ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕಾರವಾರದಲ್ಲಿ 8-12 ಅಡಿಯ 6 ಹೆಬ್ಬಾವು ಪ್ರತ್ಯಕ್ಷ !

ಕಾರವಾರ: Tulu Times | ಕಾರವಾರ ತಾಲೂಕಿನ ಕಠಿಣಕೋಣ ಗ್ರಾಮದ ನಿವಾಸಿ ವಿಜಯ ತಳೇಕರ ಅವರ ಮನೆಯ ಅಂಗಳದಲ್ಲಿ 8-12 ಅಡಿಯ 6 ಹೆಬ್ಬಾವು ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಮೂಡಿಸಿವೆ.

ಮನೆಯವರು ಅಂಗಳದಲ್ಲಿ ಹಾಕಿದ ಕೆಲವು ದಿನಬಳಕೆಯ ವಸ್ತುಗಳನ್ನು ರಾಶಿ ಹಾಕಿದ್ದರು. ಆ ವಸ್ತುಗಳ ಅಡಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವುಗಳು ಅಡಗಿ ಕುಳಿತಿದ್ದನ್ನು ಗಮನಿಸಿದ ಮನೆ ಮಂದಿ ಉರಗ ರಕ್ಷಕ  ಗೋಪಾಲ ನಾಯ್ಕ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ  ಗೋಪಾಲ ನಾಯ್ಕ ಕಾರ್ಯಾಚರಣೆಗಿಳಿದರು. ನಂತರ, 6 ಹೆಬ್ಬಾವುಗಳ ರಕ್ಷಣೆ ಮಾಡಲಾಯಿತು.  ಆರೂ ಹೆಬ್ಬಾವುಗಳು ತಲಾ 8 ರಿಂದ 12 ಅಡಿ ಉದ್ದವಿದ್ದವು. ಅವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಡಲಾಯಿತು.

ಈ ಕುರಿತು ಮಾತನಾಡಿದ ಉರಗ ರಕ್ಷಕ ಗೋಪಾಲ ನಾಯ್ಕ, ಬೇಸಿಗೆ ಕಾಲದ ಆರಂಭವು ಹಾವುಗಳ ಮಿಲನಕ್ರಿಯೆಯ ಸಮಯವಾಗಿದೆ. ಈ ಅವಧಿಯಲ್ಲಿ ಹೆಣ್ಣು ಹಾವನ್ನು ಹುಡುಕಿಕೊಂಡು ಗಂಡು ಹಾವುಗಳು ಬರುವುದು ಪ್ರಕೃತಿ ಸಹಜ. ಇದೇ ಕಾರಣಕ್ಕಾಗಿ ಒಂದೇ ಕಡೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹೆಬ್ಬಾವುಗಳು ಸೇರಿದ್ದವು ಎಂದರು.

6 pythons measuring 8-12 feet spotted in Karwar!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page