ಬ್ರೇಕಿಂಗ್ ನ್ಯೂಸ್
ಕರ್ನಾಟಕ

Kukke Shri Subramanya : ರಾಜ್ಯದಲ್ಲೇ ಅತ್ಯಂತ ಶ್ರೀಮಂತ ದೇವಸ್ಥಾನ ‘ಕುಕ್ಕೆ ಶ್ರೀ ಸುಬ್ರಮಣ್ಯ’

ಸುಬ್ರಮಣ್ಯ ದೇವಸ್ಥಾನ : Tulu Times | ಸುಬ್ರಹ್ಮಣ್ಯ ದೇವಸ್ಥಾನದ ಮೇಲಿನ ನಂಬಿಕೆಯಿಂದ ಬರುವ ಭಕ್ತರ ಸಂಖ್ಯೆ ವರ್ಷ ವರ್ಷ ಜಾಸ್ತಿಯಾಗುತ್ತಿದೆ. ಇಲ್ಲಿ ಪೂಜೆ, ಸೇವೆ ಮಾಡಿಸಿದರೆ ಇಷ್ಟಾರ್ಥ ಸಿದ್ಧಿ ಜೊತೆಗೆ ಹರಕೆ ಸಂದಾಯವಾಗುತ್ತದೆ ಎನ್ನುವ ಹಲವು ಸನ್ನಿವೇಶಗಳಿವೆ. ನಾಗದೋಷ ಪರಿಹಾರಕ್ಕಾಗಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಧರ್ಮಭೇದವಿಲ್ಲದೆ ಜನರು ಬರುತ್ತಾರೆ. ನಾಗದೋಷ ಪರಿಹಾರವೂ ಆಗುತ್ತದೆ. ಇಲ್ಲಿಗೆ ಬರುವ ಭಕ್ತರಿಗೆ ಇದೀಗ ವಿಶೇಷ ಮಾಹಿತಿಯು ಹೊರಬಿದ್ದಿದ್ದು, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ ರಾಜ್ಯದಲ್ಲಿಯೇ ಅತ್ಯಂತ ಶ್ರೀಮಂತ ದೇವಸ್ಥಾನವೆಂದು ಸ್ಥಾನ‌ಗಳಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯದಲ್ಲಿ ಮೊದಲ ಸ್ಥಾನ ;

ಹೌದು…! ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳ ಪೈಕಿ ಪ್ರಸಿದ್ಧ ನಾಗಕ್ಷೇತ್ರವಾಗಿರುವ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು,‌ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿ ಗುರುತಿಸಿಕೊಂಡಿದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟಗಳ ಮಧ್ಯೆ ನೆಲೆಸಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿ ಖ್ಯಾತಿಯಾಗಿದ್ದು, ನಿಸರ್ಗ ಸೌಂದರ್ಯ, ಪುರಾಣ ಹಿನ್ನೆಲೆ ಮತ್ತು ವಿಶಿಷ್ಟ ಆಚರಣೆಗಳಿಂದ ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಅಲ್ಲದೇ, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ರಾಜ್ಯದ ದೇವಸ್ಥಾನಗಳ ಆದಾಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿ ಹೊರಹೊಮ್ಮಿದೆ.

2024–25ರಲ್ಲಿ ದೇವಸ್ಥಾನವು ₹155 ಕೋಟಿಗೆ ತಲುಪಿದ್ದು, ಈ ಬೆಳವಣಿಗೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಪ್ರಮುಖ ಯಾತ್ರಾ ಕೇಂದ್ರವಾಗಿರುವುದರ ಜೊತೆಗೆ, ಕರ್ನಾಟಕದ ಧಾರ್ಮಿಕ ಪ್ರವಾಸೋದ್ಯಮದಲ್ಲಿ ಅದರ ಪಾತ್ರ ಹೆಚ್ಚುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ. ಒಟ್ಟಾರೆಯಾಗಿ, ದೇವಾಲಯಗಳ ಆದಾಯ ಹೆಚ್ಚುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ದೇವಾಲಯಗಳ ನಿರ್ವಹಣೆ, ಪಾರಂಪರಿಕ ಸಂರಕ್ಷಣೆ, ಯಾತ್ರಿಕರ ಸೌಲಭ್ಯಗಳ ಅಭಿವೃದ್ಧಿ ಹಾಗೂ ಸಮುದಾಯಮುಖಿ ಯೋಜನೆಗಳಿಗೆ ಹೆಚ್ಚಿನ ಹೂಡಿಕೆ ಸಾಧ್ಯವಾಗಲಿದೆ. ಇದರಿಂದ ಕರ್ನಾಟಕದ ದೇವಸ್ಥಾನಗಳು ಧಾರ್ಮಿಕ ಕೇಂದ್ರಗಳಾಗಿಯೇ ಅಲ್ಲದೆ, ಸಾಮಾಜಿಕ ಸಂಸ್ಥೆಗಳಾಗಿಯೂ ತಮ್ಮ ಪಾತ್ರವನ್ನು ಇನ್ನಷ್ಟು ಬಲಪಡಿಸಿಕೊಳ್ಳುತ್ತದೆ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳ ಮೊರೆ ಹೋಗುತ್ತಿರುವುದು ಕೆಲವೊಂದು ನಂಬಿಕೆಗಳಿಗೆ ದೇವರು ನೀಡುತ್ತಿರುವ ಅಭಯವು ಕೂಡಾ ಇನ್ನೊಂದೆಡೆ ಕಾರಣವಾಗಿರಬಹುದೆಂದು ಹೇಳಲಾಗಿದೆ.

Kukke Shri Subramanya: The richest temple in the state is ‘Kukke Shri Subramanya’. – ತುಳು ಟೈಮ್ಸ್

ಇದನ್ನೂ ಓದಿ :ಸೇತುವೆಗೆ ಬೈಕ್‌ ಡಿಕ್ಕಿ: ಸುಬ್ರಹ್ಮಣ್ಯದ ಯುವಕ ಸ್ಥಳದಲ್ಲಿಯೇ ಸಾವು !

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=odtczmtszn91Oug8

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page