ಕ್ರಿಕೆಟ್: Tulu Times | ಇತ್ತೀಚೆಗೆ ಸ್ಟಾರ್ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ -ಪಲಾಶ್ ಮುಚ್ಚಲ್ ಅವರ ಹಳದಿ ಶಾಸ್ತ್ರ ಹಾಗೂ ಪ್ರಪೋಸ್ ಡೇ ಬಹಳ ಅದ್ಧೂರಿಯಾಗಿ ನಡೆಯಿತು. ಕೋಟ್ಯಾಂತರ ಫ್ಯಾನ್ಸ್ ಇವರ ನಡುವಿನ ಪ್ರೀತಿಯನ್ನು ನೋಡಿ ಅಚ್ಚರಿ ಪಡುವ ಮಟ್ಟಿಗೆ ಇವರಿಬ್ಬರ ವೀಡಿಯೋ ವೈರಲ್ ಆಗಿತ್ತು.
ಇದೀಗ ಮದುವೆ ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಶಾಕಿಂಗ್ ಸಂಗತಿಯೊಂದು ಬಹಿರಂಗಗೊಂಡಿದೆ. ಹೌದು, ಇದೀಗ ಸ್ಮೃತಿ ಮಂಧಾನ -ಪಲಾಶ್ ಮುಚ್ಚಲ್ ಮದುವೆ ಮುಂದೂಡಲಾಗಿದೆ ಎನ್ನುವ ಮಾಹಿತಿ ಎಲ್ಲೆಡೆ ಬಹಿರಂಗವಾಗಿ ಹರಿದಾಡುತ್ತಿದೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ತಂದೆಯ ಆರೋಗ್ಯ ಹದಗೆಟ್ಟಿದ್ದರಿಂದ ಸ್ಮೃತಿ ಮಂಧಾನ ತಮ್ಮ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಸ್ಮೃತಿ ಪಲಾಶ್ ಅವರೊಂದಿಗಿನ ನಿಶ್ಚಿತಾರ್ಥವನ್ನು ಸಮರ್ಥಿಸುವಂತಹ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಪಲಾಶ್ ಅವರು ಸ್ಮೃತಿ ಅವರಿಗೆ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪ್ರೇಮ ನಿವೇದನೆ ಮಾಡಿದ್ದರು. ಇದಾದ ಬಳಿಕ ಹಳದಿ ಸಮಾರಂಭದ ವಿಡಿಯೋಗಳು ಸಖತ್ ವೈರಲ್ ಆಗಿದ್ದವು. ಇದೀಗ ಈ ಎಲ್ಲ ವಿಡಿಯೋಗಳನ್ನು ಸೋಮವಾರ ಡಿಲೀಟ್ ಮಾಡಲಾಗಿದೆ. ಪಲಾಶ್ ಅವರ ಖಾತೆಯಲ್ಲಿ ಫೋಟೋ ವೀಡಿಯೋಗಳಿವೆ, ಆದ್ರೆ ಸ್ಮೃತಿ ಅವರ ಖಾತೆಯಲ್ಲಿ ಯಾವುದೇ ವೀಡಿಯೋ ಫೋಟೋಗಳು ಇಲ್ಲ ಎನ್ನಲಾಗುತ್ತಿದೆ.
ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ…?
ಪಲಾಶ್ ಮುಚ್ಚಲ್ ಅವರಿಗೆ ಈ ಹಿಂದೆ ಬೇರೆ ಸಂಬಂಧ ಇತ್ತು ಎನ್ನಲಾಗಿತ್ತು. ಹೀಗಾಗಿ ಈ ವಿಚಾರಕ್ಕಾಗಿಯೇ ಎರಡೂ ಫ್ಯಾಮಿಲಿ ಜೊತೆ ಜಗಳ ನಡೆದಿದ್ದು, ಇದರಿಂದ ಬೆಳಗ್ಗೆ ಸ್ಮೃತಿ ಅವರ ತಂದೆ ಉಪಾಹಾರ ಸೇವಿಸುತ್ತಿದ್ದಾಗ, ಅವರ ಆರೋಗ್ಯ ಹದಗೆಟ್ಟಿತು ಎನ್ನಲಾಗುತ್ತಿದೆ. ಹೀಗಾಗಿ ತೀವ್ರವಾದ ಆರೋಗ್ಯ ಹದಗೆಟ್ಟಾಗ ನಾವು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದೆವು. ಸ್ಮೃತಿ ಅವರು ತಮ್ಮ ತಂದೆಗೆ ತುಂಬಾ ಹತ್ತಿರವಾಗಿದ್ದಾರೆ. ಅವರು ಗುಣಮುಖರಾಗುವವರೆಗೆ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಿದ್ದಾರೆ ಎಂದು ಸ್ಮೃತಿ ಅವರ ಮ್ಯಾನೇಜರ್ ತುಹಿನ್ ಮಿಶ್ರಾ ಶ್ರೀನಿವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಪಲಕ್ ಮುಚ್ಚಲ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಸ್ಮೃತಿ ಅವರ ತಂದೆಯ ಆರೋಗ್ಯದ ಕಾರಣದಿಂದಾಗಿ, ಸ್ಮೃತಿ ಮತ್ತು ಪಲಾಶ್ ಅವರ ವಿವಾಹವನ್ನು ಮುಂದೂಡಲಾಗಿದೆ. ಎಲ್ಲರೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ ಎಂದು ಬರೆದಿದ್ದಾರೆ.
Is Smriti Mandhana being cheated on by her future husband? Why the sudden postponement of the wedding? – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











