ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

Dharmastala : ಬೆಳ್ತಂಗಡಿ ಕೋರ್ಟ್ ಗೆ 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ…!

Dharmastala : ಮಾಧ್ಯಮಗಳನ್ನು, ತನಿಖಾಧಿಕಾರಿಗಳನ್ನು ನಿದ್ದೆಗೆಡಿಸುವಂತೆ ಪ್ರತಿಯೊಂದು ಲೈವ್ ನ ಮೂಲಕ ತಿಳಿಸುತ್ತಾ ಧರ್ಮಸ್ಥಳದ ಕೇಸ್ ನಲ್ಲಿ ಹೂತಿದ್ದ ಶವಗಳನ್ನು ಮೇಲೆತ್ತುವ ಪ್ರಕರಣದಲ್ಲಿ ಅದೆಷ್ಟು ಸತ್ಯಗಳು ಬಯಲಾಗಿವೆ ? ಇದರ ಹಿಂದಿನ ಇತಿಹಾಸ ಏನು ? ಆರೋಪಿಗಳು ಯಾರು ? ಏನಿದರ ಸತ್ಯಾಂಶ..? ಇತ್ಯಾದಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವಂತೆ ಇಂದು ಚಾರ್ಜ್ ಶೀಟ್ ನ್ನು ಕೋರ್ಟ್ ಗೆ ಒಪ್ಪಿಸಲಾಗುತ್ತಿದೆ ಎಂದು ವರದಿಯಾಗಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾರೆ ಎಂಬ ಅಪಪ್ರಚಾರದ ಕೇಸ್ ನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಕೋರ್ಟ್ ಗೆ ಇವತ್ತು ಎಸ್ ಐ ಟಿ ಟೀಂ ಒಟ್ಟು 4000 ಪುಟದ ಚಾರ್ಜ್ ಶೀಟ್ ಸಲ್ಲಿಸಲಿದೆ. ಎಸ್ಐಟಿ ತಂಡದ ಮುಖ್ಯ ಎಸ್‌ಐಟಿ, ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಇದನ್ನು ಕೋರ್ಟ್ ಗೆ ಸಲ್ಲಿಸಲಿದ್ದು, ಒಟ್ಟು ಆರು ಜನರ ಹೆಸರನ್ನು ಉಲ್ಲೇಖಿಸಿದಂತೆ ಚಾರ್ಜ್ ಶೀಟ್ ರೆಡಿಯಾಗಿರುತ್ತದೆ ಎನ್ನಲಾಗಿದೆ.

ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ, ಎಸ್‌ಐಟಿ ಈ ವರದಿಯನ್ನು ಸಿದ್ಧಪಡಿಸಿದ್ದು, ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 20 ರಂದು ರಾಜ್ಯ ಸರ್ಕಾರ ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಿತ್ತು. ತದನಂತರ ನಡೆದ ಎಲ್ಲಾ ಬೆಳವಣಿಗೆಯನ್ನು ಮಾಧ್ಯಮಗಳಿಂದ ನೇರಪ್ರಸಾರದಲ್ಲಿ ನೋಡಲಾಗಿತ್ತು. ಇದರ ಸಂಪೂರ್ಣ ಮಾಹಿತಿಯನ್ನು ನೀಡಿದ ಗಡುವಿನಲ್ಲಿ ಎಸ್ ಐಟಿ ತಂಡವು ತನಿಖೆಯನ್ನು ನಡೆಸಿ ಚಾರ್ಜ್ ಶೀಟ್ ತಯಾರು ಮಾಡಿ ಅದು ಕೊನೆಯ ಹಂತಕ್ಕೆ ತಲುಪಿದ್ದು ಇದೀಗ ಕೋರ್ಟ್ ಗೆ ಸಲ್ಲಿಸಲು ಕ್ಷಣಗಣನೆಯಲ್ಲಿದೆ.

ಇದನ್ನೂ ಓದಿ :Bengaluru: ನ.26 ರಿಂದ ಬಿಜೆಪಿ ‘ಭೀಮ ನಡೆ’: ಆರ್.ಅಶೋಕ್..!

…..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/y-ir1Jy2T40?si=tTkUySKt1kRjkGWm

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page