ಬ್ರೇಕಿಂಗ್ ನ್ಯೂಸ್
ಕರ್ನಾಟಕ

Life : ಸಣ್ಣದೆನಿಸುವ ಉತ್ತಮ ಹವ್ಯಾಸಗಳು ನಿಮ್ಮ ಜೀವನ ಬದಲಿಸಬಹುದು…!

Life : ಜೀವನ ಅಂದ್ರೆ ಬರೀ‌ ಕೆಲ್ಸ, ಊಟ, ನಿದ್ದೆ ಇಷ್ಟೇ ಆಗಿದೆ. ದಿನವಿಡೀ ದುಡಿಯೋದು. ಸಂಪಾದನೆಗಾಗಿ ಹೋರಾಟ… ಇಷ್ಟೇ ಬದುಕಾಗಿದೆ. ಆದ್ರೆ ನಾವು ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡ್ಬೇಕು ಅನ್ನೋದರ ಬಗ್ಗೆ ಸ್ವಲ್ಪ ಗಮನಹರಿಸಬೇಕು. ನಮ್ಮ ಮೆದುಳು ಚುರುಕಾಗಿ ಕೆಲಸ ಮಾಡ್ಬೇಕು ಅಂತಂದ್ರೆ ಕೇವಲ ಹತ್ತೇ ಹತ್ತು ನಿಮಿಷ ನೀವು ನಿಮ್ಮನ್ನು ಸರಿಯಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಸಾಕು. ಹೌದು… ವಾರಕ್ಕೆ ಕೇವಲ 10 ನಿಮಿಷಗಳ ಕಾಲ‌ ತೊಡಗಿಸಿಕೊಳ್ಳುವ‌ ಹವ್ಯಾಸದಿಂದ ನಿಮ್ಮ ಗಮನ, ಸೃಜನಶೀಲತೆ ಮತ್ತು ಮನೋಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಉದಾಹರಣೆಗೆ ; ಚಿತ್ರ ಬಿಡಿಸುವುದು. ನೀವು ಕಂಡಿದ್ದನ್ನು, ಕೇಳಿದ್ದನ್ನು ನಿಮ್ಮದೇ ಯೋಚನೆಯಲ್ಲಿ ಚಿತ್ರಿಸುವ ಮೂಲಕ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇನ್ನು ಪುಸ್ತಕ ಅಥವಾ ಕವಿತೆಗಳನ್ನು ಓದುವ ಹವ್ಯಾಸ. ಮೊಬೈಲ್ ಬಂದ ನಂತರ ಎಲ್ಲವೂ ಅಳಿಸಿ ಹೋಗುತ್ತಿದೆ. ಪುಸ್ತಕ ತಿರುವುದರ ಬದಲು ಮೊಬೈಲ್ ಸ್ಕ್ರೀನ್ ನ ಮೇಲೆ, ಕೆಳಗೆ ಮಾಡುವುದೇ ಜೀವನ ಆಗಿಬಿಟ್ಟಿದೆ. ಆದ್ರೆ ಒಂದಿಷ್ಟು ಹೊತ್ತು‌ ಓದುವುದಕ್ಕಾದರೂ ಸಮಯ ಮೀಸಲಿಡಿ.

ನಿಮ್ಮ ಮೆದುಳು ಚುರುಕಾಗುತ್ತದೆ ;

ಕವಿತೆ ಓದುವುದರಿಂದ ಪದಗಳ ಲಯ, ಶಬ್ದ ಮತ್ತು ಅರ್ಥವನ್ನು ಅರಿತುಕೊಳ್ಳಲು ಮೆದುಳಿಗೆ ವ್ಯಾಯಾಮವಾಗುತ್ತದೆ. ಈ ಅಭ್ಯಾಸ ಸ್ಪಷ್ಟ ಚಿಂತನೆ, ಉತ್ತಮ ಸಂವಹನ ಮತ್ತು ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಹತ್ತು ನಿಮಿಷ ಈ ಚಟುವಟಿಕೆಯಲ್ಲಿ ಭಾಗಿಯಾದ್ರೂ ಸಾಕು ನಿಮ್ಮ ಮೆದುಳು ಚುರುಕಾಗುತ್ತದೆ. ಇನ್ನು ಹೊಸ ಭಾಷೆಯ ಕೆಲವು ಪದಗಳನ್ನು ಕಲಿಯುವುದು ಕೂಡಾ ಮೆದುಳಿನ ನ್ಯೂರಲ್ ನೆಟ್‌ವರ್ಕ್‌ ಚುರುಕು ಮಾಡುತ್ತದೆ.

