ಆರೋಗ್ಯ : Tulu Times | ಮೊಸರು ಮತ್ತು ಬೆಲ್ಲದ ಹೊಂದಾಣಿಕೆ ಸರಿಯೇ…? ಹೀಗಂತ ಹಲವರು ಅನುಮಾನ ವ್ಯಕ್ತಪಡಿಸುತ್ತಾರೆ. ಆದ್ರೆ, ಇವೆರಡರ ಸಂಯೋಜನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಮೆದುಳಿನ ಕೋಶಗಳನ್ನು ಆರೋಗ್ಯವಾಗಿಡುವುದರ ಜೊತೆಗೆ, ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.
ಮೊಸರು ಮತ್ತು ಬೆಲ್ಲ ಒಟ್ಟಿಗೆ ತಿಂದರೆ ದೇಹದಲ್ಲಿ ವಾತ, ಕಫ ಸಮತೋಲನಗೊಳಿಸಲು ಸಹ ಸಹಾಯಕವಾಗಿದೆ. ಮೊಸರಿನೊಂದಿಗೆ ಬೆಲ್ಲ ಸೇವಿಸುವುದರಿಂದ ರಕ್ತಹೀನತೆ ನಿವಾರಣೆ ಆಗುತ್ತದೆ ಹಾಗೂ ಚಯಾಪಚಯ ಕ್ರಿಯೆ ಆರೋಗ್ಯಕರವಾಗಿರುತ್ತದೆ.
ಮೊಸರು ಮತ್ತು ಬೆಲ್ಲ ದೇಹದ ಉಷ್ಣತೆಯನ್ನು ಸಹ ಕಾಪಾಡುತ್ತದೆ. ಒಂದು ವಿಶೇಷ ವಿಷಯವೆಂದರೆ ಮೊಸರು ಮತ್ತು ಬೆಲ್ಲವನ್ನು ಒಟ್ಟಿಗೆ ಸೇವಿಸುವುದರಿಂದ ರಕ್ತಹೀನತೆಯಂತಹ ಕಾಯಿಲೆಗಳು ಬರದಂತೆ ತಡೆಯುತ್ತದೆ. ಪ್ರತಿದಿನ ಒಟ್ಟಿಗೆ ಸೇವಿಸಿದರೆ, ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ ಮತ್ತು ಇದು ರಕ್ತ ಶುದ್ಧೀಕರಣದ ಕಾರ್ಯವನ್ನೂ ನಿರ್ವಹಿಸುತ್ತದೆ.
ಮೊಸರು ಮತ್ತು ಬೆಲ್ಲದ ಸೇವನೆಯು ಮೂಳೆಗಳಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇವೆರಡೂ ಒಟ್ಟಾಗಿ ಮೂಳೆಗಳನ್ನು ಬಲಪಡಿಸುತ್ತವೆ ಮತ್ತು ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮೊಸರು ಮತ್ತು ಬೆಲ್ಲದ ಸೇವನೆಯು ಮೂಳೆಗಳ ನಡುವೆ ತೇವಾಂಶವನ್ನು ಸೃಷ್ಟಿಸುತ್ತದೆ ಮತ್ತು ಸಂಧಿವಾತ ಮುಂತಾದ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. Is the combination of yogurt and jaggery good for health? – ತುಳು ಟೈಮ್ಸ್
ಇದನ್ನೂ ಓದಿ :ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ಶ್ಲಾಘಿಸಿದ ನರೇಂದ್ರ ಮೋದಿ…!
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/XB6d0r1sbnY?si=j9Wb0a_OmgkdFIQs











