ಸಿನಿಮಾ: Tulu Times | ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದರ ಜೊತೆ ಅಧಿಕೃತವಾಗಿ ಕೈಜೋಡಿಸಿದೆ. ಈ ವರ್ಷದ ಬಹುನಿರೀಕ್ಷಿತ, ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಜೊತೆ ಏರ್‌ಟೆಲ್ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: ದೇಶದ ಗೌಪ್ಯತೆಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ವ್ಯಕ್ತಿಗಳ ಬಂಧನ
ಬಿಡುಗಡೆ ದಿನಾಂಕ ಯಾವಾಗ..?
ಈ ಅದ್ದೂರಿ ಚಿತ್ರವು ಡಿಸೆಂಬರ್ 25 ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಏರ್‌ಟೆಲ್ ಗ್ರಾಹಕರಿಗೆ ವಿಶೇಷ ಆಫರ್ ಬಗ್ಗೆ ನೋಡೋದಾದ್ರೆ, ಈ ಸಂಭ್ರಮವನ್ನು ಆಚರಿಸಲು ಏರ್‌ಟೆಲ್ “ಮಾರ್ಕ್ ಎಕ್ಸ್‌ಕ್ಲೂಸಿವ್ ಪ್ಯಾಕ್” ಅನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ, ಗ್ರಾಹಕರು ಹೊಸದಾಗಿ ಬಿಡುಗಡೆಯಾದ ‘9 ಸೀರೀಸ್’ (9 series) ನಂಬರ್‌ಗಳಿರುವ ಸಿಮ್ ಕಾರ್ಡ್‌ಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೆ, ಅಭಿಮಾನಿಗಳಿಗಾಗಿ ಒಂದು ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದ್ದು, ಇದರಲ್ಲಿ ಗೆಲ್ಲುವ 100 ಅದೃಷ್ಟಶಾಲಿಗಳಿಗೆ ‘ಮಾರ್ಕ್’ ಚಿತ್ರದ ಉಚಿತ ಟಿಕೆಟ್‌ಗಳನ್ನು ಬಹುಮಾನವಾಗಿ ನೀಡಲಾಗುವುದು.
ಇದನ್ನೂ ಓದಿ: ಗಂಗಾರತಿಯ ರೀತಿಯಲ್ಲೇ ಕಲುಷಿತಗೊಳ್ಳುತ್ತಿರುವ ನದಿಗೆ ಪೂಜೆ ಸಲ್ಲಿಸುತ್ತಿರುವ ಭಕ್ತರು
ಈ ಒಪ್ಪಂದದ ಅಂಗವಾಗಿ ಕಿಚ್ಚ ಸುದೀಪ್ ಅವರು ಏರ್‌ಟೆಲ್ ಕರ್ನಾಟಕದ ಸಿಇಒ ರಜನೀಶ್ ವರ್ಮಾ ಅವರನ್ನು ಭೇಟಿ ಮಾಡಿದರು. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.
ಇತ್ತೀಚೆಗೆ ಮಾರ್ಕ್’ ಸಿನಿಮಾ ಚಿತ್ರೀಕರಣ ಮುಗಿದಿತ್ತು. ಈಗ ಪೋಸ್ಟ್ ಪ್ರೊಡಕ್ಷನ್, ಡಬ್ಬಿಂಗ್ ಕೆಲಸಗಳು ಭರದಿಂದ ಸಾಗುತ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸೂಪರ್ ಹಿಟ್ ‘ಮ್ಯಾಕ್ಸ್’ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಕೂಡ ಬರ್ತಿರೋದು ಕುತೂಹಲ ಮೂಡಿಸಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಮಾರ್ಕ್’. ಸತ್ಯಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಮ್ಯಾಕ್ಸ್’ ಚಿತ್ರದ ಕಥೆಗೂ ‘ಮಾರ್ಕ್’ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಅದೇ ರೀತಿ ಒಂದು ರಾತ್ರಿಯಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
Airtel partners with Sudeep’s film ‘Mark’!- ತುಳುಟೈಮ್ಸ್
ಇದನ್ನೂ ಓದಿ: ಕಾವೇರಿ ನದಿಯ ಒಡಲಿಗೇ ಮಣ್ಣು ತುಂಬಿ ಅವಾಂತರ…!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











