Rashmika Mandanna Marriage: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಸುದ್ದಿ ಹರಿದಾಡುತ್ತಿತ್ತು.
ಇದೀಗ ಇಬ್ಬರೂ ಕಪಲ್ಸ್ ಉದಯಪುರದ ಅರಮನೆಯಲ್ಲಿ ವಿವಾಹ ನಿಶ್ಚಿತಾರ್ಥ ಮುಗಿಸಿಕೊಂಡು ಇದೀಗ ಫೆಬ್ರವರಿಯಲ್ಲೇ ಮದುವೆ ನಡೆಯುತ್ತೆ ಅನ್ನೋದು ಬಹುತೇಕ ಖಚಿತವಾದಂತಾಗಿದೆ. 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಅನ್ನೋ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ರಾಶಿಕಾ ರಕ್ಷಿತಾ ಇಬ್ರಿಗೂ ಪತ್ರ ಸಿಕ್ಕಿಲ್ಲ..ರಂಪಾಟ ಮಾಡಿದ ರಾಶಿ..ಮೌನಿಯಾದ ರಕ್ಷಿತಾ!!
ಮದುವೆ ಹುಡುಗಿ ಮನೆಯವರೇ ರಶ್ಮಿಕಾ ಮಂದಣ್ಣ ತವರೂರಾದ ಕೊಡಗಿನಲ್ಲೇ ನಡೆಯುಬಹುದು ಎಂದು ಜನ ಊಹಿಸಿದ್ದರು. ಇನ್ನೂ ಕೆಲವರು ರಶ್ಮಿಕಾ ಅವರು ತೆಲುಗು ಚಿತ್ರರಂಗದಲ್ಲೇ ಹೆಚ್ಚು ಸಕ್ರಿಯವಾಗಿರುವುದರಿಂದ ಮದುವೆ ಹೈದರಾಬಾದ್ ನಲ್ಲೇ ನಡೆಯಬಹುದು ಎಂದು ಊಹಿಸಿದ್ದರು. ಆದ್ರೆ ಇವರಿಬ್ಬರ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ ಎಂದು ವದಂತಿ ಹಬ್ಬಿದೆ.
ರಶ್ಮಿಕಾ ಮದ್ವೆಗೆ ಇವೆಂಟ್ ಮ್ಯಾನೇಜ್ ಮೆಂಟ್ ತಯಾರಿ..!
ರಾಜಸ್ಥಾನದ ಉದಯಪುರದ ಅರಮನೆಯೊಂದರಲ್ಲಿ ಇಬ್ಬರ ಮದುವೆ ನಡೆಯಲಿದ್ದು, ಇದಕ್ಕಾಗಿ ಅಲ್ಲಿನ ಐಷಾರಾಮಿ ಪ್ಯಾಲೇಸ್-ಹೋಟೆಲೊಂದರನ್ನು ರಶ್ಮಿಕಾ ಮದುವೆ ಜವಾಬ್ದಾರಿ ಹೊತ್ತಿರುವ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಸರ್ಚ್ ಮಾಡುತ್ತಿದೆ ಎನ್ನಲಾಗಿದೆ. ಮೂರು ಪ್ಯಾಲೇಸ್ ಹೋಟೆಲ್ಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಲಾಗುತ್ತದೆ. ಈ ಬಗ್ಗೆ ವಿಜಯ್ ದೇವರಕೊಂಡ ಅವರ ಆಪ್ತರು ಮಾಹಿತಿ ನೀಡಿದ್ದು, ಮುಂಬರುವ ಫೆಬ್ರವರಿಯಲ್ಲಿ ಈ ಕಪಲ್ಸ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಅದಕ್ಕಾಗಿ ಈಗಾಗಲೇ ತಯಾರಿ ನಡೆಸಲಾಗುತ್ತಿದೆ. ಮದುವೆಗೆ ಬೇಕಾದ ಎಲ್ಲಾ ವಸ್ತ್ರಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಅದೂ ಸೇರಿದಂತೆ ಆಮಂತ್ರಣ ಪತ್ರಿಕೆಯ ಡಿಸೈನ್ ಬಗ್ಗೆ ಡಿಸ್ಕಸ್ ಆಗ್ತಿದೆ ಎಂದು ಹೇಳಲಾಗುತ್ತಿದೆ.
ಉಂಗುರ ತೋರಿಸಿ ನಾಚಿಕೆ ಪಟ್ಟುಕೊಂಡ ರಶ್ಮಿಕಾ..!
ಈ ಹಿಂದೆ ಜಗಪತಿ ಬಾಬು ಅವರ ಟಾಕ್ ಶೋ ಜಯಮ್ಮು ನಿಶ್ಚಯಮ್ಮೂರ್ ನಲ್ಲಿ ರಶ್ಮಿಕಾ ತಮ್ಮ ನಿಶ್ಚಿತಾರ್ಥದ ಉಂಗುರ ತೋರಿಸಿದ್ದರು. ಇದಕ್ಕೆ ಆ ಎರಡೂ ಉಂಗುರಗಳು ಅತ್ಯಂತ ಮುಖ್ಯವೆಂದು ರಶ್ಮಿಕಾ ಹೇಳಿದ್ದರು. ಅದರಲ್ಲಿ ಒಂದು ನಟಿಗೆ ಅತ್ಯಂತ ಮುಖ್ಯವಾಗಿದೆ ಎಂದು ಜಗಪತಿ ಬಾಬು ಹೇಳುವ ಮೂಲಕ ಅವರನ್ನು ಮತ್ತಷ್ಟು ಕಾಲೆಳೆದಿದ್ದರು. ಇದಕ್ಕೆ, ರಶ್ಮಿಕಾ ನಾಚಿಕೆಪಡುತ್ತಾ ನಕ್ಕಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











