BBK12: ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರಿಗೆ ರಾಜ್ ಬಿ. ಶೆಟ್ಟಿ ಅವರು ಸಿನಿಮಾ ಆಫರ್ ಕೊಟ್ಟಿದ್ದಾರೆ ಎಂಬ ವಿಚಾರದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಅಷ್ಟಕ್ಕೂ ಈ ಸುದ್ದಿ ನಿಜಾನಾ ನೋಡೋಣ…
ಮಂಗಳೂರಿನ ರಾಜ್ ಬಿ. ಶೆಟ್ಟಿ ಸಿನಿಮಾಗಳು ಅಂದ್ರೆ ಜನರ ಫೇವರೆಟ್. ಇವರ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ, ರಾಜ್ ಬಿ. ಶೆಟ್ಟಿ ಅವರ ಸಿನಿಮಾಗಳಿಗಾಗಿ ಇಡೀ ಕರುನಾಡು ಪ್ರತಿ ವರ್ಷ ಕಾಯುತ್ತಿದೆ. ಕಂಟೆಂಟ್ ಇರುವಂತಹ ಸಿನಿಮಾಗಳನ್ನು ತಯಾರು ಮಾಡುವ ಇವರು ಬಹು ಬೇಡಿಕೆಯ ನಟ ಹಾಗೂ ನಿರ್ದೇಶಕ. ಇನ್ನು ಬಿಗ್ ಬಾಸ್ ಸೀಸನ್ 12ಕ್ಕೆ ಮಂಗಳೂರಿನ ರಕ್ಷಿತಾ ಶೆಟ್ಟಿ ಅವರು ಹೋಗಿರುವುದು ನಿಮಗೆ ಗೊತ್ತೇ ಇದೆ. ಈ ಹುಡುಗಿ ಬಹಳ ಮುಗ್ಧೆ ಹಾಗೂ ತನ್ನ ಮಾತಿನಲ್ಲಿಯೇ ಜನರ ಮನಸ್ಸು ಗೆದ್ದಿದ್ದಾಳೆ. ಕನ್ನಡ, ಹಿಂದಿ, ಇಂಗ್ಲಿಷ್ ಎಲ್ಲಾ ಭಾಷೆಗಳನ್ನು ಮಿಕ್ಸ್ ಮಾಡಿ ಮಾತನಾಡುವ ಈ ಹುಡುಗಿ ಎಲ್ಲರ ಮನಸ್ಸು ಗೆದ್ದಿದ್ದಾಳೆ.
ರಕ್ಷಿತಾ ಶೆಟ್ಟಿ ಪರ ರಘು ..!
ಬಿಗ್ ಬಾಸ್ ಮನೆ ಒಳಗಡೆ ಎಂಟ್ರಿ ಆದ ನಂತರ ಈ ಹುಡುಗಿ ಹೇಗಿದ್ದಳೋ ಅದೇ ರೀತಿಯಾಗಿ ಬಿಗ್ ಬಾಸ್ ಮನೆಯಲ್ಲೂ ಕೂಡ ಹೊಂದಾಣಿಕೆಯಿಂದ ಇದ್ದಾರೆ. ಅಲ್ಲದೆ, ಸಾಕಷ್ಟು ಬಾರಿ ಜಗಳ ಕೂಡ ಮಾಡ್ತಾ ಮನೆಯಲ್ಲಿ ಕಿರುಚಾಟ ನಡೆಸುತ್ತಾಳೆ. ಇದು ಬಿಗ್ ಬಾಸ್ ಮನೆಯ ಒಳಗಡೆ ಇರುವಂತಹ ಸ್ಪರ್ಧಿಗಳಿಗೆ ಇಷ್ಟ ಆಗುತ್ತಿರಲಿಲ್ಲ. ಆದರೆ, ಈಗ ಮನೆ ಮಂದಿ ಎಲ್ಲರೂ ಕೂಡ ರಕ್ಷಿತಾ ಶೆಟ್ಟಿ ಅವರನ್ನು ಜಾಸ್ತಿಯಾಗಿ ಎಂಟರ್ರ್ಟೈನ್ ಮಾಡುವುದಿಲ್ಲ. ಎಲ್ಲರೂ ಕೂಡ ಗುಂಪಿನಲ್ಲಿ ರಕ್ಷಿತಾ ಶೆಟ್ಟಿಗೆ ಕನ್ನಡ ಚೆನ್ನಾಗಿ ಮಾತನಾಡಲು ಬರುತ್ತದೆ ಎಂದು ಟೀಕೆ ಮಾಡುತ್ತಾರೆ. ರಘು ಮಾತ್ರ ರಕ್ಷಿತಾ ಪರ ನಿಂತು ಮಾತನಾಡುತ್ತಾರೆ.
ರಕ್ಷಿತಾ ಶೆಟ್ಟಿ ಪರ ನಿಂತ ನೆಟ್ಟಿಗರು ಹೇಳೋದೇನು..?
ರಕ್ಷಿತಾ ಶೆಟ್ಟಿ ಅವರ ಬಗ್ಗೆ ಪ್ರೇಕ್ಷಕರಿಗೆ ಪ್ರೀತಿ ಹುಟ್ಟಿದೆ. ಈ ಹುಡುಗಿ ಇರುವುದೇ ಹಾಗೆ ಎಂದು ಜನರು ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತಾ ಶೆಟ್ಟಿ ಪರ ನೆಟ್ಟಿಗರು ಮಾತನಾಡುತ್ತಿದ್ದಾರೆ. ಈ ಹಿಂದೆ ಮುಖಕ್ಕೆ ಮಸಿ ಬಳಿಯುವ ಟಾಸ್ಕ್ ನಲ್ಲಿ ಅಶ್ವಿನಿ ಗೌಡ ರಕ್ಷಿತಾ ಶೆಟ್ಟಿ ಅವರ ಹೆಸರನ್ನು ತೆಗೆದುಕೊಂಡು ಮಾತಿನಲ್ಲಿ ತಿರುಗೇಟು ನೀಡಿದ್ದರು. ಯೂಟ್ಯೂಬ್ ನಾನೂ ಮಾಡ್ತಿನಿ, ಎಲ್ಲರೂ ಮಾಡ್ತಾರೆ.. ಆದರೆ ನೀನು ನಟನೆ ಮಾಡಿ ತೋರಿಸು ಎಂದು ಅಶ್ವಿನಿ ಗೌಡ ರಕ್ಷಿತಾ ಶೆಟ್ಟಿಗೆ ಅವಾಜ್ ಹಾಕಿದ್ದಾರೆ. ಇದರಿಂದ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ನಿಂದ ನಾನು ಆಚೆ ಹೋದ ತಕ್ಷಣ ಸಿನಿಮಾ ಮಾಡುವೆ ಎಂದು ವಾಪಸ್ ತಿರುಗಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗಾಗಿ, ಮಂಗಳೂರಿನ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ರಕ್ಷಿತಾ ಶೆಟ್ಟಿಗೆ ಸಿನಿಮಾ ಆಫರ್ ಕೊಟ್ಟಿದ್ದಾರೆ ಎಂದು ವದಂತಿ ಹರಿದಾಡುತ್ತಿದೆ. ಇದು ನಿಜಾನಾ ಅಥವಾ ಸುಳ್ಳಾ ಎನ್ನುವುದು ಇನ್ನು ಗೊತ್ತಾಗಬೇಕಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











