ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ಒಂದೇ ವೇಳಾಪಟ್ಟಿ; ಇಲ್ಲಿದೆ ಹೊಸ ಟೈಮಿಂಗ್

ಬೆಂಗಳೂರು : Tulu Times l ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಶನಿವಾರದ ಶಾಲಾ ವೇಳಾಪಟ್ಟಿಯನ್ನು ಏಕರೂಪಗೊಳಿಸಿ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ರಾಜ್ಯದ ಎಲ್ಲ ಶಾಲೆಗಳು ಶನಿವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಕಾರ್ಯನಿರ್ವಹಿಸಲಿವೆ.

ವಿಭಿನ್ನ ವೇಳಾಪಟ್ಟಿಗೆ ತೆರೆ ;

ಇಲ್ಲಿಯವರೆಗೆ ಜಿಲ್ಲೆಯಿಂದ ಜಿಲ್ಲೆಗೆ ಹಾಗೂ ಶಾಲೆಯಿಂದ ಶಾಲೆಗೆ ಶನಿವಾರದ ತರಗತಿ ವೇಳೆಯಲ್ಲಿ ವ್ಯತ್ಯಾಸವಿತ್ತು. ಕೆಲವು ಶಾಲೆಗಳು ಬೆಳಗ್ಗೆ 7.30ರಿಂದ 11.30ರವರೆಗೆ, ಇನ್ನೂ ಕೆಲವು 8ರಿಂದ 12 ಗಂಟೆಯವರೆಗೆ ತರಗತಿಗಳನ್ನು ನಡೆಸುತ್ತಿದ್ದರು. ಈ ಗೊಂದಲ ನಿವಾರಿಸಲು ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಒಂದೇ ರೀತಿಯ ನಾಲ್ಕು ಗಂಟೆಗಳ ವೇಳಾಪಟ್ಟಿಯನ್ನು ಜಾರಿಗೆ ತಂದಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನುಕೂಲ;

ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಾಲೆಯ ಸಮಯವನ್ನು ನೆನಪಿಟ್ಟುಕೊಳ್ಳುವುದು ಸುಲಭವಾಗಲಿದೆ. ಎಲ್ಲ ಶಾಲೆಗಳಲ್ಲೂ ಒಂದೇ ಸಮಯದಲ್ಲಿ ತರಗತಿಗಳು ಆರಂಭವಾಗಿ ಮುಕ್ತಾಯವಾಗುವುದರಿಂದ ಗೊಂದಲ ತಪ್ಪಲಿದೆ ಎಂದು ಇಲಾಖೆ ತಿಳಿಸಿದೆ.

ಶಿಕ್ಷಕರ ಹಾಜರಾತಿಗೂ ಅನುಕೂಲ ;

ರಾಜ್ಯದಲ್ಲಿ ಜಾರಿಯಲ್ಲಿರುವ ಆನ್‌ಲೈನ್ ಹಾಜರಾತಿ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಲು ಈ ಕ್ರಮ ಸಹಕಾರಿಯಾಗಲಿದೆ. ಎಲ್ಲ ಶಾಲೆಗಳು ಒಂದೇ ಸಮಯದಲ್ಲಿ ಆರಂಭವಾಗುವುದರಿಂದ ಶಿಕ್ಷಕರು ಏಕರೂಪವಾಗಿ ತಮ್ಮ ಹಾಜರಾತಿಯನ್ನು ದಾಖಲಿಸಬಹುದಾಗಿದೆ.

Same timetable for government, aided and private schools; here is the new timing – ತುಳುಟೈಮ್ಸ್

ಇದನ್ನೂ ಓದಿ :‘ಸ್ಟ್ರಾಬೆರಿ ಮೂನ್’ ಎಂದರೇನು? ಏಕೆ ಈ ಹುಣ್ಣಿಮೆ ಇಷ್ಟು ವಿಶೇಷ?

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtube.com/shorts/-Bj0E7uDZWk?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page