ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮೊಟ್ಟೆ, ಚಿಕನ್ ದರ ಭಾರೀ ಏರಿಕೆ; ಉತ್ಪಾದನೆ ಕುಸಿತದಿಂದ ಗ್ರಾಹಕರಿಗೆ ಬರೆ

ಕೋಲಾರ : Tulu Times l ಕಳೆದ ಎರಡು ವಾರಗಳಿಂದ ಕೋಲಾರ ಜಿಲ್ಲೆಯಲ್ಲಿ ಮೊಟ್ಟೆ ಹಾಗೂ ಚಿಕನ್ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಗ್ರಾಹಕರು, ಹೋಟೆಲ್ ಉದ್ಯಮಿಗಳು ಹಾಗೂ ಮಾಂಸಾಹಾರ ಪ್ರಿಯರಿಗೆ ಹೆಚ್ಚುವರಿ ಹೊರೆ ಉಂಟಾಗಿದೆ. ಪ್ರತಿಕೂಲ ಹವಾಮಾನ ಹಾಗೂ ಕೋಳಿಗಳಲ್ಲಿ ಕಾಣಿಸಿಕೊಂಡಿರುವ ರೋಗಗಳ ಪರಿಣಾಮ ಉತ್ಪಾದನೆ ಕುಸಿದಿರುವುದೇ ದರ ಏರಿಕೆಗೆ ಪ್ರಮುಖ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ ಸುಮಾರು ₹7ಕ್ಕೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ₹8ರಿಂದ ₹8.50ಕ್ಕೆ ಮಾರಾಟವಾಗುತ್ತಿದೆ. ಇದೇ ಅವಧಿಯಲ್ಲಿ ಚಿಕನ್ ಬೆಲೆಯೂ ತೀವ್ರ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ ₹180–200 ಇದ್ದ ಬೆಲೆ ಇದೀಗ ₹280–300ಕ್ಕೆ ತಲುಪಿದೆ. ದರ ಏರಿಕೆಯಿಂದ ಮಾಂಸಾಹಾರ ತಿನಿಸುಗಳನ್ನು ಮಾರಾಟ ಮಾಡುವ ಹೋಟೆಲ್‌ಗಳು ಮತ್ತು ಉಪಹಾರ ಗೃಹಗಳ ವೆಚ್ಚ ಹೆಚ್ಚಾಗಿದ್ದು, ಕೆಲವರು ಹೆಚ್ಚುವರಿ ವೆಚ್ಚವನ್ನು ಭರಿಸುತ್ತಿದ್ದರೆ, ಇನ್ನೂ ಕೆಲವರು ಆಹಾರ ಪದಾರ್ಥಗಳ ದರವನ್ನು ಪರಿಷ್ಕರಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಕೋಲಾರವು ಕರ್ನಾಟಕದ ಪ್ರಮುಖ ಕೋಳಿ ಸಾಕಾಣಿಕೆ ಜಿಲ್ಲೆಗಳಲ್ಲಿ ಒಂದಾಗಿದ್ದು, ಇಲ್ಲಿ 250ಕ್ಕೂ ಹೆಚ್ಚು ಕೋಳಿ ಸಾಕಾಣಿಕೆ ಫಾರಂಗಳು ಹಾಗೂ ವಾಣಿಜ್ಯ ಮೊಟ್ಟೆ ಉತ್ಪಾದನಾ ಘಟಕಗಳಿವೆ. ಇಲ್ಲಿಂದ ಉತ್ಪಾದನೆಯಾಗುವ ಮೊಟ್ಟೆ ಮತ್ತು ಚಿಕನ್ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ನೆರೆಯ ರಾಜ್ಯಗಳಿಗೂ ಪೂರೈಕೆಯಾಗುತ್ತದೆ.
ಹವಾಮಾನ ವೈಪರೀತ್ಯ ಮತ್ತು ಕೋಳಿಗಳಲ್ಲಿ ಹರಡಿರುವ ರೋಗಗಳಿಂದ ಮೊಟ್ಟೆ ಹಾಗೂ ಬ್ರಾಯ್ಲರ್ ಕೋಳಿಗಳ ಉತ್ಪಾದನೆ ಕಡಿಮೆಯಾಗಿದ್ದು, ಪೂರೈಕೆಯಲ್ಲಿ ಉಂಟಾದ ಕೊರತೆಯೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಕೋಳಿ ವ್ಯಾಪಾರಿ ಗೋವಿಂದರಾಜು ಅವರ ಪ್ರಕಾರ, ಉತ್ಪಾದನೆ ಶೀಘ್ರ ಸುಧಾರಿಸದಿದ್ದರೆ ಇನ್ನೂ ಒಂದರಿಂದ ಎರಡು ತಿಂಗಳು ದರ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಒಂದು ಮೊಟ್ಟೆಯ ಬೆಲೆ ₹9–10 ಹಾಗೂ ಚಿಕನ್ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉತ್ಪಾದನೆ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಮತ್ತು ಪೂರೈಕೆ ಹೆಚ್ಚಾಗುವವರೆಗೆ ಮೊಟ್ಟೆ ಹಾಗೂ ಚಿಕನ್ ಬೆಲೆಗಳು ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ತಿಳಿಸಿದ್ದಾರೆ.

Sharp rise in egg and chicken prices; consumers hit hard by drop in production. – ತುಳು ಟೈಮ್ಸ್

ಇದನ್ನೂ ಓದಿ : ಮೊಬೈಲ್ ರೀಚಾರ್ಜ್ ದರ ಮತ್ತೆ ಏರಿಕೆಯಾಗಲಿದೆಯೇ? ಬಳಕೆದಾರರಿಗೆ ಹೆಚ್ಚುವರಿ ಹೊರೆ ಸಾಧ್ಯ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zL6G6JE_ZwA

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page