ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ವ್ಯವಹಾರಗಳನ್ನು ಇಟ್ಟುಕೊಳ್ಳದಿರಿ…!

ಆರ್ ಬಿ ಐ : Tulu Times | ನಿಮ್ಮ ಎಲ್ಲಾ ಬ್ಯಾಂಕಿಂಗ್ ವ್ಯವಹಾರಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳಿ. ಏಕೆಂದರೆ, ಇನ್ನೇನು ಡಿಸೆಂಬರ್ ಈ ವರ್ಷದ ಕೊನೆಯ ತಿಂಗಳಲ್ಲಿ ರಜೆಗಳು ಹೆಚ್ಚಿರುವುದರಿಂದ ಬ್ಯಾಂಕಿಂಗ್ ಕೆಲಸವನ್ನು ಈ ತಿಂಗಳೊಳಗಾಗಿ ಮುಗಿಸಿಕೊಂಡರೆ ಉತ್ತಮ.

ಡಿಸೆಂಬರ್ (2025) ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇದು ಕರ್ನಾಟಕ ರಾಜ್ಯದ ಅಡಿಯಲ್ಲಿ ಬ್ಯಾಂಕುಗಳು ಮುಚ್ಚುವ ಕೆಲವು ರಜೆ ದಿನಗಳು ಹೀಗಿರುತ್ತವೆ ;
ಡಿಸೆಂಬರ್ 2025, ದಿನಾಂಕ 13, ಎರಡನೇ ಶನಿವಾರ ಬ್ಯಾಂಕ್ ರಜೆ, ಗುರುವಾರ 25 ಡಿಸೆಂಬರ್ ಕ್ರಿಸ್ ಮಸ್ ರಜೆ, ಶನಿವಾರ 27 ಡಿಸೆಂಬರ್ ನಾಲ್ಕನೇ ಶನಿವಾರ ಬ್ಯಾಂಕ್ ರಜೆ, ಇದರ ಜೊತೆಗೆ ಪ್ರತಿ ವಾರದ ಶನಿವಾರ ಮತ್ತು ಭಾನುವಾರಗಳು ಸಾಮಾನ್ಯವಾಗಿ ಬ್ಯಾಂಕ್ ಮುಚ್ಚಿರುತ್ತವೆ.ಕೆಲ ಬ್ಯಾಂಕ್ ಗಳು ಕೆಲಸ ಅನಿವಾರ್ಯವಾದಾಗ ಎಟಿಎಂ, ಆನ್ಲೈನ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ಕೆಲ ಸೇವೆಗಳನ್ನು ಒದಗಿಸುತ್ತವೆ. ಹಾಗಾಗಿ, ಇನ್ನು ಯಾವುದೇ ಬ್ಯಾಂಕಿಂಗ್ ಕೆಲಸಗಳಿರುವುದಾದರೆ — 13, 25, 27 ಡಿಸೆಂಬರ್ ರಜಾ ದಿನಗಳನ್ನು ಹಿಡಿದಿಟ್ಟು ಮುಂಚಿತವಾಗಿ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

ನೀವು ಹೊಸ ಖಾತೆ ತೆರೆಯಲು ಯೋಚಿಸುತ್ತಿದ್ದರೆ, ಸಾಲದ ದಾಖಲೆಗಳನ್ನು ಪೂರ್ಣಗೊಳಿಸಿ ಅಥವಾ ಡಿಸೆಂಬರ್ ನಲ್ಲಿ ಕರಡು ಪ್ರತಿಯನ್ನು ಮಾಡಿಸಬೇಕು ಅಂತ ಇದ್ರೆ ಈ ರಜೆಪಟ್ಟಿಯನ್ನು ನೋಡಿಯೇ ನೀವು ಅಂದಾಜು ಮಾಡಬೇಕಾಗುತ್ತದೆ. ತಿಂಗಳ ಕೊನೆಯ ತನಕ ಕಾಯುವುದನ್ನು ಬಿಟ್ಟು ಆದಷ್ಟು ಬೇಗ ನಿಮ್ಮ ಕೆಲಸಗಳನ್ನ ಮುಗಿಸಿಕೊಂಡರೆ ಉತ್ತಮ. ವರ್ಷದ ಕೊನೆಯ ತಿಂಗಳು ಇದಾಗಿದ್ದ ಕಾರಣ ಆರ್ ಬಿ ಐ ಪ್ರತಿ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಕೂಡ ಪ್ರಕಟಿಸುತ್ತಿರುತ್ತದೆ. ದೇಶಾದ್ಯಂತ ಹಬ್ಬಗಳು, ಕಾರ್ಯಕ್ರಮಗಳು ಮತ್ತು ಪ್ರಾದೇಶಿಕ ಆಚರಣೆಗಳಿಂದಾಗಿ ಸಾಲು ಸಾಲು ರಜೆಯಿಂದ ಬ್ಯಾಂಕ್ ಗಳು ಬಂದ್ ಆಗುತ್ತದೆ. ಉದಾಹರಣೆಗೆ ; ಅರುಣಾಚಲ ಪ್ರದೇಶದಲ್ಲಿ ಡಿಸೆಂಬರ್ ಒಂದರ ಸೋಮವಾರದಂದು ಸ್ಥಳೀಯ ಆಚರಣೆ ಹಿನ್ನೆಲೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ನಂತರ ಡಿಸೆಂಬರ್ ಮೂರರ ಬುಧವಾರ ಗೋವಾದಲ್ಲಿ ಸೇಂಟ್ ಫ್ರಾನ್ಸಿಸ್ ಅವರ ಹಬ್ಬವನ್ನು ಆಚರಿಸುವ ಧಾರ್ಮಿಕ ಹಬ್ಬವನ್ನು ಆಚರಿಸಲಾಗುತ್ತಿದೆ ಹೀಗಾಗಿ ಬ್ಯಾಂಕುಗಳಲ್ಲಿ ಅಲ್ಲಿ ರಜೆ ನೀಡಲಾಗುತ್ತದೆ. ಇದೇ ರೀತಿ ಹಲವು ಕಾರಣಗಳಿಂದ ನಮ್ಮ ಕರ್ನಾಟಕದಲ್ಲೂ ಕೂಡ ಬ್ಯಾಂಕುಗಳಿಗೆ ರಜೆ ಸಿಗಬಹುದು. ಹಾಗಾಗಿ, ವರ್ಷದ ಕೊನೆಯ ತಿಂಗಳ ತನಕ ಕಾಯಬೇಡಿ, ಏನೇ ವ್ಯವಹಾರಗಳಿದ್ದರೂ ಬೇಗ ಮುಗಿಸಿಕೊಳ್ಳಿ. Don’t do any banking business in December – ತುಳು ಟೈಮ್ಸ್

ಇದನ್ನೂ ಓದಿ :ನಿಮ್ಮ ಮನೆಯ ಒಳಗಡೆ ಕೆಂಬೂತ ಪಕ್ಷಿ ಹಾರಿಕೊಂಡು ಬಂತಾ..? ಹಾಗಾದ್ರೆ ನೀವು ಅದೃಷ್ಟವಂತರು!

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/XB6d0r1sbnY?si=j9Wb0a_OmgkdFIQs

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page