ಬ್ರೇಕಿಂಗ್ ನ್ಯೂಸ್
ಕರ್ನಾಟಕ

25 ದಿನ ಪೂರೈಸಿದ ಕಿಚ್ಚನ ಮಾರ್ಕ್…ಒಟಿಟಿಗೆ ಎಂಟ್ರಿಗೂ ರೆಡಿ..

ಸಿನಿಮಾ: Tulu Times | ಕಳೆದ ವರ್ಷಾಂತ್ಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಕಿಚ್ಚನ ”ಮಾರ್ಕ್” ಸಿನಿಮಾ ಥಿಯೇಟರ್ ಅಂಗಳದಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದ ಈ ಚಿತ್ರವೀಗ 25 ದಿನ ಪೂರೈಸಿದೆ. ಈ ಸಂಭ್ರಮದ‌ ನಡುವೆ ಮಾರ್ಕ್ ಒಟಿಟಿ ಎಂಟ್ರಿಗೂ ಸಜ್ಜಾಗಿದೆ.

ಮಾರ್ಕ್ ಒಟಿಟಿ‌ ಎಂಟ್ರಿ ಯಾವಾಗ?

ಇದೇ ಜನವರಿ-23 ರಿಂದಲೇ ಜೀಯೋ ಹಾಟ್‌ಸ್ಟಾರ್ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್ ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ಮಾರ್ಕ್ ಕಣ್ತುಂಬಿಕೊಳ್ಳಬಹುದು. ಮಾರ್ಕ್ ನಲ್ಲಿ ಕಿಚ್ಚನ ಆಕ್ಟಿಂಗ್, ಮ್ಯಾನರಿಸಂ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು. ಟೈಟ್ ಆದ ಚಿತ್ರಕತೆ ಹೊಂದಿರುವ ‘ಮಾರ್ಕ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ‌ ಮಾಡಿದ್ದರು. ಈ ಹಿಂದೆ‌ ಕಿಚ್ಚನಿಗೆ ‘ಮ್ಯಾಕ್ಸ್’ ಸಿನಿಮಾ ಮಾಡಿ ಯಶಸ್ಸು ಕಂಡಿದ್ದರು. ಈ ಸಿನಿಮಾದಲ್ಲಿ ಸುದೀಪ್ ಜೊತೆ ತಮಿಳಿನ ಯೋಗಿ ಬಾಬು, ಮಲಯಾಳಂನ ಶೈನ್ ಟಾಮ್ ಚಾಕೊ, ನವೀನ್ ಚಂದ್ರ , ನಿಶ್ವಿಕಾ ನಾಯ್ಡು, ರೋಶಿಕಾ ನಟಿಸಿದ್ದರು. ಸತ್ಯಜ್ಯೋತಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ ಬ್ಯಾನರ್ ‌ನಡಿ ಮಾರ್ಕ್ ಸಿನಿಮಾ‌ ನಿರ್ಮಾಣವಾಗಿತ್ತು.

ಗಿಲ್ಲಿ’ ಬಿಗ್ ಬಾಸ್ ಕನ್ನಡ 12ರ ವಿಜೇತ : ರೆಕಾರ್ಡ್ ದಾಖಲಿಸಿದ ಮತ

ಬೆಂಗಳೂರು: ಹಲವು ವಾರಗಳ ತೀವ್ರನಿರೀಕ್ಷೆಯ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 12 ಅತ್ಯುತ್ತಮ ಯಶಸ್ಸು ಕಂಡಿದ್ದು ನಟಿ ಹಾಗೂ ಹಾಸ್ಯ ಕಲಾವಿದ ಗಿಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾರ್ಯಕ್ರಮದ ನಿರೂಪಕ ಕಿಚ್ಚಾ ಸುದೀಪ್ ವೇದಿಕೆಯಲ್ಲಿ ಅಧಿಕೃತವಾಗಿ ಫಲಿತಾಂಶ ಘೋಷಿಸಿ ಜನಪ್ರಿಯ ಸೀಸನ್‌ಗೆ ತೆರೆ ಎಳೆದರು. ಗಿಲ್ಲಿ 37 ಕೋಟಿಗೂ ಹೆಚ್ಚು ಮತಗಳನ್ನು ಪಡೆದು, ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಅತ್ಯಧಿಕ ಮತಗಳೊಂದಿಗೆ ಜಯಗಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಂತಿಮ ಹಂತದಲ್ಲಿ ಗಿಲ್ಲಿ ಮತ್ತು ನಟಿ ರಕ್ಷಿತಾ ಶೆಟ್ಟಿ: ನಡುವೆ ಭಾರೀ ಪೈಪೋಟಿ ನಡೆದಿದ್ದು, ರಕ್ಷಿತಾ ಶೆಟ್ಟಿ ಮೊದಲ ರನ್ನರ್-ಅಪ್ ಸ್ಥಾನ ಪಡೆದರು.

