ಬ್ರೇಕಿಂಗ್ ನ್ಯೂಸ್
ಕಡಬಕರಾವಳಿಪುತ್ತೂರು

ಕಡಬ: ಈಗ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ? ಆಶಾ ತಿಮ್ಮಪ್ಪ ಹೆಸರಲ್ಲಿ ಫೇಕ್‌ ಫೋಸ್ಟರ್‌ ವೈರಲ್

ಕಡಬ – ತುಳು ಟೈಮ್ಸ್‌: ಉಡುಪಿ ಮೋದಿ ಭೇಟಿ ವಿಚಾರಕ್ಕೆ ಮತ್ತೊಂದು ವಿವಾದ ಸೇರ್ಪಡೆಗೊಂಡಿದೆ. ಪ್ರಮೋದ್‌ ಮಧ್ವರಾಜ್‌, ಕಿಶೋರ್‌ ಬೊಟ್ಯಾಡಿ ಪತ್ನಿಗೆ ಮೋದಿ ಭೇಟಿ ಅವಕಾಶ ಸಾಕಷ್ಟು ಸುದ್ದಿ ಮಾಡಿತ್ತು. ಈಗ ಆ ವಿವಾದ ಪುತ್ತೂರಿನಲ್ಲೂ ಕೇಳಿಬಂದಿದೆ.

ಕಳೆದ ಬಾರಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಮೋದಿ ಭೇಟಿ ಅವಕಾಶ ಸಿಕ್ಕಿಲ್ಲ. ಇದಕ್ಕಾಗಿ ಬಿಜೆಪಿ ಮುಖಂಡೆ ಆಕ್ರೋಶಗೊಂಡಿದ್ದಾರೆ ಎಂಬ ಫೇಕ್‌ ಪೋಸ್ಟರ್‌ ಹರಿದಾಡಿದೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಪೋಸ್ಟ್ ಹರಿದಾಡಿದ್ದು ಈ ಬಗ್ಗೆ ಕಡಬಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

“ದೇಶದ ಪ್ರಧಾನಿ ಉಡುಪಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ನನಗೂ ಅವರನ್ನು ನೋಡುವ ಭಾಗ್ಯ ಸಿಗಬಹುದು ಅಂದುಕೊಂಡಿದ್ದೆ. ಆದರೆ ಈಗ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ” ಎಂಬ ಹೇಳಿಕೆಯ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಈ ಸುಳ್ಳು ಪ್ರಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆಶಾ ತಿಮ್ಮಪ್ಪ ಗೌಡ, ಇದು ನನ್ನ ತೇಜೋವಧೆ ಮಾಡುವ ದುರುದ್ದೇಶದಿಂದಲೇ ಮಾಡಲಾದ ಕೃತ್ಯ. ಹೆಸರಿಗೆ ಕಳಂಕ ತರುವಂತಹ ಈ ಕೃತ್ಯದ ಹಿಂದೆ ರಾಜಕೀಯ ಷಡ್ಯಂತ್ರ ಇರೋ ಸಾಧ್ಯತೆ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕಡಬ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವ ಆಶಾ ತಿಮ್ಮಪ್ಪ ಗೌಡ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

Complaint filed with police over derogatory post using Puttur BJP leader Asha Thimmappa Gowda’s photo. Tulu Times

ಇದನ್ನೂ ಓದಿ: ಮಂಗಳೂರು: ಹೆದ್ದಾರಿಯಲ್ಲಿ ಮಾದಕ ವಸ್ತು ಸಾಗಾಟ – ನಾಲ್ವರು ಸಿಸಿಬಿ ಬಲೆಗೆ


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ  : https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 39

You cannot copy content of this page