ನೃತ್ಯ ಮೆದುಳಿನ ಎರಡೂ ಭಾಗಗಳನ್ನು ಸಕ್ರಿಯಗೊಳಿಸುತ್ತದೆ ;

10 ನಿಮಿಷಗಳ ಕಾಲ ನಿರಂತರವಾಗಿ ಬರೆಯುವುದರಿಂದ ನಿಮ್ಮ ಸೃಜನಶೀಲತೆ ಮತ್ತು ಆಲೋಚನೆಗಳ ಸ್ಪಷ್ಟತೆ ಹೆಚ್ಚುತ್ತದೆ. ಇದು ನಿಮ್ಮ ಆಂತರಿಕ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಡೈಲಿ ಏನಾಯ್ತು? ಯಾವ ಕೆಲಸ ಆಯ್ತು? ಯಾರನ್ನು ಭೇಟಿ ಮಾಡಿದ್ರಿ? ಏನ್‌ ಕಲಿತುಕೊಂಡಿದ್ದೀರಿ ಎಂಬುದರ ಬಗ್ಗೆ ಬರೆಯಿರಿ. ಮೆದುಳಿಗೆ ಕೆಲವು ಲಾಜಿಕ್ ಆಟಗಳನ್ನು ಆಡುವುದು ಹಾಗೂ ಯಾವುದಾದರೊಂದು ಹಾಡಿಗೆ ನೃತ್ಯ ಮಾಡುವುದು ಕೂಡಾ ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ನೃತ್ಯ ಮೆದುಳಿನ ಎರಡೂ ಭಾಗಗಳನ್ನು ಸಕ್ರಿಯಗೊಳಿಸುತ್ತದೆ, ಸಮತೋಲನ, ಸ್ಮರಣೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.

ಸಣ್ಣದು ಎನಿಸುವ ಈ ಹವ್ಯಾಸಗಳು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಜೀವನದಲ್ಲಿ ಹೆಚ್ಚು ಗಮನ, ಕ್ರಿಯಾತ್ಮಕತೆ ಮತ್ತು ಸಂತೋಷ ತರುತ್ತವೆ. ಈ ಚಟುವಟಿಕೆಗಳನ್ನು ನಿಯಮಿತವಾಗಿ ಅನುಸರಿಸುವ ಮೂಲಕ ನಿಮ್ಮ ಮನಸ್ಸಿನ ಸಾಮರ್ಥ್ಯವನ್ನು ಹೊಸ ಮಟ್ಟಕ್ಕೆ ಏರಿಸಬಹುದು. ಇವು ನಿಮ್ಮ ಬುದ್ಧಿವಂತಿಕೆಗೆ ಮಾತ್ರವಲ್ಲ, ದಿನನಿತ್ಯದ ನಿರ್ಧಾರಗಳಿಗೆ, ಸಮಸ್ಯೆಗಳಿಗೆ ಪರಿಹಾರ‌ ಒದಗಿಸುವ ‌ಸಾಮರ್ಥ್ಯಕ್ಕೆ ಮತ್ತು ಸೃಜನಶೀಲತೆಯುಳ್ಳ ಜೀವನಕ್ಕೆ ಸಹ ಸಹಾಯ ಮಾಡುತ್ತದೆ. ಹೀಗಾಗಿ, ಸಣ್ಣ ಸಣ್ಣ ಹವ್ಯಾಸಗಳು ನಿಮ್ಮ ಮೆದುಳಿನ ಸಹಾಯಕನಾಗಬಹುದು.

ಇದನ್ನೂ ಓದಿ :IPL Cricket : ಡಿಸೆಂಬರ್ 16 ರಂದು ನಡೆಯಲಿದೆ ಮುಂದಿನ ಸೀಸನ್ ನ‌ ಮಿನಿ ಹರಾಜು

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lAkKmmGp2KI?si=3e2QrJZhIs6NS-QG

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 176

You cannot copy content of this page