ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಡೆವಿಲ್ ಸಿನಿಮಾ ಪ್ರಚಾರದ ಹೊಣೆ ಹೊತ್ತ ವಿಜಯಲಕ್ಷ್ಮೀ..! ಸಿನಿಮಾ ಗೆಲ್ಲುತ್ತಾ..?

ಸಿನಿಮಾ: Tulu Times|‌ ನಟ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾ ರಿಲೀಸ್‌ ಗೆ ಇನ್ನು 20 ದಿನ ಬಾಕಿಯಿದೆ. ಹಾಗಾಗಿ ದರ್ಶನ್‌ ಪತ್ನಿವಿಜಯಲಕ್ಷ್ಮೀ  ಪ್ರಚಾರದ ಹೊಣೆ ಹೊತ್ತಿದ್ದಾರೆ.

ಆದ್ರೆ  ನಟ ದರ್ಶನ್‌ ಜೈಲಿನಲ್ಲಿದ್ದಾರೆ, ಇದರ ಮಧ್ಯೆ ಪ್ರಚಾರದ ಕಥೆ ಏನು ಎನ್ನುವಾಗಲೇ ನಾನಿದ್ದೀನಿ ಅಂತ ವಿಜಯಲಕ್ಷ್ಮೀ ಅಭಯ ತೋರಿದ್ದಾರೆ.  ಒಂದು ಕಾಲಕ್ಕೆ ಸ್ಯಾಂಡಲ್ ವುಡ್ ನ ನಂಬರ್ ಒನ್ ಸ್ಟಾರ್ ಆಗಿದ್ದ ನಟ ದರ್ಶನ್  ಸಿನಿಮಾ ಬರುತ್ತೆ ಅಂದ್ರೆ ಬಾಕ್ಸಫೀಸ್ ರಂಗೇರುತ್ತಿತ್ತು.

ಸದ್ಯ ದರ್ಶನ್ ನಟನೆಯ ಡೆವಿಲ್ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಇನ್ನು ಉಳಿದಿರೋದು ಕೇವಲ 20 ದಿನ ಮಾತ್ರ.
ದರ್ಶನ್ ಇಲ್ಲದ ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿರೋ ಪ್ರಕಾಶ್ ಗೆ ಸ್ಯಾಂಡಲ್ ವುಡ್ ನಿಂದ ಯಾರ ಬೆಂಬಲವೂ ಸಿಗುತ್ತಿಲ್ಲ. ದರ್ಶನ್ ಇದ್ದಾಗ ಡಿಸ್ಟ್ರಿಬ್ಯೂಷನ್ ರೈಟ್ಸ್ ಗೆ ಮುಗಿ ಬೀಳ್ತಾ ಇದ್ದ, ಒಂದು ಥಿಯೇಟರ್ ನಲ್ಲಿ ದರ್ಶನ್ ಸಿನಿಮಾ ಹಾಕಲು ಅವಕಾಶ ಸಿಕ್ರೂ ಸಾಕು ನಮ್ಮ ಬದುಕು ಬದಲಾಗುತ್ತೆ ಅಂತಿದ್ದ ಡಿಸ್ಟ್ರಿಬ್ಯೂಟರ್ ಗಳು ಡೆವಿಲ್ ನ ರೈಟ್ಸ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.  ಇಂತಹ ಸಂಕಷ್ಟದ ಸಮಯದಲ್ಲಿ  ನಾನಿದ್ದೇನೆ ಅಂತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಡೆವಿಲ್ ಟೀಮ್ ಗೆ ಶಕ್ತಿ ತುಂಬಲು ಮುಂದಾಗಿದ್ದಾರೆ.

ವಿಜಯಲಕ್ಷ್ಮೀ ದರ್ಶನ್ ಇದುವರೆಗೂ ಯಾವ ಸಿನಿಮಾ ಪ್ರಚಾರದಲ್ಲೂ ಪಾಲ್ಗೊಂಡಿರಲಿಲ್ಲ. ಯಾವ ಸಿನಿಮಾ ಈವೆಂಟ್ ನಲ್ಲೂ ಭಾಗವಹಿಸ್ತಾ ಇರಲಿಲ್ಲ. ಇದೀಗ, ಮೊದಲ ಹೆಜ್ಜೆ ಇಟ್ಟಿರೋ ವಿಜಯಲಕ್ಷ್ಮೀ ರಾಜ್ಯಾದ್ಯಂತ ಇರೋ ದರ್ಶನ್ ಫ್ಯಾನ್ ಗ್ರೂಪ್ ಗಳ ಅಡ್ಮಿನ್ ಗಳನ್ನ ಒಂದೇ ಸೂರಿನಡಿ ಸೇರಿಸಿದ್ದಾರೆ.  ದರ್ಶನ್ ಫ್ಯಾನ್ಸ್ ಅಸೋಸಿಯೇಷನ್ ನ ಮೆಂಬರ್ ಗಳನ್ನೆಲ್ಲಾ ವಿಜಯಲಕ್ಷ್ಮೀ ಒಂದು ಗೂಡಿಸಿದ್ರು.. ಚಿತ್ರತಂಡದ ಜೊತೆ ಸಿನಿಮಾ ಪ್ರಚಾರ ಹೇಗೆ ಮಾಡಬೇಕು.

ಹೇಗೆಲ್ಲಾ ತಾವು ಒಟ್ಟಾಗಿ ಮುನ್ನಡೆಯಬೇಕು.. ಡೆವಿಲ್ ಗೆಲುವಿಗೆ ಕಾರಣರಾಗಬೇಕು ಅಂತ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ  ವಿಜಯಲಕ್ಷ್ಮೀ ತನ್ನ ಪತಿಗೆ ಸಪೋರ್ಟಿವ್ ಅಗಿ ನಿಂತಿದ್ದರು. ತನ್ನ ಪತಿ ಜೈಲಲ್ಲಿರೋ ಹೊತ್ತಲಿ ಬರ್ತಿರೋ ಡೆವಿಲ್ ಸಿನಿಮಾನ ಗೆಲ್ಲಿಸಲೇಬೇಕು ಅಂತ ಪಣತೊಟ್ಟಿದ್ದಾರೆ. ವಿಜಯಲಕ್ಷ್ಮೀ ಅವರ  ಪರಿಶ್ರಮಕ್ಕೆ ದರ್ಶನ್ ಫ್ಯಾನ್ಸ್ ಖುಷ್ ಆಗಿದ್ದಾರೆ. ನಿಜವಾದ ಆದರ್ಶ ಪತ್ನಿ ನಮ್ಮ ಅತ್ತಿಗೆ ವಿಜಯಲಕ್ಷ್ಮೀ ಅಂತ ಬಹುಪರಾಕ್ ಹೇಳ್ತಾ ಇದ್ದಾರೆ.

Vijayalakshmi takes charge of promoting the movie Devil..!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page