Men’s Day: ಇಂದು ಪುರುಷರ ದಿನ.. ಹಾಗಾಗಿ ಪ್ರತಿಯೊಬ್ಬ ಪುರುಷನು ಈ ದಿನದ ಮಹತ್ವವನ್ನು ತಿಳಿಯಲೇಬೇಕು ಇಂತಹ ವಿಶೇಷ ದಿನಾಚರಣೆಯನ್ನು ಪುರುಷರು ಹೆಚ್ಚಿನವರು ತಿಳಿದುಕೊಂಡಿರಲಿಕ್ಕಿಲ್ಲ ಅಂತವರು ಈ ಸ್ಟೋರಿಯನ್ನು ಓದಿ.
ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರು ಒಂದೇ ಎನ್ನುವಂತಹ ವಾಕ್ಯ ಇದೆ. ಮಹಿಳೆಗೆ ಎಷ್ಟು ಪ್ರೋತ್ಸಾಹ ನೀಡುತ್ತೇವೆಯೋ ಅದೇ ರೀತಿಯಾಗಿ ಪುರುಷರಿಗೂ ಕೂಡ ಮಹಿಳೆಯರು ಎಲ್ಲಾ ವಿಷಯದಲ್ಲೂ ಬೆಂಬಲವಾಗಿ ನಿಲ್ಲುತ್ತಾರೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಪುರುಷರಷ್ಟೇ ಮಹಿಳೆಯರು ಕೂಡ ಸಾಧನೆ ಮಾಡುತ್ತಿದ್ದಾರೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಸಮಾಜದಲ್ಲಿ ಮಹಿಳೆಯರಿಂದ ಶೋಷಣೆಯನ್ನು ಅನುಭವಿಸುತ್ತಿರುವುದು ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಮಹಿಳೆಯರು ಪುರುಷರ ಮೇಲೆ ಏನು ಬೇಕಾದರೂ ಹೇಳಬಹುದು ಅನ್ನುವಂತಹ ನಿರ್ಧಾರವನ್ನು ತೆಗೆದುಕೊಂಡಿರುವವರು ಹೆಚ್ಚಾಗಿದ್ದಾರೆ. ಇದರಿಂದ ಪುರುಷರು ಕಿರುಕುಳವನ್ನು ಅನುಭವಿಸುತ್ತಿದ್ದಾರೆ.
ಮಹಿಳೆಯರು ಪುರುಷರಿಗೆ ಏನು ಬೇಕಾದ್ರೂ ಹೇಳ್ಬೋದ..?
ತಾರತಮ್ಯ ಅನ್ನುವುದು ಇನ್ನೂ ಕೂಡ ಬಿಟ್ಟಿಲ್ಲ, ಆದರೆ ಪುರುಷರಿಗೂ ಕೂಡ ಅಷ್ಟೇ ರೀತಿಯಾದಂತಹ ಮಾನಸಿಕ ನೋವುಗಳು ಇರುತ್ತವೆ. ಮಹಿಳೆಯರು ಪುರುಷರಿಗೆ ಮನಬಂದಂತೆ ಮಾತನಾಡುವುದು ಹಾಗೂ ಪುರುಷರ ಮೇಲೆ ಅತ್ಯಂತ ಕಠಿಣವಾಗಿ ಶಿಕ್ಷೆಗಳನ್ನು ನೀಡುವಂತೆ ಸಮಾಜದ ಮುಂದೆ ಬಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಕೂಡ ಹೆಚ್ಚಾಗಿದೆ. ಇದರಿಂದ ಪುರುಷರು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಇಂದಿನ ಯುಗದಲ್ಲಿ ಇಂತಹ ಘಟನೆಗಳು ಕಂಡುಬರುತ್ತಿವೆ. ಇಂದು ಅಂತರಾಷ್ಟ್ರೀಯ ಪುರುಷರ ದಿನವನ್ನು ಲಿಂಗ ಸಮಾನತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಆಚರಿಸಲಾಗುತ್ತದೆ.
ನಿಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ..!
ಇತ್ತೀಚೆಗೆ ಪುರುಷರು ತಮ್ಮ ಮಾನಸಿಕ ಒತ್ತಡದಿಂದ ಆರೋಗ್ಯದ ಕಡೆಗೆ ಗಮನ ಕೊಡುವುದು ಕಡಿಮೆ ಮಾಡಿರುತ್ತಾರೆ. ಇದರಿಂದ ನೆಮ್ಮದಿಯನ್ನು ಕಳೆದುಕೊಂಡಿರುತ್ತಾರೆ. ವ್ಯವಹಾರ ಕೆಲಸ ಕಾರ್ಯಗಳಲ್ಲಿ ಸದಾ ತೊಡಗಿಕೊಂಡಿರುವ ಪುರುಷರು ತಮ್ಮ ದೇಹದ ಆರೈಕೆಯ ಬಗ್ಗೆ ಗಮನ ಕೊಡುವುದು ಕಡಿಮೆಯಾಗಿರುತ್ತದೆ. ತಮ್ಮ ತ್ವಚೆ ಅಥವಾ ತಮ್ಮ ವೈಯಕ್ತಿಕ ಆರೋಗ್ಯದ ಕುರಿತು ಪುರುಷರು ಗಮನಕೊಡದೆ ಆರೋಗ್ಯವನ್ನು ಹಾಳು ಮಾಡಿಕೊಂಡಿರುತ್ತಾರೆ. ಪ್ರತಿಬಾರಿ ಸಮಾಜದ ದೃಷ್ಟಿಯಿಂದ ಬದುಕುವಂತಹ ಮನಸ್ಥಿತಿಯನ್ನು ಪುರುಷರು ಇಟ್ಟುಕೊಂಡಿರುತ್ತಾರೆ. ಇದರಿಂದ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಚಿಂತೆಯೇ ಇಲ್ಲದಂತೆ ಜೀವನ ಸಾಗಿಸುತ್ತಾರೆ. ತಮ್ಮ ಮನೆ ಮಕ್ಕಳು ಕುಟುಂಬದ ಕಡೆಗೆ ಗಮನಹರಿಸುವುದನ್ನೇ ಕಡಿಮೆ ಮಾಡಿಕೊಂಡಿರುತ್ತಾರೆ.
