ಬ್ರೇಕಿಂಗ್ ನ್ಯೂಸ್
ಕರ್ನಾಟಕ

2 ವರ್ಷದ ಮಗುವಿನ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸು ಕಂಡ ಜಯದೇವ ಆಸ್ಪತ್ರೆ…!

ಬೆಂಗಳೂರು : Tulu Times | ಬೆಂಗಳೂರು ಜಯದೇವ ಹೃದಯ ಸಂಸ್ಥೆಯು ಕರ್ನಾಟಕ ರಾಜ್ಯದ ಅತ್ಯಂತ ದೊಡ್ಡ ಹಾಗೂ ಪ್ರಸಿದ್ಧ ಸರ್ಕಾರಿ ಹೃದಯ ಆಸ್ಪತ್ರೆಯಾಗಿದೆ. ಬೆಂಗಳೂರಿನ ಜಯನಗರದ 9 ನೇ ಬ್ಲಾಕ್ ನಲ್ಲಿರುವ ಈ ಆಸ್ಪತ್ರೆಗೆ ಅದೆಷ್ಟೋ ರೋಗಿಗಳು ಬರುತ್ತಾರೆ. ಇಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಹೃದಯ ಚಿಕಿತ್ಸೆಗಳು ದೊರೆಯುತ್ತವೆ. ಕಡಿಮೆ ವೆಚ್ಚದಲ್ಲಿ ಸ್ವತಃ ಸರ್ಕಾರವೇ ನಡೆಸುವ ಈ ಆಸ್ಪತ್ರೆಯು ಹಲವಾರು ಜೀವನಕ್ಕೆ ದಾರಿದೀಪವಾಗಿದೆ.

ಆದರೆ ಇಲ್ಲೊಂದು ಘಟನೆಯಿಂದ ಜಯದೇವ ಆಸ್ಪತ್ರೆಯ ಸಾಧನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದು, ಟೆಟ್ರಾಲಜಿ ಆಫ್ ಫಾಲಟ್ ಎಂಬ ಹೃದಯ ರೋಗದಿಂದ ಬಳಲುತ್ತಿದ್ದ ಫಿಲಿಪೈನ್ಸ್ ದೇಶದ ಎರಡು ವರ್ಷದ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಇಲ್ಲಿನ ವೈದ್ಯರ ತಂಡವು ಯಶಸ್ವಿಯಾಗಿ ನಡೆಸಿರುತ್ತದೆ.

ನವೆಂಬರ್ 10 ರಂದೇ ಈ ಶಸ್ತ್ರಚಿಕಿತ್ಸೆಯು ನಡೆದಿದ್ದು, ತದನಂತರ ಇಲ್ಲಿನ ಚಿಕಿತ್ಸೆಯಿಂದ ಗುಣಮುಖಗೊಂಡ ಅವಿಯನ್‌ ಜೇಡ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂಬ ಮಾಹಿತಿಯು ಮೂಲದಿಂದ ದೊರೆತಿವೆ. ಅಪರೂಪದ ಹೃದಯ ರೋಗದಿಂದ ಬಳಲುತ್ತಿದ್ದ ಎರಡು ವರ್ಷದ ಅವಿಯನ್ ಅಲಿನ್ ಎಂಬ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹಲವು ಸವಾಲುಗಳ ಮಧ್ಯೆಯು ಈ ಮಗುವನ್ನು ಉಳಿಸಲಾಯಿತು ಎಂದು ವೈದ್ಯರ ತಂಡವು ಖುಷಿಯಿಂದ ಹೇಳಿಕೊಂಡಿರುತ್ತಾರೆ.

Jayadeva Hospital successfully performs heart surgery on 2-year-old boy – ತುಳು ಟೈಮ್ಸ್

ಇದನ್ನೂ ಓದಿ :ಗೂಗಲ್ ಮೀಟ್ ಸರ್ವರ್ ಡೌನ್..ಬಳಕೆದಾರರ ಪರದಾಟ !

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/fsDB1Bql7n8?si=beZF1Mj-FLeZj6uF

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page