ಲೈಫ್ ಸ್ಟೈಲ್: Tulu Times | ನಾವು ಬಹುತೇಕರು ಮನೆಯಲ್ಲಿ ಕೂತು ಕೂತು ಬೇಸರಗೊಂಡಿರುತ್ತವೆ ಅನೇಕರು ತಮ್ಮ ದಿನನಿತ್ಯದ ಕೆಲಸವನ್ನು ಬಿಟ್ಟು ಮನೆಯಲ್ಲಿ ಬೇಜಾರು ಅನುಭವ ಮಾಡುತ್ತಾರೆ ಇಂಥವರಿಗೆ ಸರಳ ವಾದಂತಹ ಟಿಪ್ಸ್ ಗಳನ್ನು ಹೇಳ್ತೀನಿ ಈ ಸ್ಟೋರಿ ಓದಿ…
ನಾವು ಪ್ರತಿನಿತ್ಯದ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಒಂಟಿತನ ಅನುಭವಿಸುತ್ತೇವೆ ಎಲ್ಲೋ ಒಂದು ಕಡೆ ಪ್ರತಿದಿನ ರೂಟಿನ್ ಆಗಿ ಇರುವುದೇ ಹೆಚ್ಚಾಗಿರುತ್ತದೆ ಇನ್ನು ಇದರಿಂದಾಗಿ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳು ಬಹಳ ನಿಧಾನಗತಿಯಲ್ಲಿ ಸಾಗುತ್ತದೆ ಮನೆಯಲ್ಲಿ ಎಷ್ಟು ಅಂತ ಕುಳಿತುಕೊಳ್ಳೋಣ ಅಂತ ಮನಸ್ಸು ಚಡಪಡಿಸುತ್ತಾ ಇರುತ್ತದೆ ಮನಸ್ಸಿಗೆ ಏನೋ ಒಂದು ಬೇಸರವಾದಾಗ ಮನೆಯಿಂದ ಆಚೆ ಹೋಗೋಣ ಅಥವಾ ಏನಾದರೂ ಮನಸ್ಸಿಗೆ ನೆಮ್ಮದಿ ತರುವಂತಹ ವಿಚಾರಗಳ ಕಡೆ ಗಮನಹರಿಸೋಣ ಅಂತ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಅನಿಸುತ್ತಾಲೇ ಇರುತ್ತದೆ.
ಹೂವಿನ ಗಿಡ ನೆಟ್ಟು ನೋಡಿ..!
ನಮ್ಮಲ್ಲಿ ಬಹುತೇಕ ಜನ ಮನಸ್ಸಿಗೆ ಬೇಸರವಾದಾಗ ಒಬ್ಬಂಟಿಯಾಗಿ ಕುಳಿತು ಆಲೋಚನೆ ಮಾಡುತ್ತಿರುತ್ತಾರೆ ಇದರಿಂದ ಮನಸ್ಸಿನ ನೋವು ಇನ್ನು ಕೂಡ ಜಾಸ್ತಿಯಾಗುತ್ತದೆ ಹಾಗಾಗಿ ನಿಮ್ಮ ಮನಸ್ಸು ನಿರಾಳತೆಯಿಂದ ಕೂಡಿರಲು ಹೂವಿನ ಗಿಡವನ್ನು ನಿಧಿ ಅಥವಾ ನಿಮ್ಮ ಮನೆಯ ಗಾರ್ಡನ್ ಕಡೆ ತೆರಳಿ ಅಲ್ಲಿರುವಂತಹ ಗಿಡಗಳನ್ನು ಹೂವುಗಳನ್ನು ಮುಟ್ಟಿ ಸಾಕಿ ಸಲುಹಿ ಅದರ ಜೊತೆಗೆ ಹೂವಿನ ಗಿಡಕ್ಕೆ ನೀರು ಹಾಕುವುದನ್ನು ಮಾಡಿ ಇದರಿಂದ ನಿಮ್ಮ ಬೇಸರ ಕಡಿಮೆಯಾಗುತ್ತದೆ ಜೊತೆಗೆ ಪ್ರಕೃತಿಯ ಜೊತೆಗೆ ನಿಮ್ಮ ಬಾಂಧವ್ಯ ಹೆಚ್ಚಾಗಲು ಶುರುವಾಗುತ್ತದೆ.
ಪುಸ್ತಕಗಳನ್ನು ಓದಿ..!
