ಬ್ರೇಕಿಂಗ್ ನ್ಯೂಸ್
ಸುಳ್ಯ

ಸುಳ್ಯ : ದೇಶಭಕ್ತಿ ಗುಂಪುಗಾಯನ ಸ್ಪರ್ಧೆ, ಆಗಸ್ಟ್ 5ರೊಳಗೆ ವೀಡಿಯೋ ಕಳುಹಿಸಲು ಅವಕಾಶ

ಸುಳ್ಯ: Tulu Times l ದೇಶಭಕ್ತಿ ಗೀತೆಗಳ ಮೂಲಕ ಪ್ರತಿಭೆ ಅನಾವರಣಗೊಳಿಸಲು ಸುದ್ದಿ ಸಮೂಹ ಸಂಸ್ಥೆಗಳು, ಸುಳ್ಯ ಹಾಗೂ ಷರಾ ಪ್ರಕಾಶನ, ಸುಳ್ಯ ಸಂಯುಕ್ತ ಆಶ್ರಯದಲ್ಲಿ ದೇಶಭಕ್ತಿ ಗುಂಪುಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ಪ್ರೌಢಶಾಲೆ, ಪಿಯುಸಿ, ಪದವಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದಲ್ಲಿ ಕನಿಷ್ಠ 6 ಹಾಗೂ ಗರಿಷ್ಠ 8 ಸದಸ್ಯರು ಇರಬಹುದಾಗಿದ್ದು, ಹಿನ್ನೆಲೆ ಸಂಗೀತಗಾರರೂ ಈ ಸಂಖ್ಯೆಯಲ್ಲಿ ಸೇರಿರುತ್ತಾರೆ. ಹಿನ್ನೆಲೆ ಸಂಗೀತ ಬಳಸಲು ಅವಕಾಶವಿದ್ದು, ಅದು ಕಡ್ಡಾಯವಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ;

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಗರಿಷ್ಠ ಎರಡೂವರೆ ನಿಮಿಷಗಳೊಳಗಿನ ದೇಶಭಕ್ತಿ ಗೀತೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಅಗತ್ಯ ವಿವರಗಳೊಂದಿಗೆ 7019406288 ವಾಟ್ಸಪ್ ಸಂಖ್ಯೆಗೆ ಕಳುಹಿಸಬೇಕು. ಎಡಿಟ್ ಮಾಡಿದ ಅಥವಾ ಸ್ಪಷ್ಟತೆ ಇಲ್ಲದ ವೀಡಿಯೊಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಅವಿಭಜಿತ ಸುಳ್ಯ ತಾಲೂಕು (ಪ್ರಸ್ತುತ ಕಡಬ ತಾಲೂಕಿನ ಹಿಂದಿನ ಸುಳ್ಯ ವ್ಯಾಪ್ತಿಯ ಗ್ರಾಮಗಳು ಸೇರಿ), ಪೆರಾಜೆ, ಚೆಂಬು ಹಾಗೂ ಕೊಡಗು ಸಂಪಾಜೆ ವ್ಯಾಪ್ತಿಯವರು ಭಾಗವಹಿಸಲು ಅರ್ಹರಾಗಿದ್ದಾರೆ. ಮೊದಲ ಹಂತದಲ್ಲಿ ಬಂದಿರುವ ವೀಡಿಯೋಗಳಿಂದ ಆಯ್ಕೆಯಾದ ತಂಡಗಳನ್ನು ಸುದ್ದಿ ಸ್ಟುಡಿಯೋಗೆ ಆಹ್ವಾನಿಸಿ, ಅಂತಿಮ ಸುತ್ತಿನಲ್ಲಿ ನೇರವಾಗಿ ಹಾಡಿಸಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ;

ಈ ಕಾರ್ಯಕ್ರಮವನ್ನು ಸುದ್ದಿ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ವೀಡಿಯೋ ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್ 5, 2026 ಆಗಿದ್ದು, ಬಳಿಕ ಆಯ್ಕೆಯಾದ ತಂಡಗಳ ಪಟ್ಟಿಯನ್ನು ಪ್ರಕಟಿಸಿ ಮಾಹಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9901288280 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Sullia: Patriotic Group Singing Competition – Deadline to Submit Videos is August 5 – ತುಳು ಟೈಮ್ಸ್

ಇದನ್ನೂ ಓದಿ : ಪ್ಲಾಸ್ಟಿಕ್ ಮಾಲಿನ್ಯಕ್ಕೆ ಹೊಸ ಪರಿಹಾರ : ತ್ಯಾಜ್ಯದಿಂದ ವಾಹನ ಇಂಧನ ಉತ್ಪಾದನೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/_mb3O1ZHoIc

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 8

You cannot copy content of this page