ಬ್ರೇಕಿಂಗ್ ನ್ಯೂಸ್
ಕ್ರೀಡೆ

ಐಪಿಎಲ್ 2026 ಆರಂಭ ಪಂದ್ಯದಲ್ಲಿ ಹರ್ಭಜನ್ ಸಿಂಗ್ ‘Dad’ ಕಾಮೆಂಟ್ ವೈರಲ್

ಬೆಂಗಳೂರು :Tulu Times l ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ನಡೆದ ಒಂದು ಸಾಮಾಜಿಕ ಜಾಲತಾಣದ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹರ್ಭಜನ್ ಸಿಂಗ್ ಅವರ ಚುಟುಕು ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಶನಿವಾರ (ಮಾರ್ಚ್ 29) ರಂದು ಆರ್ ಸಿಬಿ ಮತ್ತು ಸನ್ರೈಸಸ್ ಹೈದರಾಬಾದ್ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ವೇಳೆ ಹಿಂದಿ ಕಾಮೆಂಟ್ರಿ ಪ್ಯಾನೆಲ್‌ನಲ್ಲಿ ಹರ್ಭಜನ್ ಸಿಂಗ್ ಜೊತೆಗೆ ವೀರೆಂದ್ರ ಸೆಹ್ವಾಗ್ ಮತ್ತು ಆಕಾಶ್ ಚೋಪ್ರಾ ಭಾಗವಹಿಸಿದ್ದರು.

ಘಟನೆ ಆರಂಭವಾಗಿದ್ದು, ಎಕ್ಸ್ ನಲ್ಲಿ ಒಬ್ಬ ಬಳಕೆದಾರ ಕಾಮೆಂಟ್ರಿ ಪ್ಯಾನೆಲ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡು ಅವರನ್ನು “ಕ್ಲೌನ್ಸ್” ಎಂದು ಟ್ರೋಲ್ ಮಾಡಿದಾಗ. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್ ಅವರು ಹಾಸ್ಯಮಯವಾಗಿ ಉತ್ತರ ನೀಡಿ, “ನಮ್ಮಲ್ಲಿ ಯಾರನ್ನಾದರೂ ನಿಮ್ಮ ‘ಡ್ಯಾಡ್’ ಆಗಿ ಆಯ್ಕೆಮಾಡಿ” ಎಂದು ಹೇಳಿದ್ದು, ಇದು ನೆಟ್ಟಿಗರ ಗಮನ ಸೆಳೆಯಿತು. ಅವರ ಈ ಚುಟುಕು ಪ್ರತಿಕ್ರಿಯೆ ಅನೇಕರು ಮೆಚ್ಚಿಕೊಂಡು ಹಂಚಿಕೊಂಡರು.

ಆದರೆ ಎಲ್ಲರೂ ಇದನ್ನು ಒಪ್ಪಲಿಲ್ಲ. ಕೆಲವರು ಈ ಪ್ರತಿಕ್ರಿಯೆಯನ್ನು ಅಪ್ರೊಫೆಷನಲ್ ಎಂದು ಟೀಕಿಸಿದ್ದು, ಹಿಂದಿ ಕಾಮೆಂಟ್ರಿಯ ಗುಣಮಟ್ಟದ ಬಗ್ಗೆ ಜನರು ವ್ಯಕ್ತಪಡಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಗಮನಿಸಬೇಕೆಂದು ಹೇಳಿದ್ದಾರೆ.

ಐಪಿಎಲ್ ಕಾಮೆಂಟ್ರಿಯಲ್ಲಿ 2022ರಿಂದ ಸಕ್ರಿಯವಾಗಿರುವ ಹರ್ಭಜನ್ ಸಿಂಗ್ ಅವರು ತಮ್ಮ ವಿಶ್ಲೇಷಣೆಗೂ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಕ್ರಿಯತೆಗೂ ಪ್ರಸಿದ್ಧರಾಗಿದ್ದಾರೆ. ಒಟ್ಟಿನಲ್ಲಿ, ಈ ಘಟನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಹಾಸ್ಯ ಮತ್ತು ಚರ್ಚೆ ಎರಡನ್ನೂ ಹುಟ್ಟುಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಕಾಮೆಂಟ್ರಿ ಗುಣಮಟ್ಟದ ಕುರಿತು ಚರ್ಚೆ ಶುರುವಾಗಿದೆ.

Harbhajan Singh’s ‘Dad’ comment goes viral in IPL 2026 opening match – ತುಳುಟೈಮ್ಸ್

ಇದನ್ನೂ ಓದಿ :ಮಂಗಳೂರು ಬಿಸಿಗಾಳಿಯ ಪರಿಣಾಮ: ನಿಂಬೆ ಬೆಲೆ ಏರಿಕೆ, ತಂಪು ಪಾನೀಯಗಳಿಗೆ ಭಾರೀ ಬೇಡಿಕೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/XqT2zKOY-4o?si=0KhuSxOJIuTqtOA_

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 5

You cannot copy content of this page