ಕಿಚ್ಚಾ ಸುದೀಪ್ ವೇದಿಕೆಯಲ್ಲೇ ವೈಯಕ್ತಿಕವಾಗಿ ಹೆಚ್ಚುವರಿ ರೂ.10 ಲಕ್ಷ ನಗದು ಬಹುಮಾನ 

ಈ ಸೀಸನ್‌ನ ಟಾಪ್ 5 ಸ್ಪರ್ಧಿಗಳು ಗಿಲ್ಲಿ, ರಕ್ಷಿತಾ ಶೆಟ್ಟಿ, ಆಶ್ವಿನಿ ಗೌಡ, ರವಂ ಮತ್ತು ಕಾವ್ಯರಾಗಿದ್ದರು. ಅಂತಿಮ ಹೋರಾಟ ಗಿಲ್ಲಿ ಮತ್ತು ರಕ್ಷಿತಾ ಶೆಟ್ಟಿ ನಡುವೆ ನಡೆಯಿತು. ವಿಜೇತರ ಬಹುಮಾನವಾಗಿ ಗಿಲ್ಲಿಗೆ ಬಿಗ್ ಬಾಸ್ ಸೀಸನ್ 12 ಟ್ರೋಫಿ, ಪ್ರಾಯೋಜಕರಿಂದ ರೂ.50 ಲಕ್ಷ ನಗದು ಬಹುಮಾನ ಹಾಗೂ ಒಂದು ಮಾರುತಿ ಸುಜುಕಿ ಎಸ್ಯುವಿ ಕಾರು ಲಭಿಸಿತು ವಿಶೇಷವಾಗಿ, ನಿರೂಪಕ ಕಿಚ್ಚಾ ಸುದೀಪ್ ವೇದಿಕೆಯಲ್ಲೇ ವೈಯಕ್ತಿಕವಾಗಿ ಹೆಚ್ಚುವರಿ ರೂ.10 ಲಕ್ಷ ನಗದು ಬಹುಮಾನ ಘೋಷಿಸಿದರು.

ತಮ್ಮ ಹಾಸ್ಯಭರಿತ ವ್ಯಕ್ತಿತ್ವ ಮತ್ತು ಪ್ರದರ್ಶನದ ಮೂಲಕ ಗಿಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದು, ಅದೇ ಅವರಿಗೆ ಕಿರೀಟ ತಂದುಕೊಟ್ಟಿತು. ಮೊದಲ ರನ್ನರ್-ಆದ್ ರಕ್ಷಿತಾ ಶೆಟ್ಟಿಗೆ ಎರಡು ಪ್ರಾಯೋಜಕರಿಂದ ಒಟ್ಟು ರೂ.29 ಲಕ್ಷ ಮತ್ತು ರೂ.5 ಲಕ್ಷ ನಗದು ಬಹುಮಾನ ಲಭಿಸಿತು. ಮೂರನೇ ಸ್ಥಾನ ಪಡೆದ ಅಶ್ವಿನಿ ಗೌಡ ಅವರಿಗೆ ಮೂರು ಪ್ರಾಯೋಜಕರಿಂದ ಒಟ್ಟು ರೂ.14 ಲಕ್ಷ ನಗದು ಬಹುಮಾನ ದೊರಕಿತು.

Kicchana Mark, who completed 25 days… is ready to enter OTT..- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page