ಹಿಮಪಾತ ಸಂಭವಿಸಿ ಏಳು ಮಂದಿ ಜೀವ ಕಳೆದುಕೊಂಡರೆ, ಹಲವರು ಗಾಯಗೊಂಡ ಘಟನೆ ನಡೆದಿದೆ. ನೇಪಾಳದ ಡೋಲ್ಖಾ ಜಿಲ್ಲೆಯ ಮೌಂಟ್ ಯಾಲುಂಗ್ ರಿ ಪರ್ವತದಲ್ಲಿ ಈ ದುರಂತ ಸಂಭವಿಸಿದೆ. ಬೆಳಿಗ್ಗೆ ಸುಮಾರು 10:30ರ ಸುಮಾರಿಗೆ ಹಿಮಪಾ ಸಂಭವಿಸಿದೆ ಎಂದು ನೇಪಾಳದ ಡೋಲಾಖಾ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಜ್ಞಾನ್ ಮಹಾತೋ ತಿಳಿಸಿದ್ದಾರೆ.
ಪರ್ವತರೋಹಣ ಮಾಡುತ್ತಿರುವ ವೇಳೆ ಭಾರೀ ಹಿಮಪಾತವಾಗಿದೆ. ಹಿಮ ಜಾರಿ ರಭಸವಾಗಿ ನುಗ್ಗಿ ಬರುತ್ತಿದ್ದಂತೆ ಪರ್ವತರೋಹಣಕ್ಕೆ ತೆರಳಿದ್ದ 7 ಮಂದಿ ಪರ್ವತಾರೋಹಿಗಳು ಹಿಮದಲ್ಲಿ ಹುದುಗಿ ಹೋಗಿದ್ದಾರೆ. ಈ ಪೈಕಿ ಮೂವರು ಮೃತಪಟ್ಟಿದ್ದು ಅವರ ಮೃತದೇಹ ಸಿಕ್ಕಿದೆ ಎಂದು ಮಹಾತೋ ದೃಢಪಡಿಸಿದ್ದಾರೆ. ಹಿಮದಡಿಗೆ ಬಿದ್ದ ನಾಲ್ವರ ಹುಡುಕಾಟ ನಡೆಸಲಾಗ್ತಿದೆ.
ನಾಪತ್ತೆಯಾದ ನಾಲ್ವರು ಸಹ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಪರ್ವತ ಏರಲು ಹೋಗಿದ್ದ ಐವರು ಪರ್ವತಾರೋಹಿಗಳು ಗಾಯಗೊಂಡಿದ್ದಾರೆ.
ಹಿಮಪಾತದಲ್ಲಿ ಸಾವನ್ನಪ್ಪಿದವರಲ್ಲಿ 3 ಮಂದಿ ಅಮೆರಿಕನ್ನರು, ಇಬ್ಬರು ನೇಪಾಳಿಗಳು, ಒಬ್ಬ ಇಟಾಲಿಯನ್, ಒಬ್ಬ ಕೆನಡಾ ಮೂಲದ ಪರ್ವತರೋಹಿಗಳು ಅಂತ ತಿಳಿದುಬಂದಿದೆ. ಪ್ರತಿಕೂಲ ಹವಾಮಾನದಿಂದ ಈ ದುರ್ಘಟನೆ ಸಂಭವಿಸಿದೆ.
ಹಿಮ ಪರ್ವತಗಳು ನೋಡಲು ಎಷ್ಟು ಸುಂದರವೋ, ಅಷ್ಟೇ ದುರ್ಗಮ. ಆದ್ರೆ, ಹವ್ಯಾಸಿ ಪರ್ವತಾರೋಹಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಪರ್ವತರೋಹಣ ಮಾಡುವ ಸಾಹಸ ಮಾಡುತ್ತಾರೆ. ಪರ್ವತ ಏರಲು ಹೋದ ಜನರು ಹಿಮದಿಂದಲೇ ಪ್ರಾಣ ಬಿಡುವಂತೆ ಆಗಿರುವುದು ನಿಜಕ್ಕೂ ದುರಂತ.
ಇದನ್ನೂ ಓದಿ: Friendship After Breakup: ಬ್ರೇಕಪ್ ನಂತ್ರ ex ಪ್ರಿಯಕರನೊಂದಿಗೆ ಸ್ನೇಹ ಒಳ್ಳೆಯದಾ..?
===================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess









