BBK12: ಬಿಗ್ ಬಾಸ್ ಸೀಸನ್ 12 ರಲ್ಲಿ ಪ್ರತಿದಿನ ಹೊಸ ರೀತಿಯಾದಂತಹ ಟ್ವಿಸ್ಟ್ ಗಳು ಬರುತ್ತಿವೆ. ಈ ವಾರ ಯಾರಿಗೆ ಮನೆಯವರ ಪತ್ರ ಸಿಗುತ್ತೆ ಅಂತ ಕಾಯುತ್ತಿದ್ದವರು ಪತ್ರ ಸಿಗದೇ ಕಣ್ಣೀರು ಹಾಕಿದ್ದಾರೆ. ಕಳೆದ ಎಪಿಸೋಡ್ ನಲ್ಲಿ ರಾಶಿಕಾ ಹಾಗೂ ರಕ್ಷಿತಾಗೆ ಪತ್ರ ಸಿಗದೇ ಇಬ್ಬರೂ ಕೂಡ ಬೇಸರಗೊಂಡಿದ್ದಾರೆ.
ರಾಶಿಕಾ ಹಾಗೂ ರಕ್ಷಿತಾ ಅವರ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು, ಮನೆಯವರು ಎರಡು ಗುಂಪುಗಳಾಗಿ ವಿಂಗಡಣೆಯಾಗಿ ಕೆಲವರು ರಕ್ಷಿತಾ ಶೆಟ್ಟಿಯನ್ನು ಆಯ್ಕೆ ಮಾಡಿದರೆ ಇನ್ನೂ ಕೆಲವರು ರಾಶಿಕಾ ಶೆಟ್ಟಿಯವರನ್ನು ಆಯ್ಕೆ ಮಾಡುತ್ತಾರೆ. ಇದರಿಂದ ಮನೆಯ ಒಳಗಡೆ ಕುಳಿತು ಪತ್ರಕ್ಕಾಗಿ ಕಾಯುತ್ತಿದ್ದ ರಾಶಿಕಾ ಹಾಗೂ ರಕ್ಷಿತಾ ಇಬ್ಬರೂ ಕೂಡ ಮನೆಯವರ ಪತ್ರ ಸಿಗಲಿಲ್ಲ ಎಂದು ಬೇಸರಗೊಂಡಿದ್ದಾರೆ.
ರಾಶಿಕಾಗೂ ಇಲ್ಲ ರಕ್ಷಿತಾಗೂ ಇಲ್ಲ..!
ಮನೆಯವರು ಒಮ್ಮತದಿಂದ ಎರಡು ಟೀಮ್ ಮಾಡಿ ಯಾರನ್ನೂ ಕೂಡ ಆಯ್ಕೆ ಮಾಡದೇ ಇರುವ ಹಾಗೆ ಆಯ್ತು ಬಿಗ್ ಬಾಸ್ ಇದರಿಂದ ಇಬ್ಬರಿಗೂ ಕೂಡ ಪತ್ರವನ್ನು ನೀಡಲಿಲ್ಲ. ಮನೆಯ ಒಳಗೆ ಕಾಯುತ್ತಿದ್ದ ಇಬ್ಬರೂ ಕೂಡ ಪತ್ರ ಸಿಗಲಿಲ್ಲ ಎಂದು ಗೋಳಾಡಿದ್ದಾರೆ ಅದರಲ್ಲೂ ರಾಶಿಕಾ ಕುಳಿತಲ್ಲಿಂದ ಎದ್ದು ಬಂದು ಅತ್ತಿದ್ದಾರೆ. ಹಾಗೆ ರಕ್ಷಿತಾ ಅವರು ಕುಳಿತಲ್ಲೇ ಕಣ್ಣೀರು ಹಾಕಿದ್ದಾರೆ ಇದೆಲ್ಲಾ ಆದ ಬಳಿಕ ಮನೆಯವರೆಲ್ಲರೂ ಮನೆಯ ಒಳಗಡೆ ಬಂದು ಇಬ್ಬರಿಗೂ ಕೂಡ ಸಮಾಧಾನ ಮಾಡಿದ್ದಾರೆ.
