ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ಗೋವಾ ಸಿಎಂ ಭೇಟಿಯಾದ ರಿಷಭ್‌ ಶೆಟ್ಟಿ ಫ್ಯಾಮಿಲಿ..! ಫೋಟೋ ವೈರಲ್‌

ಸಿನಿಮಾ: Tulu Times |ಕನ್ನಡ ಚಿತ್ರರಂಗದ ಡಿವೈನ್‌ ಸ್ಟಾರ್‌, ನಿರ್ದೇಶಕ  ರಿಷಭ್‌ ಶೆಟ್ಟಿ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರನ್ನು ಭೇಟಿ ಆಗಿದ್ದಾರೆ. ಈ ಫೋಟೋವನ್ನು ಫೋಟೋಸ್ ಟೈಟರ್ನಲ್ಲಿ ಶೇರ್ ಮಾಡಿದ್ದಾರೆ.

ಈ ಕುರಿತು ಫೋಟೋ ಶೇರ್‌ ಮಾಡಿ ಬರೆದುಕೊಂಡ ರಿಷಭ್‌ ಶೆಟ್ಟಿ,  ಡಾ ಪ್ರಮೋದ್ ಸಾವಂತ್ ಅವರನ್ನು ಪಂಜಿಮ್ಮ ಮಹಾಲಕ್ಷ್ಮಿ ಆತ್ಮನೋದಲ್ಲಿ ಭೇಟಿಯಾಗುವ ಅದ್ಭುತ ಅವಕಾಶ ದೊರೆಯಿತು. ನಾವು ಗೋವಾ, ಸಿನಿಮಾ, ಅಭಿವೃದ್ಧಿ, ರಾಜ್ಯದ ಶ್ರೀಮಂತ ಸಂಸ್ಕೃತಿ ಬಗ್ಗೆ ಮಾತನಾಡಿದೆವು ಎಂದು ಬರೆದುಕೊಂಡಿದ್ದಾರೆ. ಈ ವೇಳೆ ರಿಷಭ್‌ ಪತ್ನಿ ಪ್ರಗತಿ ಶೆಟ್ಟಿ ಕೆಂಪು ಬ್ಲೌಸ್‌, ಬ್ಲಾಕ್ ಸೀರೆ ಉಟ್ಟಿದ್ದರು. ಇನ್ನು ರಿಷಭ್‌ ಶೆಟ್ಟಿ, ಬಿಳಿ ಪಂಚೆ, ಶರ್ಟ್ ಧರಿಸಿದ್ದರು. ಈ ಕ್ಯೂಟ್‌ ಕಪಲ್ಸ್‌  ಸಿಎಂ ಜೊತೆ ಇರುವ ಫೋಟೋಗಳು ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿವೆ.

ಕಾಂತಾರಾ ಚಾಪ್ಟರ್ 1 ಸಿನಿಮಾ ಸಕ್ಸಸ್ ಆದ ನಂತರ ರಿಷಬ್ ಶೆಟ್ಟಿ ಹಾಗೂ ಫ್ಯಾಮಿಲಿ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಜನರ ನಿರೀಕ್ಷೆಗೆ ಮೋಸ ಮಾಡದೆ ಕಾಂತರಾ ಚಾಪ್ಟರ್ 1 ವಿಶ್ವಾದ್ಯಂತ ಹೆಸರು ಮಾಡಿತ್ತು. ಕರಾವಳಿಯ ಸೊಗಡು ಹಾಗೂ ಕರಾವಳಿಯ ಕಥೆಯನ್ನು ಜನರಿಗೆ ಮುಟ್ಟಿಸುವಲ್ಲಿ ರಿಷಬ್ ಶೆಟ್ಟಿ ಅವರು ಮುಂಚೂಣಿಯಲ್ಲಿ ಇದ್ದಾರೆ. ವರ್ಷಾನುಗಟ್ಟಲೆಯಿಂದ ಒಂದು ಸಿನಿಮಾಕ್ಕಾಗಿ ದುಡಿದು ಸಕ್ಸಸ್ ಕಂಡ ನಂತರ ರಿಶಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿಶೆಟ್ಟಿ ಹಲವಾರು ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗುತ್ತಿದ್ದಾರೆ.

ಕಾಂತಾರ ಸಿನಿಮಾ ಸಕ್ಸಸ್‌ನ ಬಳಿಕ ರಿಷಬ್ ಶೆಟ್ಟಿ ಅವರ ಲೈಫ್ ಸ್ಟೈಲ್ ಸಂಪೂರ್ಣವಾಗಿ ಬದಲಾಗಿದೆ ತಲುಪಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಕನ್ನಡದಲ್ಲಿ ಯಾವುದೇ ಬೇರೆ ಸಿನಿಮಾಗಳು ಸಕ್ಸಸ್ ಕಾಣದೆ ಇದ್ದ ಟೈಂನಲ್ಲಿ ಕಾಂತಾರ ಕನ್ನಡ ಚಿತ್ರರಂಗವನ್ನು ಬಹುದೊಡ್ಡ ಮಟ್ಟಿಗೆ ಕರೆದೊಯ್ದಿದೆ. ಕಾಂತರಾ ಸಿನಿಮಾದ ಸಕ್ಸಸ್ ಅನ್ನು ಜನ ಪ್ರೀತಿಯಿಂದ ಎಂಜಾಯ್ ಮಾಡುತ್ತಿದ್ದಾರೆ. ಕಾಂತರಾಜ್ ಚಾಪ್ಟರ್ ಒನ್ ಸಿನಿಮಾ ಒಂದು ಸಾವಿರ ಕೋಟಿ ಹತ್ತಿರ ದಾಖಲೆಯನ್ನು ಮಾಡಿ ಇತಿಹಾಸವನ್ನು ಸೃಷ್ಟಿಸುವಲ್ಲಿ ಮುಂದಾಗಿದೆ.

Rishabh Shetty’s family meets Goa CM..! Photo goes viral- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page