ಬ್ರೇಕಿಂಗ್ ನ್ಯೂಸ್
ಕರ್ನಾಟಕ

‘ಕೃಷ್ಣಾವತಾರಂ ಪಾರ್ಟ್ 1’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ

ಚಲನಚಿತ್ರ : Tulu Times l ಉತ್ತರ ಪ್ರದೇಶ ಸರ್ಕಾರ ಐತಿಹಾಸಿಕ ಹಿನ್ನೆಲೆಯ ‘ಕೃಷ್ಣಾವತಾರಂ ಭಾಗ – 01’ ಚಿತ್ರವನ್ನು ತೆರಿಗೆ ಮುಕ್ತಗೊಳಿಸಿದೆ. ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದ ಹಿನ್ನೆಲೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಯೋಗಿ ಆದಿತ್ಯನಾಥ್ ಅವರು ಲಕ್ನೌ ಲೋಕಭವನದಲ್ಲಿ ಭಾನುವಾರ ನಡೆದ ವಿಶೇಷ ಪ್ರದರ್ಶನ ವೀಕ್ಷಿಸಿದ ಬಳಿಕ ಚಿತ್ರದ ತೆರಿಗೆ ವಿನಾಯಿತಿ ಘೋಷಣೆ ಮಾಡಿದರು.

ಇದರ ಜೊತೆಗೆ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಮಕ್ಕಳ ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿತ್ರದ ವಿಶೇಷ ಪ್ರದರ್ಶನಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ. ನಿರ್ದೇಶಕ ಹಾರ್ದಿಕ್ ಗಜ್ಜಾರ್ ಅವರ ನಿರ್ದೇಶನದ ಈ ಚಿತ್ರ ಮೇ 7ರಂದು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನೆಮಾದಲ್ಲಿ ಪ್ರಸಿದ್ಧ ನಟರಿದ್ದು, ಪ್ರೇಕ್ಷಕರನ್ನು ಅತಿಯಾಗಿ ಸೆಳೆದ ಸಿನೆಮಾವಾಗಿತ್ತು.

ಚಿತ್ರದ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥ್, ಶ್ರೀಕೃಷ್ಣನ ಜೀವನವನ್ನು ಮಾನವೀಯ ದೃಷ್ಟಿಕೋನದಿಂದ ಚಿತ್ರಿಸಿರುವುದರ ಜೊತೆಗೆ ದ್ವಾಪರ ಯುಗ, ಸನಾತನ ಸಂಸ್ಕೃತಿ ಮತ್ತು ಭಾರತೀಯ ಪರಂಪರೆಯನ್ನು ಭವ್ಯವಾಗಿ ತೆರೆ ಮೇಲೆ ಮೂಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಸತ್ಯಭಾಮೆಯ ಪಾತ್ರದಲ್ಲಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರ ಮೊಮ್ಮಗಳು ಸಂಸ್ಕೃತಿ ಅಭಿನಯಿಸಿರುವುದು ವಿಶೇಷ ಗಮನ ಸೆಳೆದಿದೆ. ಭಾರತೀಯ ಸಂಸ್ಕೃತಿಯನ್ನು ಆಧರಿಸಿದ ಇಂತಹ ಇನ್ನಷ್ಟು ಚಿತ್ರಗಳು ನಿರ್ಮಾಣವಾಗಬೇಕು ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

‘ಕೃಷ್ಣಾವತಾರಂ ಪಾರ್ಟ್ 1: ದ ಹಾರ್ಟ್’ ಮೂರು ಭಾಗಗಳ ಸರಣಿಯ ಮೊದಲ ಚಿತ್ರವಾಗಿದ್ದು, ಪ್ರೇಮಿ, ಪತಿ, ಧರ್ಮನಿಷ್ಠ ರಾಜ, ಯೋಧ ಹಾಗೂ ಚತುರ ತಂತ್ರಜ್ಞನಾಗಿ ಶ್ರೀಕೃಷ್ಣನ ವಿವಿಧ ಆಯಾಮಗಳನ್ನು ಚಿತ್ರಿಸುತ್ತದೆ. ಮೊದಲ ಭಾಗದಲ್ಲಿ ಕೃಷ್ಣನು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಎದುರಿಸುವ ಸವಾಲುಗಳ ಮೇಲೆ ಕಥೆ ಕೇಂದ್ರೀಕರಿಸಿದೆ. ಚಿತ್ರತಂಡವು ತೆರಿಗೆ ವಿನಾಯಿತಿ ಘೋಷಿಸಿದ ಉತ್ತರ ಪ್ರದೇಶ ಸರ್ಕಾರಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಕೃತಜ್ಞತೆ ಸಲ್ಲಿಸಿದ್ದು, ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಶ್ರೀಕೃಷ್ಣನ ಸಂದೇಶವನ್ನು ಯುವಜನತೆಗೆ ತಲುಪಿಸುವ ತಮ್ಮ ಪ್ರಯತ್ನಕ್ಕೆ ಬೆಂಬಲ ನೀಡಿದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ತಿಳಿಸಿದೆ.

‘Krishnavatharam Part 1’ gets tax exemption in Uttar Pradesh – ತುಳುಟೈಮ್ಸ್

ಇದನ್ನೂ ಓದಿ :‘ಇಂದಿರಾ ಫುಡ್ ಕಿಟ್’ ಯೋಜನೆ ಘೋಷಣೆಯಾಗಿ ತಿಂಗಳುಗಳು ಕಳೆದರೂ ಇನ್ನೂ ಜಾರಿಗೆ ಬಂದಿಲ್ಲ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=2z1d-za9v8VAdJTt

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 168

You cannot copy content of this page