ರಾಶಿಕಾ ಶೆಟ್ಟಿ ಅವರು ತುಂಬಾನೇ ಕಣ್ಣೀರು ಹಾಕಿದ್ದಾರೆ ನಾನು ಟಾಸ್ಕ್ಗಳಲ್ಲಿ ತುಂಬಾನೇ ಚೆನ್ನಾಗಿ ಆಡಿರುವೆ, ಪ್ರತಿದಿನ ನನಗೆ ಯಾಕೆ ಹೀಗಾಗುತ್ತೆ? ನಾನು ಅಷ್ಟು ಚೆನ್ನಾಗಿ ಆಡಿ ಯಾರೂ ಕೂಡ ನನ್ನ ಆಯ್ಕೆ ಮಾಡಲಿಲ್ಲ. ನನ್ನ ಆಯ್ಕೆ ಮಾಡುವ ಮಾಡಬಹುದಿತ್ತು. ನನಗೆ ಎಲ್ಲಾ ಕ್ವಾಲಿಟಿ ಇತ್ತು ಎಂದು ಅಶ್ವಿನಿ ಅವರ ಜೊತೆಗೆ ರಾಶಿಕಾ ಅತ್ತುಕೊಂಡು ಹೇಳಿದ್ದಾರೆ. ಇದರಿಂದ ರಾಶಿಕಾ ಶೆಟ್ಟಿ ಅವರಿಗೆ ಸಪೋರ್ಟ್ ಮಾಡುವ ಮಂದಿ ಸುತ್ತಮುತ್ತ ಬಂದು ಸಮಾಧಾನ ಮಾಡಿದ್ದಾರೆ.
ಮೌನಿಯಾದ ರಕ್ಷಿತಾ ಶೆಟ್ಟಿ..!
ಇನ್ನು ರಕ್ಷಿತಾ ಶೆಟ್ಟಿ ಅವರ ಪರವಾಗಿ ಕೆಲವರು ನಿಂತಿದ್ದರು. ಗಿಲ್ಲಿ ,ಕಾವ್ಯ ಶೈವ, ರಘು, ಸ್ಪಂದನ ಇವರೆಲ್ಲರೂ ಕೂಡ ರಕ್ಷಿತಾ ಶೆಟ್ಟಿ ಹತ್ತಿರ ಬಂದು ಸಮಾಧಾನ ಮಾಡಿದ್ದಾರೆ. ಅದರಲ್ಲೂ ರಘು ನೀನು ಅಳಬೇಡ ನೀನು ಅತ್ತರೆ, ಬೇಸರವಾಗುತ್ತೆ ಅಂತ ಹೇಳಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ರಾಶಿಕಾಗೆ ಕಂಪೇರ್ ಮಾಡಿದ್ರೆ ರಾಶಿಕಾ ಶೆಟ್ಟಿ ಸ್ವಲ್ಪ ಜಾಸ್ತಿಯಾಗಿ ಹತ್ತು ಗೋಳಾಡಿದ್ದಾರೆ. ಚಿಕ್ಕ ಹುಡುಗಿಯ ಎದುರು ರಾಶಿಕಾ ಶೆಟ್ಟಿ ಇರೋದು ವೀಕ್ಷಕರಿಗೆ ನಗುತದೆ. ದೊಡ್ಡ ರಂಪಾಟವನ್ನು ಮಾಡದೆ ಸುಮ್ಮನೆ ಕೂತಿದ್ದರು. ಇದರಿಂದ ಪ್ರೇಕ್ಷಕರು ರಕ್ಷಿತಾ ಶೆಟ್ಟಿ ಅವರ ಪರ ಪ್ರೀತಿ ತೋರಿಸುತ್ತಿದ್ದಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