ಮನೆಯಲ್ಲಿ ಕೂತು ಕೂತು ಬೇಸರವಾದಾಗ ಮನಸ್ಸು ಏನು ಮಾಡೋಣ ಅಂತ ಯೋಚನೆ ಮಾಡುತ್ತಾ ಇರುತ್ತದೆ ಹಾಗಾಗಿ ಇಂತಹ ಸಮಯದಲ್ಲಿ ಪುಸ್ತಕಗಳನ್ನು ಓದುವಂತಹ ಹವ್ಯಾಸವನ್ನು ಇಟ್ಟುಕೊಳ್ಳಿ ಇದರಿಂದ ನಿಮ್ಮ ಒಂಟಿತನ ಕಡಿಮೆಯಾಗುತ್ತದೆ ಜೊತೆಗೆ ನೀವು ರಿಲಾಕ್ಸ್ ಆಗುವಿರಿ ನಿಮ್ಮ ಬುದ್ಧಿ ಶಕ್ತಿ ಕೂಡ ಗಟ್ಟಿಯಾಗುತ್ತದೆ ಇದರಿಂದ ನಿಮಗೆ ಬೇಜಾರು ಇರುವುದಿಲ್ಲ ಮೊದಲು ಕಷ್ಟ ಎಣಿಸಬಹುದು ಆದರೆ ನಂತರ ನಿಮಗೆ ಪುಸ್ತಕಗಳ ಮೇಲಿನ ಪ್ರೀತಿ ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ತಮ್ಮ ಒತ್ತಡದ ಜೀವನದಿಂದ ಪುಸ್ತಕಗಳನ್ನು ಓದುವತ್ತ ಗಮನಹರಿಸುವುದೇ ಇಲ್ಲ.
ನಿಮ್ಮ ಫೇವ್ರೆಟ್ ಸ್ಥಳಕ್ಕೆ ಭೇಟಿ ನೀಡಿ!
ಮನಸ್ಸಿಗೆ ಬೇಸರವಾದಾಗ ನಿಮಗೆ ಇಷ್ಟವಿರುವಂಥ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿರುವಂತಹ ಆ ಮೌನ ಹಾಗೂ ಪ್ರಕೃತಿಯನ್ನು ಸವಿಯಿರಿ.. ನೀವು ಬೇಸರದಲ್ಲಿದ್ದಾಗ ನಿಮ್ಮ ಮನಸ್ಸಿಗೆ ಮುದ ನೀಡುವಂತಹ ಸ್ಥಳಗಳಿಗೆ ಭೇಟಿ ನೀಡಿ ಇದರಿಂದ ನಿಮ್ಮ ಮನಸ್ಸು ಹತೋಟಿಗೆ ಬರುತ್ತದೆ ಜೊತೆಗೆ ಮನಸ್ಸಲ್ಲಿರುವಂತ ಬೇಸರ ದೂರವಾಗುತ್ತದೆ.
ನಿಮ್ಮ ಗೆಳೆಯ ಗೆಳತಿಯರನ್ನು ಮೀಟ್ ಆಗಿ..!
ನೀವು ಮನೆಯಲ್ಲಿ ಒಬ್ಬರೇ ಕೂತು ಬೇಸರಗೊಂಡಿದ್ದರೆ ನಿಮ್ಮ ಪ್ರೀತಿಯ ಗೆಳತಿ ಅಥವಾ ಗೆಳೆಯರನ್ನು ಭೇಟಿಯಾಗಿ ಅವರ ಜೊತೆ ಸಮಯ ಕಳೆಯಿರಿ ಇದರಿಂದ ನಿಮ್ಮ ಮನಸ್ಸಿಗೂ ಖುಷಿಯಾಗುತ್ತದೆ ಜೊತೆಗೆ ನಿಮ್ಮ ಫ್ರೆಂಡ್ಸ್ ಗಳಿಗೂ ಕೂಡ ಖುಷಿಯಂತ ಅನಿಸುತ್ತದೆ. ನಿಮ್ಮ ಫ್ರೆಂಡ್ಸ್ ಜೊತೆಗೆ ಟ್ರಿಪ್ ಹೋಗುವಂತಹ ಒಂದು ಪ್ಲಾನ್ ಮಾಡಿಕೊಳ್ಳಿ ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಒಂದು ಚೌಕಟ್ಟಿನಂತಹ ಜೀವನ ಶೈಲಿಯಿಂದ ಸಮಾಜದ ವಿಭಿನ್ನ ಜನರ ಜೊತೆ ಮಾತನಾಡಿ, ಇದರಿಂದ ನಿಮ್ಮ ಜ್ಞಾನ ಹೆಚ್ಚುತ್ತದೆ ಜೊತೆಗೆ ಸಾಗುವ ದಾರಿಯ ಬಗ್ಗೆ ಪಾಸಿಟಿವ್ ಯೋಚನೆ ಬರುತ್ತದೆ.
Are you bored sitting at home? Follow these tips!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











