ಮುಂಬೈ: Tulu Times | RSS ಗೆ ಅಪಹಾಸ್ಯ ಮಾಡುವಂತಹ ಟೀ ಶರ್ಟ್ ಧರಿಸಿ ಕಾಮಿಡಿಯನ್ ಕುನಾಲ್ ಕಾಮ್ರಾ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ನೀವು ಲವ್ವಲ್ಲಿ ಬಿದ್ದು ಒದ್ದಾಡುತ್ತಿದ್ದೀರಾ..? ದಯವಿಟ್ಟು ಗಮನವಿಟ್ಟು ಓದಿ!
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅಪಹಾಸ್ಯ ಮಾಡುವ ಟಿ-ಶರ್ಟ್ ಧರಿಸಿದ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಇದೀಗ ಈ ಕಾರಣಕ್ಕೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದು,
ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದೆ. ಈ ಫೋಟೋ ಕಾಮಿಡಿ ಶೋನಲ್ಲಿ ತೆಗೆದಿದ್ದಲ್ಲ ಎಂದು ಕ್ಯಾಪ್ಶನ್ ಕೊಟ್ಟುಕೊಂಡಿದ್ದಾರೆ. ಈ ಫೋಟೋ ದೇಶದಾದ್ಯಂತ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ನಿಮ್ಮ ಮನೆಯ ಒಳಗಡೆ ಕೆಂಬೂತ ಪಕ್ಷಿ ಹಾರಿಕೊಂಡು ಬಂತಾ..? ಹಾಗಾದ್ರೆ ನೀವು ಅದೃಷ್ಟವಂತರು!
ಕಾಮಿಡಿಯನ್ ಧರಿಸಿದ್ದ ಟೀ ಶರ್ಟ್ ನಲ್ಲಿ ಏನಿತ್ತು..?
ಆರ್‌ಎಸ್‌ಎಸ್ ಎಂದು ಕೇಸರಿ ಬಣ್ಣದಲ್ಲಿರುವ ಆಂಗ್ಲದ ಅಕ್ಷರದ ಮೇಲೆ ನಾಯಿಯೊಂದು ಮೂತ್ರ ವಿಸರ್ಜನೆ ಮಾಡುವಂತಹ ಟೀ ಶರ್ಟ್ ಧರಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆರ್‌ಎಸ್‌ಎಸ್ ಅಕ್ಷರದ ಮೇಲೆ ನಾಯಿ ಮೂತ್ರ ಮಾಡುತ್ತಿರುವ ಚಿತ್ರವಿದ್ದ ಟೀ-ಶರ್ಟ್ ಅನ್ನು ಕಾಮಿಡಿಯನ್ ಕುನಾಲ್ ಕಾಮ್ರಾ ಧರಿಸಿದ್ದರು. ಈ ಬಗ್ಗೆ ಹಿರಿಯ ಬಿಜೆಪಿ ನಾಯಕ ಚಂದ್ರಶೇಖರ್ ಬವಾಂಕುಲೆ ಆನ್‌ಲೈನ್‌ನಲ್ಲಿ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ: ಭಕ್ತರೊಬ್ಬರ ಬ್ಯಾಗ್‌ನಿಂದ 97 ಗ್ರಾಮ್ ಚಿನ್ನ ಕಳವು – ಇಬ್ಬರ ಬಂಧನ
ಸೋಷಿಯಲ್ ಮೀಡಿಯಾದಲ್ಲಿ ಇಂತಹ ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಬಿಜೆಪಿಯ ಹಿರಿಯ ನಾಯಕ ಚಂದ್ರಶೇಖರ್ ಬವಾಂಕುಲೆ ಎಚ್ಚರಿಸಿದ್ದಾರೆ ಸಂಜಯ್ ಶಿರ್ಸಾತ್ ಈ ಬಗ್ಗೆ ಮಾತನಾಡಿ, ಈ ಹಿಂದೆ ಕಾಮಿಡಿ ಶೋ ವೇಳೆ ಪ್ರಧಾನಿ ಮೋದಿ ಮತ್ತು ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡಿದ್ದರು. ಈಗ ಆರ್‌ಎಸ್‌ಎಸ್ ಮೇಲೆ ದಾಳಿ ಮಾಡುವ ಧೈರ್ಯ ತೋರಿದ್ದಾರೆ. ಇದಕ್ಕೆ ಬಿಜೆಪಿ ತಕ್ಕ ಉತ್ತರ ನೀಡಬೇಕಿದೆʼ ಎಂದಿದ್ದಾರೆ.
Comedian lands in controversy again for wearing a T-shirt mocking RSS! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











