಕಲೆ ಮತ್ತು ಕಲಾಕೃತಿಗಳ ಮೂಲಕ ಸುಂದರವಾಗಿ ಪ್ರಸ್ತುತಪಡಿಸಲಾಗಿದೆ. ಇದರೊಂದಿಗೆ, ಈ ಐತಿಹಾಸಿಕ ಸಂದರ್ಭದ ಸ್ಮರಣಾರ್ಥವಾಗಿ ಪ್ರಧಾನಿ ಮೋದಿ ಅವರು ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವೊಂದನ್ನು ಸಹ ಬಿಡುಗಡೆ ಮಾಡಿದರು ಎನ್ನಲಾಗಿದೆ. The world’s tallest statue of Lord Rama unveiled – ತುಳು ಟೈಮ್ಸ್
ಇದನ್ನೂ ಓದಿ :ಕೃಷ್ಣನೂರಿನಲ್ಲಿ ಮೋದಿ ನೋಡಲು ಜನಸಾಗರ..ಕೃಷ್ಣನಂತೆ ಕಂಡ ಪ್ರಧಾನಿ..!
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zt875dd88R8?si=QHY–Io8ABkjlznX











