ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮೊಟ್ಟೆ ದರದಲ್ಲಿ ಏರಿಕೆ : ವ್ಯಾಪಾರ, ಉತ್ಪನ್ನಕ್ಕೂ ಹೊಡೆತ…!

ದಕ್ಷಿಣ ಕನ್ನಡ : Tulu Times | ಮೊಟ್ಟೆಯು ನಮ್ಮ ದಿನನಿತ್ಯದ ಆಹಾರದಲ್ಲಿನ ಅತ್ಯಂತ ಪೌಷ್ಟಿಕಾಂಶಯುಕ್ತ ಆಹಾರಗಳಲ್ಲಿ ಒಂದಾಗಿದೆ. ಇದನ್ನು ಅನೇಕ ವಿಧಗಳಲ್ಲಿ ತಯಾರಿಸಿ ತಿನ್ನಬಹುದು ಮತ್ತು ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಆದರೆ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಮೊಟ್ಟೆಯ ದರ, ಏರಿಕೆಯತ್ತ ಸಾಗಿದೆ. ಇನ್ನು ಡಿಸೆಂಬರ್‌ನಲ್ಲಿ ಕೇಕ್‌ ತಯಾರಿಸುವ ಋತು ಹೆಚ್ಚಾದಾಗ, ಬೆಲೆಗಳು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

ವ್ಯಾಪಾರ, ಉತ್ಪನ್ನಕ್ಕೂ ಹೊಡೆತ ;

ಹೌದು…! ಕಳೆದ ಎರಡು ವಾರಗಳಿಂದ ಮೊಟ್ಟೆ ದರ ನಿಯಂತ್ರಣ ಇಲ್ಲದೆ ಏರಿಕೆಯಾಗುತ್ತಿದೆ. ಈ ವಾರಾಂತ್ಯ ಚಿಲ್ಲರೆ ಮೊಟ್ಟೆಯ ದರ 7.40ರಿಂದ 7.50ಕ್ಕೆ ತಲುಪಿದೆ. ಇದೇ ರೀತಿ ದರ ಏರಿಕೆಯಾದರೆ ಚಿಲ್ಲರೆ ಮೊಟ್ಟೆ ದರ ಹತ್ತು ರೂ.ಗೆ ತಲುಪಬಹುದು ಎಂಬ ಆತಂಕ ಎಲ್ಲರಲ್ಲಿ ಮೂಡಿದೆ. ಮಂಗಳೂರಿನಲ್ಲಿ ಚಿಲ್ಲರೆ ಮೊಟ್ಟೆ ಕನಿಷ್ಠ ದರ 8 ರೂ.ಗೆ ಮಾರಾಟವಾಗುತ್ತಿದೆ. ಇದನ್ನು ಅನುಸರಿಸಿ ಗ್ರಾಮಾಂತರ ಪ್ರದೇಶಗಳಲ್ಲಿ, ಗಡಿನಾಡಲ್ಲೂ ದರ ಏರಿಕೆಯಾಗಿದೆ. ಅನಿಯಂತ್ರಿತ ದರ ಏರಿಕೆ ಮೊಟ್ಟೆಯನ್ನು ಅವಲಂಬಿಸಿದ ವ್ಯಾಪಾರ, ಉತ್ಪನ್ನಕ್ಕೂ ಹೊಡೆತ ನೀಡಿದೆ.

ಇನ್ನು ಶಾಲೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸಲು ಬೆಲೆಯಲ್ಲಿನ ವಿಪರೀತ ಹೆಚ್ಚಳ ಕಷ್ಟಕರವಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ಮೊಟ್ಟೆ ಬೆಲೆಯಲ್ಲಿನ ಏರಿಕೆ ಬಹುತೇಕ ಜನರ ಪಾಲಿಗೆ ಹೊಡೆತ ನೀಡಿದೆ. ಮಾಲೆ ಧರಿಸಿದ ಶಬರಿಮಲೆ ಭಕ್ತರು ಸಸ್ಯಾಹಾರ ತಿನ್ನುವ ನೆಲೆಯಲ್ಲಿ ಮೊಟ್ಟೆಯ ಬೆಲೆ ಇಳಿಕೆಯಾಗಬೇಕಿತ್ತು, ಆದರೆ ದಕ್ಷಿಣ ಕನ್ನಡದಲ್ಲೂ ಮೊಟ್ಟೆಯ ಬೆಲೆ ಏರಿಕೆಯಾಗಿದ್ದು, ಸಾಮಾನ್ಯ ಜನರಿಗೆ ಸಾಮಾನ್ಯ ನಾನ್ ವೆಜ್ ಪ್ರಿಯರಿಗೆ, ಬೇಕರಿ ತಿಂಡಿ ತಯಾರಿಸುವವರಿಗೆ ಬೆಲೆ ಏರಿಕೆ ಶಾಕ್ ನೀಡಿದೆ.

Egg Price Hike: Wholesale Egg Prices Soar – ತುಳು ಟೈಮ್ಸ್

ಇದನ್ನೂ ಓದಿ :ಇಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ..!

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=4XOMoeXx6QkKD_wi

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page