ನಿಮ್ಮ ಹೆಂಡತಿಗೆ ಕೆಲಸದಲ್ಲಿ ಸಹಾಯ ಮಾಡಿ!
ನಮ್ಮಲ್ಲಿ ಅದೆಷ್ಟೋ ಜನ ಪುರುಷರು ಕುಟುಂಬವನ್ನು ನಿರ್ವಹಿಸಲು ಕೆಲಸ ಕಾರ್ಯಗಳಲ್ಲಿ ಬಿಝಿಯಾಗಿರುತ್ತಾರೆ. ಆದರೆ ಮನೆಯ ಹೆಣ್ಣು ಮಕ್ಕಳು ಅದ್ರಲ್ಲೂ ತನ್ನ ಮಡದಿ ಇಡೀ ಕುಟುಂಬವನ್ನು ಸರಿದೂಗಿಸಿಕೊಂಡು ಇರುತ್ತಾಳೆ. ಈ ಸಂದರ್ಭದಲ್ಲಿ ಪುರುಷರು ಹೆಂಡತಿಗೆ ಸಹಾಯ ಮಾಡಬೇಕಾಗುತ್ತದೆ. ಮನೆ ಕೆಲಸದಲ್ಲಿ ತನ್ನಪತ್ನಿ ಹಾಗೂ ಅಮ್ಮನಿಗೆ ಸಹಾಯ ಮಾಡಿದರೆ ಆಕೆಗೆ ಖುಷಿಯಾಗುತ್ತದೆ. ಇದರ ಜೊತೆಗೆ ಮದುವೆ ಆಗದೆ ಇರುವಂತಹ ಪುರುಷರು ತಮ್ಮ ಅಮ್ಮನಿಗೆ ಸಹಾಯ ಮಾಡಿದರೆ ಅಮ್ಮನಿಗೂ ಖುಷಿಯಾಗುತ್ತದೆ. ಹೀಗಾಗಿ ಅಮ್ಮ ಹಾಗೂ ಹೆಂಡತಿಗೆ ಸಹಾಯ ಮಾಡುವಂತಹ ಅಭ್ಯಾಸವನ್ನು ಪುರುಷರು ಇಟ್ಟುಕೊಳ್ಳಬೇಕು. ಇದರಿಂದ ಮನೆಯವರಿಗೂ ಕೂಡ ನಿಮ್ಮ ಮೇಲೆ ನಂಬಿಕೆ ಬರುತ್ತದೆ.
ಇಂದು ಎಲ್ಲರೂ ಸಮಾನರು..!
ಈ ದಿನ ನಾವು ಕೆಲವೊಂದು ಮುಖ್ಯವಾದ ಅಂತಹ ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು. ಇಂದಿನ ಯುಗದಲ್ಲಿ ಪುರುಷರಂತೆ ಮಹಿಳೆಯರು ಕೂಡ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೊಡ್ಡಮಟ್ಟದಲ್ಲಿ ಹೆಸರು ಗಳಿಸುತ್ತಿದ್ದಾರೆ. ಕೇವಲ ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ತಮ್ಮ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಪುರುಷರಿಗೆ ಮಾತ್ರವೇ ಸೀಮಿತ ಎನ್ನುವಂತಹ ಕ್ಷೇತ್ರದಲ್ಲೂ ಕೂಡ ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಹೀಗಾಗಿ ಪ್ರತಿಯೊಂದು ಮಹಿಳೆಯನ್ನು ಕೂಡ ಪುರುಷ ಗೌರವಿಸಿ ಸಮಾನತೆಯಿಂದ ನೋಡಬೇಕಾಗಿರುವುದು ಅಷ್ಟೇ ಸತ್ಯ.
ಪುರುಷರ ದಿನವನ್ನು ಆಚರಣೆ ಮಾಡುವುದು ಯಾಕೆ..?
ಇನ್ನು ಮೊದಲ ಬಾರಿಗೆ ಪುರುಷರ ದಿನವನ್ನು 1992 ರಲ್ಲಿ ಥಾಮಸ್ ಪೋಸ್ಟರ್ ಎಂಬುವವರು ಪರಿಚಯವನ್ನು ಮಾಡುತ್ತಾರೆ. ಪುರುಷರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಇವರು ಧ್ವನಿ ಎತ್ತುತ್ತಾರೆ. ಈ ಸಲುವಾಗಿ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಲಿಂಗ ಸಮಾನತೆಯನ್ನು ಉತ್ತೇಜಿಸಲು ಈ ಒಂದು ಪುರುಷರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಕೂಡ ನವೆಂಬರ್ 19ರಂದು ಅಂತರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











