ಬೆಳ್ತಂಗಡಿ : ತುಳುಟೈಮ್ಸ್ | ಪುರಾತನ ಹಿನ್ನೆಲೆ ಹೊಂದಿರುವ ಬೆಳ್ತಂಗಡಿ ತಾಲೂಕು, ಉರುವಾಲು ಗ್ರಾಮದ ಕಾರಿಂಜ ಬಾಕಿಮಾರಿನಲ್ಲಿ ಜನವರಿ 24,25ರಂದು ನೇಮೋತ್ಸವ ಜರುಗಲಿದೆ.
ಗ್ರಾಮ ದೈವಗಳು ಮತ್ತು ಪರಿವಾರ ದೈವಗಳಿಗೆ ವಿಜೃಂಭಣೆಯ ನೇಮೋತ್ಸವಕ್ಕೆ ಸಿದ್ದತೆಗಳು ನಡೆಯುತ್ತಿದೆ.
ಉರುವಾಲು ಗ್ರಾಮದಲ್ಲಿ ಗ್ರಾಮಸ್ಥರೆಲ್ಲಾ ಸೇರಿಕೊಂಡು ನಡೆಸಿಕೊಂಡು ಬರುತ್ತಿರುವ ಅತೀ ದೊಡ್ಡ ದೈವಾರಾಧನೆಯ ಕೇಂದ್ರವಾಗಿ ಕಾರಿಂಜ ಬಾಕಿಮಾರು ಗುರುತಿಸಲ್ಪಟ್ಟಿದೆ.
25 ನೇ ತಾರೀಖು ಆದಿತ್ಯವಾರ ಸಂಜೆ ಚೆಂಡೆತ್ತಿಮಾರಿನಿಂದ ದೈವಗಳ ಭಂಡಾರ ಬಂದು ನೇಮೋತ್ಸವ ಆರಂಭವಾಗುತ್ತದೆ.
ಗ್ರಾಮದೈವಗಳಾದ ಶ್ರೀ ರಾಜಂದೈವ ಕಲ್ಕುಡ,ಕಲ್ಲುರ್ಟಿ,ಪಿಲಿಚಾಮುಂಡಿ,ಎಣ್ಮಣ್ಣಾಯ, ಪಂಜುರ್ಲಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಇಲ್ಲಿ ನಡೆಯಲಿದೆ.
ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ದೈವಗಳ ನೇಮೋತ್ಸವದಲ್ಲಿ ಪಾಲ್ಗೊಂಡು ಗಂಧ ಪ್ರಸಾದವನ್ನು ಸ್ವೀಕರಿಸಿ ಗ್ರಾಮ ದೈವಗಳ ಕೃಪೆಗೆ ಪಾತ್ರರಾಗುವಂತೆ ಆಡಳಿತ ಸಮಿತಿ,ಜಾತ್ರೋತ್ಸವ ಸಮಿತಿ ವಿನಂತಿಸಿಕೊಂಡಿದೆ.
Karinja-Bakimaru village deity appointment festival in Uruvalu village tulutimesಇದನ್ನೂ ಓದಿ : ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ನ ಭದ್ರತೆ ಬಗ್ಗೆ ಅಸಾಮಾಧಾನ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess











